Untitled Document
Sign Up | Login    
Dynamic website and Portals
  

Related News

ಭಾರತದಲ್ಲಿ ಕ್ಷಿಪ್ರ ಪರಿವರ್ತನೆಯ ಅಗತ್ಯವಿದೆ: ಪ್ರಧಾನಿ ಮೋದಿ

ದೇಶದಲ್ಲಿ ವೇಗದ ಬದಲಾವಣೆಯ ಅಗತ್ಯವಿದೆ. ದೇಶದಲ್ಲಿ ಬದಲಾವಣೆ, ಪರಿವರ್ತನೆಯಾಗಬೇಕೆಂದರೆ ಮೊದಲು ಆಡಳಿತದಲ್ಲಿ ಕ್ಷಿಪ್ರ ಪರಿವರ್ತನೆಯಾಗಬೇಕು, ಕಾನೂನಿನಲ್ಲಿ ಬದಲಾವಣೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ದೆಹಲಿಯಲ್ಲಿ ನೀತಿ ಆಯೋಗದ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಕ್ಷಿಪ್ರ...

ಪ್ರಧಾನಿ ಮೋದಿ ಈಗ ಇನ್ ಕ್ರೆಡಿಬಲ್ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್

ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ರಮ ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿ ಯಾರಾಗಬಹುದು ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಬ್ರ್ಯಾಂಡ್ ಅಂಬಾಸಿಡರ್ ಆಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಆಯ್ಕೆ ಮಾಡಲಾಗಿದೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ತೀವ್ರ ಚರ್ಚೆಗೆ ಕಾರಣವಾಗಿದ್ದ...

ಭಾರತೀಯ ಸೇನೆ ವಿರುದ್ಧ ಘೋಷಣೆ: ಎಬಿವಿಪಿ ಪ್ರತಿಭಟನೆ; ಲಘು ಲಾಠಿ ಪ್ರಹಾರ

ಕಾಶ್ಮೀರ ವಿಚಾರ ಸಂವಾದದಲ್ಲಿ ಭಾರತೀಯ ಸೇನೆಯ ವಿರುದ್ಧ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರತಿಭಟನೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ನೆಸ್ಟಿ ಇಂಡಿಯಾ ಮತ್ತು ದಿ ಯುನೈಟೆಡ್ ಥಿಯಾಲಜಿಕಲ್ ...

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ

ಅಧೀನ ಬ್ಯಾಂಕ್​ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಜತೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ದೇಶವ್ಯಾಪಿ ಬ್ಯಾಂಕ್‌ ನೌಕರರು ಇಂದು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಯುನೈಟೆಡ್‌ ಫೋರಂ ಆಫ್ ಬ್ಯಾಂಕ್‌ ಯೂನಿಯನ್‌ (ಯುಎಫ್ಬಿಯು) ಕರೆ ಕೊಟ್ಟಿರುವ ದೇಶವ್ಯಾಪಿ...

ಟೀಮ್‌ ಇಂಡಿಯಾ ಕೋಚ್ ಆಗಿ ಕನ್ನಡಿಗ ಅನಿಲ್ ಕುಂಬ್ಳೆ ಆಯ್ಕೆ

ಭಾರತದ ಮಾಜಿ ನಾಯಕ, ಕರ್ನಾಟಕದ ಕಣ್ಮಣಿ, 'ಜಂಬೋ' ಖ್ಯಾತಿಯ ಅನಿಲ್‌ ಕುಂಬ್ಳೆ ಟೀಮ್‌ ಇಂಡಿಯಾದ ನೂತನ ತರಬೇತುದಾರನಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಬಿಸಿಸಿಐ ಸ್ಪಷ್ಟಪಡಿಸಿದೆ. ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ ಹಾಗೂ ವಿವಿಎಸ್‌ ಲಕ್ಷ್ಮಣ್‌ ಅವರನ್ನೊಳಗೊಂಡ ತ್ರಿಸದಸ್ಯ ಸಲಹಾ ಸಮಿತಿ...

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ಉದ್ಯಮಿಗಳು, ಸಂಶೋಧಕರು ಮುಖ್ಯ ಪಾತ್ರ ವಹಿಸಿದ್ದಾರೆ: ಸತ್ಯಾ ನಡೆಲ್ಲಾ

ಭಾರತೀಯ ಉದ್ಯಮಿಗಳು ಮತ್ತು ಸಂಶೋಧಕರು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಭಾರತ ಮೂಲದ ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಡೆಲ್ಲಾ ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯಲ್ಲಿ ಮೈಕ್ರೋಸಾಫ್ಟ್ ಡೆವಲಪರ್ ಸಭೆಯಲ್ಲಿ ಮಾತನಾಡಿ, ಭಾರತದ ಮೇಲೆ ಮೈಕ್ರೋಸಾಫ್ಟ್ ಗಮನ ಹರಿಸುತ್ತಿದ್ದು, ಭಾರತೀಯರ ಸಬಲೀಕರಣಕ್ಕೆ ಹೆಚ್ಚು ಒತ್ತು...

ಹಲವು ಸಾಧನೆಗಳ ಜೊತೆ 2 ವರ್ಷ ಪೂರೈಸಿದ ಮೋದಿ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡು ವರ್ಷಗಳ ಸಂಭ್ರಮ. ಎರಡು ವಸಂತಗಳನ್ನು ಪೂರೈಸಿರುವ ಈ ಸರ್ಕಾರ ಸಾಕಷ್ಟು ಸಾಧನೆ ಮಾಡಿದೆ. ದೆಹಲಿ, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎದುರಾದ ಸೋಲನ್ನೇ ಸವಾಲಾಗಿ ಸ್ವೀಕರಿಸಿದ ಬಿಜೆಪಿ...

ಪ್ರಧಾನಿ ನರೇಂದ್ರ ಮೋದಿಯಿಂದ ಟ್ರ್ಯಾನ್ಸ್​ ಫಾರ್ವಿುಂಗ್ ಇಂಡಿಯಾ ಗೀತೆ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವಸಂತಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ, ಟ್ರ್ಯಾನ್ಸ್​ ಫಾರ್ವಿುಂಗ್ ಇಂಡಿಯಾ ರಾಷ್ಟ್ರಗೀತೆ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ. ಸರ್ಕಾರದ ಸಂಭ್ರಮಾಚರಣೆಯನ್ನು ಹಂಚಿಕೊಂಡಿರುವ ಮೋದಿ, ಮೇರಾ ದೇಶ್...

ಕೇಂದ್ರ ಎನ್.ಡಿ.ಎ ಸರ್ಕಾರಕ್ಕೆ 2 ವರ್ಷ ಹಿನ್ನಲೆ: ಝರಾ ಮುಸ್ಕುರಾದೋ ಅಭಿಯಾನಕ್ಕೆ ನಿರ್ಧಾರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್.ಡಿ.ಎ ಸರ್ಕಾರ ಮೇ ತಿಂಗಳಿಗೆ ಎರಡು ವರ್ಷ ಪೂರೈಸಲಿರುವ ಹಿನ್ನಲೆಯಲ್ಲಿ ಝರಾ ಮುಸ್ಕುರಾದೋ ಎಂಬ ಅಭಿಯಾನ ನಡೆಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಎರಡು ವರ್ಷಗಳ ತಮ್ಮ ಸರ್ಕಾರದ ಯಶಸ್ಸಿನ ಬಗ್ಗೆ ಹಂಚಿಕೊಳ್ಳುವ ಸಲುವಾಗಿ ಮೇ.26 ರಂದು...

ಏ.5ಕ್ಕೆ ದೇಶದ ಮೊದಲ ಸೆಮಿ-ಹೈಸ್ಪೀಡ್‌ ರೈಲು ಗತಿಮಾನ್‌ ಎಕ್ಸ್‌ಪ್ರೆಸ್ ಗೆ ಚಾಲನೆ

ದೇಶದ ಮೊದಲ ಸೆಮಿ- ಹೈಸ್ಪೀಡ್‌ ರೈಲು ಎಂಬ ಹೆಗ್ಗಳಿಕೆ ಹೊಂದಿರುವ 'ಗತಿಮಾನ್‌ ಎಕ್ಸ್‌ಪ್ರೆಸ್‌'ಗೆ ಏ.5ರಂದು ಚಾಲನೆ ದೊರೆಯಲಿದೆ. ದೆಹಲಿ ಮತ್ತು ಆಗ್ರಾ ನಡುವೆ ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸಲಿರುವ ಈ ರೈಲು 105-110 ನಿಮಿಷದಲ್ಲಿ 184 ಕಿ.ಮೀ. ದೂರವನ್ನು ಕ್ರಮಿಸಲಿದೆ. ಗತಿಮಾನ್‌...

ಕೇವಲ 251 ರೂ ಗೆ ಸ್ಮಾರ್ಟ್‌ಫೋನ್‌ ಬುಕ್ ಮಾಡಿ

ವಿಶ್ವದಲ್ಲೇ ಅತೀ ಕಡಿಮೆ ಬೆಲೆಯ ಸ್ಮಾರ್ಟ್‌ಫೋನನ್ನು ದೇಶೀಯ ಹೆಡ್‌ ಸೆಟ್‌ ತಯಾರಿಕಾ ಕಂಪೆನಿ ರಿಂಗಿಂಗ್‌ ಬೆಲ್ಸ್‌ ಬುಧವಾರ ಸಂಜೆ ಬಿಡುಗಡೆ ಮಾಡುತ್ತಿದೆ. ಫ್ರೀಡಂ 251 ಹೆಸರಿನ ಈ ಸ್ಮಾರ್ಟ್‌ಫೋನನ್ನು 500 ರೂ. ಗೂ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ...

ಮೇಕ್ ಇನ್ ಇಂಡಿಯಾ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಭಾರಿ ಬೆಂಕಿ

ಮುಂಬಯಿನಲ್ಲಿ ಭಾನುವಾರ ಸಂಜೆ ನಡೆಯುತ್ತಿದ್ದ ಮೇಕ್ ಇನ್ ಇಂಡಿಯಾ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಭಾರೀ ಬೆಂಕಿ ಭುಗಿಲೆದ್ದಿತು. ಬೆಂಕಿ ತೀವ್ರ ಸ್ವರೂಪದ್ದಾಗಿದ್ದು, ಸಂಪೂರ್ಣ ವೇದಿಕೆ ಬೆಂಕಿಗೆ ಆಹುತಿಯಾಗಿದೆ. ಆದರೆ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ...

ಅಮೀರ್ ಖಾನ್ ಪಿಕೆ ಪ್ರಚಾರಕ್ಕೆ ಪಾಕಿಸ್ತಾನದ ಐ ಎಸ್ ಐ ಜೊತೆ ಸೇರಿಕೊಂಡಿದ್ದರು ಸುಬ್ರಮಣ್ಯ ಸ್ವಾಮಿ

ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಚಿತ್ರ ಪಿಕೆ ಪ್ರಚಾರಕ್ಕೆ ಪಾಕಿಸ್ತಾನದ ಐ ಎಸ್ ಐ ಜೊತೆ ಸೇರಿಕೊಂಡಿದ್ದರು ಎಂದು ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ. ಅಮೀರ್ ಖಾನ್ ಭಾರತದ ಘನತೆ ಬಗ್ಗೆ ತನ್ನ ಪತ್ನಿಗೆ ಬೋಧಿಸಬೇಕೆಂಬ ರಾಮ್ ಮಾಧವ್ ಹೇಳಿಕೆಗೆ...

ಅಮಿತಾಬ್ ಬಚ್ಚನ್ ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ನೂತನ ರಾಯಭಾರಿಯಾಗುವ ಸಾಧ್ಯತೆ

ನಟ, ಗುಜರಾತ್ ಪ್ರವಾಸೋದ್ಯಮದ ರಾಯಭಾರಿ ಅಮಿತಾಬ್ ಬಚ್ಚನ್, ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ನೂತನ ರಾಯಭಾರಿಯಾಗುವ ಸಾಧ್ಯತೆ ಇದೆ. ನಟ ಅಮೀರ್ ಖಾನ್ ಒಪ್ಪಂದ ಮುಗಿದ ಹಿನ್ನಲೆಯಲ್ಲಿ ಅಮಿತಾಬ್ ಬಚ್ಚನ್ ಅನ್ನು ಮೋದಿ ಸರ್ಕಾರ ನೂತನ ರಾಯಭಾರಿಯಾಗಿ ಆಯ್ಕೆ ಮಾಡುವ ಸಾಧ್ಯತೆ...

ಧೋನಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

ಪತ್ರಿಕೆಯ ಮುಖಪುಟದಲ್ಲಿ ವಿಷ್ಣುವಿನ ಹಾಗೆ ಕಾಣಿಸಿಕೊಂಡ ಕುರಿತು ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಆಂಧ್ರಪ್ರದೇಶದ ಅನಂತಪುರಂ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಫೆಬ್ರುವರಿ 25ರಂದು ಖುದ್ದು ಕೋರ್ಟ್ ಗೆ ಹಾಜರಾಗುವಂತೆ ಸೂಚನೆ ನೀಡಿದೆ 2013ರ ಏಪ್ರಿಲ್...

ಪ್ರಧಾನಿ ಮೋದಿ ನಿರ್ಧಾರಗಳು ಬುಲೆಟ್ ರೈಲಿನಷ್ಟು ವೇಗ ಮತ್ತು ವಿಶ್ವಾಸಾರ್ಹಃ ಜಪಾನ್ ಪ್ರಧಾನಿ ಶಿಂಜೋ ಅಬೆ

ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಶನಿವಾರ ಬಿಜಿನೆಸ್ ಲೀಡರ್ಸ್ ಫೊರಮ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಪಾನ್ ಪ್ರಧಾನಿ ಸಿಂಜೋ ಅಬೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರ...

ಸಿಂಗಾಪುರದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಿಂಗಾಪುರದ ಅಧ್ಯಕ್ಷ ಟೋನಿ ಟಾನ್ ಕೆಂಗ್ ಯಾಮ್ ಅವರನ್ನು ಭೇಟಿ ಮಾಡಿದ್ದಾರೆ. ಕಳೆದ ಸಂಜೆ ಸಿಂಗಾಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಷ್ಠಿತ ಸಿಂಗಾಪುರ್ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದರು. ನಂತರ ಸಿಂಗಾಪುರದ...

ಭಾರತಕ್ಕೆ ಬಂದು ಬದಲಾವಣೆಯ ಗಾಳಿಯನ್ನು ನೋಡಿಃ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಹೂಡಿಕೆ ಸಮುದಾಯಕ್ಕೆ ಭಾರತದಲ್ಲಿ ಬಂದು ಹೂಡಿಕೆ ಮಾಡಿ ಎಂದು ಶನಿವಾರ ಕರೆ ನೀಡಿದರು. ಎಲ್ಲಾ ಆರ್ಥಿಕ ಸೂಚಕದ ಪ್ರಕಾರ ನಾವು 18 ತಿಂಗಳ ಮೊದಲು ಅಧಿಕಾರವಹಿಸಿಕೊಂಡ ಸಮಯಕ್ಕಿಂತ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ...

ಆರ್ಥಿಕ ಬೆಳವಣಿಗೆಗಾಗಿ ಅನೇಕ ಸುಧಾರಣೆಗಳಿಗೆ ಅಸ್ತು ಹೇಳಿದ ಮೋದಿ ಸರ್ಕಾರ

ಕೇಂದ್ರ ಸರ್ಕಾರ ಬುಧವಾರ ಅನೇಕ ನೀತಿ ಬದಲಾವಣೆಗಳನ್ನು ಘೋಷಿಸಿದೆ. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ಕೋಲ್ ಇಂಡಿಯಾ ಲಿಮಿಟೆಡ್ ನ ಶೇ 10 ರಷ್ಟು ಪಾಲು ಮಾರಾಟ, ಕೊಚ್ಚಿನ್ ಶಿಪ್ ಯಾರ್ಡ್ ಗೆ ಸಾರ್ವಜನಿಕ ಶೇರು, ಕುಸಿಯುತ್ತಿರುವ ರಫ್ತಿಗೆ ಉತ್ತೇಜನ ನೀಡಲು...

ಭಾರತ ಒಂದು ದೊಡ್ಡ ತಂತ್ರಜ್ಞಾನ ಕ್ರಾಂತಿಯ ಹೊಸ್ತಿಲಲ್ಲಿದೆಃ ಪ್ರಧಾನಿ ನರೇಂದ್ರ ಮೋದಿ

ಮಂಗಳವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಬೆಂಗಳೂರು ಮೇಯರ್ ಮಂಜುನಾಥ್ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಲಾದ್ ಜೋಷಿ,...

ಬೆಂಗಳೂರಿಗೆ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್, ಪ್ರಧಾನಿ ನರೇಂದ್ರ ಮೋದಿ ಭೇಟಿ

ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಭಾನುವಾರ ರಾತ್ರಿ ದೆಹಲಿಗೆ ಆಗಮಿಸಿದ್ದು, ಸೋಮವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಅವರನ್ನು ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿದ್ದರು. ತಮ್ಮ ಮೂರು ದಿನದ ಭಾರತ ಪ್ರವಾಸದ ಸಂದರ್ಭದಲ್ಲಿ ಜರ್ಮನ್...

ಫೇಸ್ ಬುಕ್, ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂ ನಮ್ಮ ಹೊಸ ನೆರೆಹೊರೆಯವರುಃ ಪ್ರಧಾನಿ ನರೇಂದ್ರ ಮೋದಿ

ಯುಎಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಯೋಜನೆಯ ಅಂಗವಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಜಗದ್ವಿಖ್ಯಾತಿ ಗಳಿಸಿರುವ ಸಿಲಿಕಾನ್‌ ವ್ಯಾಲಿಯಲ್ಲಿ ಐಟಿ ದಿಗ್ಗಜ ಕಂಪೆನಿಗಳ ಸಿಇಓಗಳನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಉದ್ಯಮ ದಿಗ್ಗಜರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ...

ಆಡಳಿತದಲ್ಲಿ ಸುಧಾರಣೆ ತರುವುದು ನನ್ನ ಮೊತ್ತ ಮೊದಲ ಆದ್ಯತೆ ಫಾರ್ಚೂನ್ 500 ಸಿಇಓಗಳಿಗೆ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್ ನಲ್ಲಿ ಅಗ್ರ ಸಿಇಓಗಳನ್ನು ಭೇಟಿ ಮಾಡಿ, ಭಾರತದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ವಿವರಿಸುವುದರ ಜೊತೆಗೆ ಮೇಕ್ ಇನ್ ಇಂಡಿಯಾ ಕ್ಕೆ ಆಹ್ವಾನಿಸಿದರು. ಆಡಳಿತದಲ್ಲಿ ಸುಧಾರಣೆ ತರುವುದು ನನ್ನ ಮೊತ್ತ ಮೊದಲ ಆದ್ಯತೆ. ನಾವು ಸರಳೀಕೃತ...

ಇಂಡಿಯಾ ಐ ಎನ್ ಸಿ ಜೊತೆ ಪ್ರಧಾನಿ ಮೋದಿ ಮಾತುಕತೆ

ಜಾಗತಿಕ ಆರ್ಥಿಕ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಭಾರತ ಹೇಗೆ ನಿರ್ವಹಿಸಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಂಡಿಯಾ ಐ ಎನ್ ಸಿ ಯ ಸಭೆ ಕರೆದಿದ್ದರು. ಜೊತೆಗೆ ಚೀನಾದ ಮಾರುಕಟ್ಟೆ ಮತ್ತು ಅಭಿವೃದ್ಧಿ ಸಮಸ್ಯೆಗಳಿಂದ ಭಾರತದ ಮುಂದಿರುವ...

ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಹೂಡಿಕೆಗೆ ಯುಎಇ ಉತ್ಸಾಹ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಂಯುಕ್ತ ಅರಬ್ ಎಮಿರೇಟ್ (ಯುಎಇ) ಗೆ ಎರಡು ದಿನಗಳ ಐತಿಹಾಸಿಕ ಭೇಟಿ ನೀಡಿದ್ದರ ಫಲ ಈಗ ಕಾಣತೊಡಗಿದೆ. ಪ್ರಧಾನಿ ಮೋದಿ ಭೇಟಿಯ ವೇಳೆ ಯುಎಇ ಭಾರತದಲ್ಲಿ 75ಬಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಹೂಡಿಕೆ ಮಾಡುವುದಾಗಿ ವಾಗ್ದಾನ...

ಸ್ಟಾರ್ಟ್ ಅಪ್ ಇಂಡಿಯಾ ಸ್ಟಾಂಡ್ ಅಪ್ ಇಂಡಿಯಾ ಪ್ರಧಾನಿ ನರೇಂದ್ರ ಮೋದಿ ಹೊಸ ಘೋಷ ವಾಕ್ಯ

69 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿ ತಮ್ಮ ಎರಡನೇ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಪ್ರಮುಖಾಂಶಗಳು ಇಂತಿವೆ. ಭಾಷಣದ ಪ್ರಮುಖಾಂಶಗಳು ಃ * ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಶುಭಾಷಯಗಳು *...

ಮಹಾರಾಷ್ಟ್ರದಲ್ಲಿ 5ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಫಾಕ್ಸ್ ಕಾನ್ ಒಪ್ಪಂದ

ಪ್ರಧಾನಿ ನರೇಂದ್ರ ಮೋದಿಯವರ ಕನಸಾದ 'ಮೇಕ್ ಇನ್ ಇಂಡಿಯಾ' ಯೋಜನೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಭೇಟಿ ನೀಡಿದ ದೇಶಗಳಿಂದ ಭಾರತಕ್ಕೆ ಈಗಾಗಲೇ 20 ಬಿಲಿಯನ್ ಡಾಲರ್ ಗೂ ಅಧಿಕ ಮೊತ್ತದ ವಿದೇಶಿ ಬಂಡವಾಳ ಹೂಡಿಕೆಯ...

ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚೆನ್ನೈನಲ್ಲಿ ಮೊದಲ ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ನರೆಂದ್ರ ಮೋದಿ ಅವರ ಒಂದು ದಿನದ ಭೇಟಿಯ ಹಿನ್ನಲೆಯಲ್ಲಿ ನಗರದಾದ್ಯಂತ ಬಿಗಿ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ನರೇಂದ್ತ ಮೋದಿ ಅವರು ಕೈಮಗ್ಗ ನೇಕಾರರಿಗೆ...

ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಜುಲೈ 1 ರಂದು ಚಾಲನೆ ನೀಡಲಿದ್ದಾರೆ. ನವದೆಹಲಿಯ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ, ಸಂಜೆ 4 ಗಂಟೆಗೆ ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ನೂರಾರು ಕೋಟಿ...

ಡಿಜಿಟಲ್ ಇಂಡಿಯಾದ ಮೂಲಕ ಇಡೀ ಭಾರತವನ್ನು ಒಗ್ಗೂಡಿಸುವುದು ನನ್ನ ಕನಸುಃಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಜುಲೈ 1 ರಂದು ಚಾಲನೆ ನೀಡಿದರು. 2.5 ಲಕ್ಷ ಹಳ್ಳಿಗಳಲ್ಲಿ ಬ್ರೋಡ್ ಬ್ಯಾಂಡ್ ಸೇವೆ ಕಲ್ಪಿಸುವ ಯೋಜನೆಯನ್ನು ಕೈಗಾರಿಕೋದ್ಯಮಿಗಳಾದ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಭಾರತೀ ಗ್ರೂಪ್...

ಮಧ್ಯರಾತ್ರಿ ಬಾಗಿಲು ತಟ್ಟಿದರೂ ಸಮಸ್ಯೆ ಆಲಿಸಲು ಸಿದ್ಧ: ಪ್ರಧಾನಿ ಮೋದಿ ಭರವಸೆ

ಯಾವುದೇ ಸಮಸ್ಯೆ ಇರಲಿ, ಮಧ್ಯರಾತ್ರಿ ಬಂದು ನನ್ನ ಮನೆ ಬಾಗಿಲು ತಟ್ಟಿ, ನಾನು ನಿಮ್ಮ ಅಹವಾಲು ಸ್ವೀಕರಿಸಲು ಸದಾ ಸಿದ್ಧನಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮ್ ಮುಖಂಡರ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ ಮುಖ್ಯಸ್ಥ ಉಮರ್ ಅಹ್ಮದ್...

ಏರ್ ಇಂಡಿಯಾ ಸಿಬ್ಬಂದಿಗಳಿಗೆ ಯೋಗಾಭ್ಯಾಸ ಕಡ್ಡಾಯ

ಜೂ.21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾಗೆ ಹೊಸದಾಗಿ ಆಯ್ಕೆಯಾದ ಸಿಬ್ಬಂದಿಗೆ ಯೋಗಾಭ್ಯಾಸ ಕಡ್ಡಾಯ ಮಾಡಲಾಗಿದೆ. ಸದ್ಯ ತರಬೇತಿ ಪಡೆಯುತ್ತಿರುವ ಪೈಲಟ್ ಗಳು ಮತ್ತು ವಿಮಾನ ಸಿಬ್ಬಂದಿ ಸೋಮವಾರದಿಂದ ಪ್ರತಿದಿನ ಬೆಳಗ್ಗೆ 6.30ಕ್ಕೆ ಯೋಗ ಮಾಡಲೇಬೇಕು ಎಂದು ಸೂಚಿಸಲಾಗಿದೆ....

ಪ್ರಧಾನಿ ಮೋದಿ ಸರ್ಕಾರದ ಪ್ರಮುಖ ಸಾಧನೆಗಳ ಪಟ್ಟಿ

ಕೇಂದ್ರ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದ ಪ್ರಮುಖ 13 ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ. ಇದರಲ್ಲಿ ಅವರು ತಮ್ಮ ಮಹತ್ವಾಕಾಂಕ್ಷಿ ಯೋಜನೆಗಳಾದ ಮೇಕ್‌ ಇನ್‌ ಇಂಡಿಯಾ,...

ಚೀನಾದಲ್ಲಿ ಸಿಇಒಗಳ ಸಭೆ: ಮೇಕ್ ಇನ್ ಇಂಡಿಯಾದಲ್ಲಿ ಕೈಜೋಡಿಸುವಂತೆ ಮೋದಿ ಕರೆ

ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಶಾಂಘೈನಲ್ಲಿ ಚೀನಾದ ಪ್ರತಿಷ್ಠಿತ 20ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳ ಜತೆ ಸಭೆ ನಡೆಸಿದ್ದಾರೆ. ಸಿಇಒಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಬಂಡವಾಳ ಹೂಡುವಂತೆ ಆಹ್ವಾನ ನೀಡಿದ್ದಾರೆ. ನಿಜಕ್ಕೂ ಇದೊಂದು ಐತಿಹಾಸಿಕ ಸಭೆಯಾಗಿದ್ದು, ಹೊಸ ಹೊಸ...

ಚೀನಾದಲ್ಲಿ ಮೋದಿ: 22 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದಗಳಿಗೆ ಭಾರತ-ಚೀನಾ ಸಹಿ

ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೂರನೇ ಹಾಗೂ ಕಡೆಯ ದಿನವಾದ ಶನಿವಾರ ಭಾರತ-ಚೀನಾ ವ್ಯವಹಾರ ವೇದಿಕೆಯಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ 22 ಬಿಲಿಯನ್ ಡಾಲರ್ ಮೌಲ್ಯದ 21 ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಿಲಾಗಿದೆ. ಭಾರತ-ಚೀನಾ ವ್ಯವಹಾರ ವೇದಿಕೆಯನ್ನು...

ಇಂದಿನಿಂದ ಪ್ರಧಾನಿ ಮೋದಿ ಚೀನಾ ಪ್ರವಾಸ :ಹೆಚ್ಚಿದ ನಿರೀಕ್ಷೆ

ಪ್ರಧಾನಿ ನರೇಂದ್ರ ಮೋದಿ ಅವರ ಆರು ದಿನಗಳ ಮೂರು ರಾಷ್ಟ್ರಗಳ ಪ್ರವಾಸ ಗುರುವಾರ ಚೀನಾ ಭೇಟಿಯೊಂದಿಗೆ ಆರಂಭವಾಗಲಿದೆ. ಮೋದಲಿಗೆ ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರ ತವರೂರಾಗಿರುವ ಐತಿಹಾಸಿಕ ನಗರಿ ಕ್ಸಿಯಾನ್‌ ಗೆ ನೇರವಾಗಿ...

ದೇಶದ ಸಮಗ್ರ ಅಭಿವೃದ್ದಿಗೆ 'ಟೀಮ್‌ ಇಂಡಿಯಾ' ಸ್ಪೂರ್ತಿ ಅಗತ್ಯ: ಪ್ರಧಾನಿ ಮೋದಿ

ಭಾರತವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಲು 'ಟೀಮ್‌ ಇಂಡಿಯಾ' ಸ್ಪೂರ್ತಿಯೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯಶೀಲವಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಬರ್‍ನಾಪುರದಲ್ಲಿ 16,840 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಭಾರತದ ಉಕ್ಕು ಪ್ರಾಧಿಕಾರದ ನವೀನ...

ನರೇಂದ್ರ ಮೋದಿ ಭಾರತದ ಸುಧಾರಣೆಯ ಮುಖ್ಯಸ್ಥ: ಬರಾಕ್ ಒಬಾಮ ಬಣ್ಣನೆ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಅತ್ಯುತ್ತಮ ಸ್ನೇಹ ಸಂಬಂಧವನ್ನು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಪ್ರತಿಷ್ಠಿತ ಟೈಮ್ ಮ್ಯಾಗಜೀನ್ ಗೆ ಮೋದಿ ಕುರಿತು ವ್ಯಕ್ತಿಚಿತ್ರಣವನ್ನು( profile write up) ಬರೆದಿದ್ದು, ಮೋದಿಯವರನ್ನು ಭಾರತದ ಸುಧಾರಣೆಯ ಮುಖ್ಯಸ್ಥ (India’s...

ದರೋಡೆಕೋರರಿಂದ ರಕ್ಷಣೆ ನೀಡುವ ಹೋಮ್ ಗಾರ್ಡ್ ಉಪಕರಣ ಲೋಕಾರ್ಪಣೆ

ದರೋಡೆಕೋರರಿಂದ ಮನೆಯನ್ನು ಸಂಪೂರ್ಣವಾಗಿ ಸಂರಕ್ಷಿಸಲು ಅಭಿವೃದ್ಧಿ ಪಡಿಸಲಾಗಿರುವ ಎಲೆಕ್ಟ್ರಾನಿಕ್ ಉಪಕರಣವನ್ನು ಖ್ಯಾತ ಚಿತ್ರ ತಾರೆ ಹಾಗೂ ರಾಜ್ಯ ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ ಅವರು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಿದರು. ಈ ಉಪಕರಣ ವಾಣಿಜ್ಯ ಸ್ವರೂಪದ್ದಾದರೂ ಇದರ ಸಾಮಾಜಿಕ ಉಪಯುಕ್ತತೆ, ಶ್ರೀಸಾಮಾನ್ಯರಿಗೂ...

ಭಾರತದ ಸಿಂಹ ಹಾಗೂ ಜರ್ಮನಿಯ ಗರುಡ ಅತ್ಯುತ್ತಮ ಸಹಭಾಗಿಗಳಾಗಬಲ್ಲವು: ಪ್ರಧಾನಿ ಮೋದಿ

ಭಾರತದ ಸಿಂಹ ಹಾಗೂ ಜರ್ಮನಿಯ ಗರುಡ ಜಗತ್ತಿನಲ್ಲಿ ಅತ್ಯುತ್ತಮ ಸಹಭಾಗಿಗಳಾಗಬಲ್ಲವು ಎಂದು ಹೇಳುವ ಮೂಲಕ ಭಾರತ ಹಾಗೂ ಜರ್ಮನಿ ಮುಂದಿನ ದಿನಗಳಲ್ಲಿ ವಿಶ್ವದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಏ.14ರಂದು ಮೂರು ದಿನಗಳ ಜರ್ಮನ್ ಪ್ರವಾಸ ಮುಕ್ತಾಯಗೊಳಿಸಿರುವ...

ಜರ್ಮನಿಗರೇ ಭಾರತದಲ್ಲಿ ಹೂಡಿಕೆ ಮಾಡಿ:ಪ್ರಧಾನಿ ಮೋದಿ ಆಹ್ವಾನ

ಜರ್ಮನಿಗರೇ ಭಾರತದಲ್ಲಿ ಹೂಡಿಕೆ ಮಾಡಿ. ಹೂಡಿಕೆ ಮಾಡಲು ಪ್ರಸಕ್ತ ವಾತಾವರಣವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜರ್ಮನ್ ಉದ್ದಿಮೆದಾರರಿಗೆ ಆಹ್ವಾನ ನೀಡಿದ್ದಾರೆ. ಹ್ಯಾನೋವರ್ ನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ, ಇಂಡೋ-ಜರ್ಮನ್ ವ್ಯಾಪಾರಿ ಮೇಳದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ವೇಳೆ ಇಂಡಿಯಾ...

ಮೇಕ್‌ ಇನ್‌ ಇಂಡಿಯಾಗೆ ಸಹಕಾರ ನೀಡಲು ಫ್ರಾನ್ಸ್‌ ನಿರ್ಧಾರ

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಫ್ರಾನ್ಸ್‌ ಪ್ರವಾಸವು ಫ‌ಲಪ್ರದವಾಗಿದ್ದು, ಫ್ರಾನ್ಸ್‌ ಸರ್ಕಾರ ಮತ್ತು ಅಲ್ಲಿನ ಕಂಪನಿಗಳು ಮೋದಿ ಅವರ ’ಮೇಕ್‌ ಇನ್‌ ಇಂಡಿಯಾ' ಯೋಜನೆಗೆ ಸಹಕಾರ ನೀಡಲು ಭರವಸೆ ವ್ಯಕ್ತಪಡಿಸಿವೆ. 'ಮೇಕ್‌ ಇಂಡಿಯಾ'ಗೆ ಬೆಂಬಲ ಘೋಷಿಸಿರುವ ಪ್ರಸಿದ್ಧ ವಿಮಾನ ಉತ್ಪಾದನಾ ಕಂಪನಿ...

ಪ್ರಧಾನಿ ನರೇಂದ್ರ ಮೋದಿ ತ್ರಿರಾಷ್ಟ್ರ ಪ್ರವಾಸ ಇಂದಿನಿಂದ ಆರಂಭ

ಪ್ರಧಾನಿ ನರೇಂದ್ರ ಮೋದಿ ಅವರ 9 ದಿನಗಳ ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ಪ್ರವಾಸವು ಏ.9ರಿಂದ ಆರಂಭವಾಗಲಿದೆ. ದೇಶದ ಮೂಲ ಸೌಕರ್ಯ, ಹೂಡಿಕೆ, ರಕ್ಷಣಾ ವಲಯಗಳ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರವಾಸಕ್ಕೆ ಒತ್ತು ನೀಡಲಾಗಿದೆ. ಮೊದಲ ಹಂತದಲ್ಲಿ ಫ್ರಾನ್ಸ್‌ ಗೆ ತೆರಳಲಿರುವ ಮೋದಿ, ಆರ್ಥಿಕತೆ,...

ಏರ್‌ ಇಂಡಿಯಾ ಪೈಲಟ್‌ ನ ಸಮಯಪ್ರಜ್ಞೆ: ತಪ್ಪಿದ ಅನಾಹುತ

ಅಮೇರಿಕಾದ ನೆವಾರ್ಕ್‌ ನಿಂದ 250 ಪ್ರಯಾಣಿಕರನ್ನು ಹೊತ್ತು ಮುಂಬೈಗೆ ಬರುತ್ತಿದ್ದ ಏರ್‌ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ವಿಮಾನ ಹಾರಾಟ ಆರಂಭಿಸಿ 29.000 ಫೀಟ್‌ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಇಂಜಿನ್‌ ನಲ್ಲಿ ದೋಷ...

ಸಿಬಿಐ ನಿಂದ ತಪ್ಪಿಸಿಕೊಳ್ಳಲು ಮೋದಿಯೊಂದಿಗೆ ಸ್ನೇಹ ಬಯಸುತ್ತಿರುವ ಮುಲಾಯಂ ಸಿಂಗ್ ಯಾದವ್

ತಮ್ಮ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ ನಿಂದ ತಪ್ಪಿಸಿಕೊಳ್ಳಲು ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ನೇಹ ಬೆಳೆಸಲು ಮುಂದಾಗಿದ್ದಾರೆ. ಈ ಹಿಂದೆ ಛಿದ್ರಗೊಂಡಿದ್ದ ಜನತಾ ಪರಿವಾರ...

ಬಟ್ಟೆ ಶೋ ರೂಮ್ ನ ಟ್ರಯಲ್ ರೂಂ ನಲ್ಲಿ ಹಿಡನ್ ಕ್ಯಾಮರ ಪತ್ತೆ ಮಾಡಿದ ಸ್ಮೃತಿ ಇರಾನಿ

ಬಟ್ಟೆ ಶೋ ರೂಂ ನ ಟ್ರಯಲ್ ರೂಂ ನಲ್ಲಿ ಹಿಡನ್ ಕ್ಯಾಮರಾ ಇರುವುದನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಪತ್ತೆ ಹಚ್ಚಿದ್ದಾರೆ. ಗೋವಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಬಟ್ಟೆ ಖರೀದಿಸಲು ಫ್ಯಾಬ್ ಇಂಡಿಯಾ ಶೋ ರೂಂಗೆ ತೆರಳಿದ್ದ...

ಏರ್ ಇಂಡಿಯಾ ವಿಮಾನ ಹೈಜಾಕ್‍ ಮಾಡಲು ಪಾಕ್ ಯತ್ನ

ನೌಕಾಪಡೆಯ ವರ್ಷ ಯೋಜನೆಗೆ ಕಣ್ಣು ಹಾಕಿದ್ದ ಪಾಕಿಸ್ತಾನ ಈಗ, ಏರ್‍ ಇಂಡಿಯಾ ವಿಮಾನ ಹೈಜಾಕ್ ಮಾಡಲು ಯತ್ನಿಸಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಲಂಡನ್‍ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ರೋಗಿ ಮತ್ತು ವೈದ್ಯರಂತೆ ನಟಿಸಿಕೊಂಡು ಐವರು ಪಾಕಿಸ್ತಾನಿ...

ಖಾಸಗಿ ಎಫ್.ಎಂ.ರೇಡಿಯೋದಲ್ಲಿ ಸುದ್ದಿ ಪ್ರಸಾರಕ್ಕೆ ಕೇಂದ್ರದ ಅನುಮತಿ ಶೀಘ್ರ

ಕೆಲವೊಂದು ಷರತ್ತುಗಳೊಂದಿಗೆ ಖಾಸಗಿ ಎಫ್.ಎಂ.ರೇಡಿಯೋ ವಾಹಿನಿಗಳಿಗೆ ಸುದ್ದಿಗಳನ್ನು ಪ್ರಸಾರಿಸಲು ಅನುಮತಿ ನೀಡುವ ಪ್ರಸ್ತಾವ ತನ್ನ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸರಕಾರ ಲೋಕಸಭೆಗೆ ತಿಳಿಸಿದೆ. ಎಫ್.ಎಂ.ರೇಡಿಯೋ ಎರಡನೇ ಹಂತದ ಯೋಜನೆಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಖಾಸಗಿ ಎಫ್.ಎಂ.ರೇಡಿಯೋ ವಾಹಿನಿಗಳಿಗೆ ಸುದ್ದಿಗಳನ್ನು ಬಿತ್ತರಿಸಲು ಅವಕಾಶ ಇಲ್ಲವಾಗಿದೆ....

ಯು.ಕೆ ಡಾಟರ್ಸ್ : ಇಂಡಿಯಾಸ್ ಡಾಟರ್ ಗೆ ಸಾಕ್ಷ್ಯಚಿತ್ರದ ಮೂಲಕವೇ ಪ್ರತಿಕ್ರಿಯೆ

ಭಾರತದ ಮಗಳು(ಇಂಡಿಯಾಸ್ ಡಾಟರ್) ಸಾಕ್ಷ್ಯಚಿತ್ರಕ್ಕೆ ಭಾರತೀಯರಾದ ಹರ್ವಿಂದರ್ ಸಿಂಗ್ ಎಂಬುವವರು ಸಾಕ್ಷ್ಯಚಿತ್ರದ ಮೂಲಕವೇ ಪ್ರತಿಕ್ರಿಯೆ ನೀಡಿದ್ದು, ಯುನೈಟೆಡ್ ಕಿಂಗ್ಡಮ್ ಡಾಟರ್ಸ್( ಯು.ಕೆ ಹೆಣ್ಣುಮಕ್ಕಳು) ಮೂಲಕ ಅಲ್ಲಿನ ಹೆಣ್ಣುಮಕ್ಕಳ ಸ್ಥಿತಿಯನ್ನು ಬಯಲಿಗೆಳೆದಿದ್ದಾರೆ. ಯು.ಕೆಯಲ್ಲಿರುವ ಹೆಣ್ಣುಮಕ್ಕಳ ಸ್ಥಿತಿ ಭಾರತೀಯ ಹೆಣ್ಣುಮಕ್ಕಳ ಸ್ಥಿತಿಗಿಂತಲೂ...

ಭಾರತದ ನ್ಯಾಯಾಲಯಗಳು ಸರ್ಕಾರದ ಕೈಗೊಂಬೆಯಲ್ಲ, ನಿಷೇಧ ಹೆಚ್ಚು ದಿನ ಇರಲ್ಲ:ಲೆಸ್ಲಿ ಉಡ್ವಿನ್

ಭಾರತದ ನ್ಯಾಯಾಲಯಗಳು ಸರ್ಕಾರದ ಕೈಗೊಂಬೆಗಳಲ್ಲದ ಕಾರಣ ಬಿಬಿಸಿ ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರಕ್ಕೆ ಭಾರತದಲ್ಲಿ ಹೇರಿರುವ ನಿಷೇಧ ದೀರ್ಘಾವಧಿಯವರೆಗೂ ಮುಂದುವರೆಯುವುದಿಲ್ಲ ಎಂದು ಲೆಸ್ಲಿ ಉಡ್ವಿನ್ ಹೇಳಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಸಂದರ್ಶನದಲ್ಲಿ ಸಾಕ್ಷ್ಯಚಿತ್ರಕ್ಕೆ ವಿಧಿಸಿರುವ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿರುವ ಲೆಸ್ಲಿ ಉಡ್ವಿನ್...

ನಿಷೇಧದಿಂದಲೇ ಇಂಡಿಯಾಸ್ ಡಾಟರ್ ಅತಿ ಹೆಚ್ಚು ಪ್ರಚಾರ ಪಡೆಯಿತು: ಲೆಸ್ಲಿ ಉಡ್ವಿನ್

'ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರ ಅತಿ ಹೆಚ್ಚು ವೀಕ್ಷಣೆಯಾಗಿರುವುದಕ್ಕೆ ಭಾರತ ಸರ್ಕಾರ ನಿಷೇಧ ಹೇರಿರುವುದೇ ಕಾರಣ ಎಂದು ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಹೇಳಿದ್ದಾರೆ. ಎಕೆನಾಮಿಕ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಭಾರತ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಲೆಸ್ಲಿ ಉಡ್ವಿನ್, ಸಾಕ್ಷ್ಯಚಿತ್ರದ...

ಬಿಬಿಸಿ ಸಾಕ್ಷ್ಯಚಿತ್ರ ನಿಷೇಧದ ಬಗ್ಗೆ ಚರ್ಚೆಯನ್ನು ಸ್ವಾಗತಿಸಿದ ಜರ್ಮನ್ ರಾಯಭಾರಿ

'ಬಿಬಿಸಿ' ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರ ನಿಷೇಧದ ಬಗ್ಗೆ ಉಂಟಾಗಿರುವ ಚರ್ಚೆಯನ್ನು ಭಾರತದಲ್ಲಿರುವ ಜರ್ಮಿನಿಯ ರಾಯಭಾರಿ ಮೈಕೆಲ್ ಸ್ಟೀನರ್ ಸ್ವಾಗತಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೈಕೆಲ್ ಸ್ಟೀನರ್, ಡಿ.16ರ ಗ್ಯಾಂಗ್ ರೇಪ್ ಕುರಿತು ಬಿಬಿಸಿ...

ಎಚ್ಚರಿಕೆ: ಉಚಿತ ಕರೆ ಹೆಸರಿನಲ್ಲಿ ವಾಟ್ಸಾಪ್ ದುರ್ಬಳಕೆ

ಕೆಲ ದಿನಗಳಿಂದ ನಿಮಗೆ ವಾಟ್ಸಾಪ್ ಕಾಲಿಂಗ್(ಉಚಿತ ಕರೆ)ಸೌಲಭ್ಯವನ್ನು ಅಳವಡಿಸಿಕೊಳ್ಳುವಂತೆ ಆಹ್ವಾನ ಬಂದಿದೆಯಾ? ಹಾಗಾದರೆ ಅದು ಫೇಕ್ ಸಂದೇಶ ಎಂದು ನಿರ್ಲಕ್ಷಿಸಿ. ವಾಟ್ಸ್ ಆಪ್ ಗ್ರಾಹಕರನ್ನು ಸೈಬರ್ ಸ್ಕ್ಯಾಮರ್ ಗಳು ಟಾರ್ಗೆಟ್ ಮಾಡುತ್ತಿದ್ದು, ವಾಟ್ಸಾಪ್ ಕಾಲಿಂಗ್ ಸೌಲಭ್ಯವನ್ನು ಡೌನ್ ಲೋಡ್ ಮಾಡುವುದು ಅಪಾಯಕಾರಿ...

ಸಂದರ್ಶನಕ್ಕಾಗಿ 40 ಸಾವಿರ ಪಡೆದ ರೇಪಿಸ್ಟ್

ವಿವಾದಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದಲ್ಲಿನ ಗ್ಯಾಂಗ್ ರೇಪ್ ಆರೋಪಿ ಮುಖೇಶ್ ಸಿಂಗ್ ಸಂದರ್ಶನಕ್ಕಾಗಿ ಚಿತ್ರ ನಿರ್ಮಾಪಕರು 40 ಸಾವಿರ ರೂಪಾಯಿ ಪಾವತಿಸಿರುವುದಾಗಿ ನವಭಾರತ್ ಟೈಮ್ಸ್ ವರದಿ ತಿಳಿಸಿದೆ. ಮುಖೇಶ್ ಸಿಂಗ್ ಸಂದರ್ಶನಕ್ಕಾಗಿ ಚಿತ್ರ ನಿರ್ಮಾಪಕಿ ಲಿಸ್ಲೇ ಉಡ್ವಿನ್ ಹಲವಾರು ಬಾರಿ ಪ್ರಯತ್ನಿಸಿದ್ದರು. ಆದರೆ...

ಅಪರಾಧಿಯನ್ನು ಸೃಷ್ಟಿಸಿದ್ದೇ ಸಮಾಜ: ಲೆಸ್ಲಿ ಉಡ್ವಿನ್

ದೆಹಲಿ ಗ್ಯಾಂಗ್ ರೇಪ್ ಅಪರಾಧಿಯನ್ನು ಹುಟ್ಟಿಸಿದ್ದೇ ನಮ್ಮ ಸಮಾಜ. ಇಲ್ಲಿ ಅಪರಾಧಿಯಾಗಿದ್ದು ಕೇವಲ ಅತ್ಯಾಚಾರಿಗಳಲ್ಲ, ಇಡೀ ಸಮಾಜ. ಅತ್ಯಾಚಾರಿಗಳು ಏನನ್ನು ಯೋಚಿಸಬೇಕು ಎನ್ನುವುದನ್ನು ಕಲಿಸಿಕೊಟ್ಟಿದ್ದು, ಅವರಿಗೆ ಉತ್ತೇಜನ ನೀಡಿದ್ದೂ ಸಮಾಜವೇ ಎಂದು ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ತಿಳಿಸಿದ್ದಾರೆ. ಇಂಡಿಯಾ...

ಡಿಫೆನ್ಸ್‌ ವಕೀಲರಿಗೆ ಬಾರ್ ಕೌನ್ಸಿಲ್‌ ಶೋಕಾಸ್‌ ನೋಟಿಸ್ ಜಾರಿ

ದೆಹಲಿ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದ ಮತ್ತು ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಆಕ್ಷೇಪಾರ್ಹವಾಗಿ ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡಿದ್ದ ಇಬ್ಬರು ವಕೀಲರಿಗೆ ಬಾರ್ ಕೌನ್ಸಿಲ್‌ ಆಫ್ ಇಂಡಿಯಾ ಶೋಕಾಸ್‌ ನೊಟೀಸ್‌ ಜಾರಿ ಮಾಡಿದೆ. ಬಿಬಿಸಿ ಪ್ರಸಾರಮಾಡಿರುವ ಇಂಡಿಯಾಸ್‌ ಡಾಟರ್ ಸಾಕ್ಷ್ಯಚಿತ್ರದಲ್ಲಿ...

ಬಿಬಿಸಿ ಸಾಕ್ಷ್ಯಚಿತ್ರ: ಅತ್ಯಾಚಾರ ಅಪರಾಧಿ ಪರ ವಕೀಲರ ವಿರುದ್ಧ ಕ್ರಮ ಸಾಧ್ಯತೆ

'ಬಿಬಿಸಿ' ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಅಪರಾಧಿ ಮುಖೇಶ್ ಸಿಂಗ್ ಪರ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಅಪರಾಧಿ ಮುಖೇಶ್ ಸಿಂಗ್ ಪರವಾಗಿ ಹೇಳಿಕೆ ನೀಡಿದ್ದೂ ಅಲ್ಲದೇ, ಅತ್ಯಾಚಾರ ನಡೆಯುವುದಕ್ಕೆ ಮಹಿಳೆಯರೇ ಕಾರಣ ಎಂಬ...

ಹಿನ್ನೆಲೆ ಪರಿಶೀಲನೆ ನಡೆಸದೇ ಬಿಬಿಸಿಯ ಲೆಸ್ಲಿ ಉಡ್ವಿನ್ ಗೆ ಅನುಮತಿ!

'ನಿರ್ಭಯಾ' ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದ ಲೆಸ್ಲಿ ಉಡ್ವಿನ್ ಗೆ ತಿಹಾರ್ ಜೈಲಿನಲ್ಲಿ ಅಪರಾಧಿಗಳ ಚಿತ್ರೀಕರಣಕ್ಕೆ ಅನುಮತಿ ನೀಡುವ ಮೂಲಕ ಗೃಹ ಇಲಾಖೆ ತನ್ನ ನಿಬಂಧನೆಗಳನ್ನು ಉಲ್ಲಂಘಿಸಿತ್ತು ಎಂಬ ಅಂಶ ಬಯಲಾಗಿದೆ. ಜೈಲಿಗೆ ಭೇಟಿ ನೀಡುವ ವಿದೇಶಿಗರ ಹಿನ್ನೆಲೆಯನ್ನು ತಪಾಸಣೆ ಮಾಡುವುದು ಕಡ್ಡಾಯವಾಗಿರುತ್ತದೆ....

ಇಂಡಿಯಾಸ್ ಡಾಟರ್ ಸಾಕ್ಷ್ಯ ಚಿತ್ರ ತೆಗೆದುಹಾಕುವಂತೆ ಯೂಟ್ಯೂಬ್ ಗೆ ಕೇಂದ್ರ ಸರ್ಕಾರ ತಾಕೀತು

ನಿಷೇಧದ ನಡುವೆಯೂ ಬಿಬಿಸಿ ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯ ಚಿತ್ರವನ್ನು ಕೂಡಲೇ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಯುಟ್ಯೂಬ್ ಗೆ ಸೂಚನೆ ನೀಡಿದೆ. ಭಾರತ ಸರ್ಕಾರದ ನಿಷೇಧದ ಹೊರತಾಗಿಯೂ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ್ದಲ್ಲದೆ, ಯುಟ್ಯೂಬ್ ನಲ್ಲಿ ಅದನ್ನು ಅಪ್ಲೋಡ್ ಮಾಡಿತ್ತು. ಈ ಹಿನ್ನೆಲೆಯಲ್ಲಿ...

ಕಳೆದ ವರ್ಷ ಭಾರತೀಯ ಸೇನೆ ಯೋಜನೆಗಳ ಮಾಹಿತಿ ಪಾಕಿಸ್ತಾನಕ್ಕೆ ಸೋರಿಕೆ

'ಭಾರತೀಯ ಸೇನೆ'ಯ ಯೋಜನೆಗಳು ಕಳೆದ ವರ್ಷದ ಫೆಬ್ರವರಿಯಲ್ಲಿ ಸೋರಿಕೆಯಾಗಿದ್ದು ಪಾಕಿಸ್ತಾನಕ್ಕೆ ಪ್ರತಿಯೊಂದು ಮಾಹಿತಿಯೂ ಲಭ್ಯವಾಗಿದೆ ಎಂಬ ಸ್ಫೋಟಕ ಮಹಿತಿ ಬಯಲಾಗಿದೆ. ಇಂಡಿಯಾ ಟಿವಿ ವರದಿ ಪ್ರಕಾರ, ಸೇನಾ ಕಾರ್ಯಾಚರಣೆ ಬಗ್ಗೆ 2014ರ ಫೆ.15ರಂದು ಅಂದಿನ ರಕ್ಷಣಾ ಸಚಿವ ಎ.ಕೆ ಆಂಟನಿ ಅವರೊಂದಿಗೆ...

ರೈತರ ಆತ್ಮಹತ್ಯೆ ಹೆಚ್ಚಳ: ಅಚ್ಚೇ ದಿನ್ ನ್ನು ಅಣಕಿಸಿದ ಇಂಡಿಯಾ ಟುಡೆ ವರದಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಶೇ.26ರಷ್ಟು ಹೆಚ್ಚಾಗಿದೆ ಎಂದು ಇಂಡಿಯಾ ಟು ಡೆ ಅಂತರ್ಜಾಲ ಪತ್ರಿಕೆ ವರದಿ ಮಾಡಿದೆ. ಮಹಾರಾಷ್ಟ್ರದಲ್ಲಿಯೇ ಅತ್ಯಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ತೆಲಂಗಾಣ, ಜಾರ್ಖಂಡ್ ನಂತರದ ಸ್ಥಾನ...

ಸಂಸತ್ ಕ್ಯಾಂಟೀನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭೋಜನ

ತಮ್ಮನ್ನು ಪ್ರಧಾನ ಸೇವಕನೆಂದೇ ಹೇಳುವ ಪ್ರಧಾನಿ ನರೇಂದ್ರ ಮೋದಿ ಇಂದು ಪಾರ್ಲಿಮೆಂಟ್ ನ ಕ್ಯಾಂಟೀನ್ ನಲ್ಲಿ ಗುಜರಾತ್ ಸಂಸದರೊಂದಿಗೆ ಮಧ್ಯಾಹ್ನದ ಭೋಜನ ಸವಿದಿದ್ದಾರೆ. ಸಂಸತ್ ಭವನದಲ್ಲಿರುವ ಕ್ಯಾಂಟೀನ್ ಗೆ ಅನಿರೀಕ್ಷಿತ ಭೇಟಿ ನೀಡಿದ ನರೇಂದ್ರ ಮೋದಿ, ವೆಜಿಟೇರಿಯನ್ ತಾಲಿ ಗೆ ಆರ್ಡರ್...

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಮತ್ತೊಮ್ಮೆ ಅಧ್ಯಕ್ಷರಾಗಲು ಶರದ್ ಪವಾರ್ ಯತ್ನ

'ಬಿಸಿಸಿಐ' ಅಧ್ಯಕ್ಷ ಸ್ಥಾನಕ್ಕೆ ಲಾಭಿ ಪ್ರಾರಂಭವಾಗಿದೆ. ಅಧ್ಯಕ್ಷಗಾದಿಯನ್ನು ಮತ್ತೊಮ್ಮೆ ಅಲಂಕರಿಸಲು ಯತ್ನಿಸುತ್ತಿರುವ ಎನ್.ಸಿ.ಪಿ ನಾಯಕ ಶರದ್ ಪವಾರ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಬಿಸಿಸಿಐ ಚುನಾವಣೆ ಬಗ್ಗೆ ಉಭಯ ನಾಯಕರೂ ಚರ್ಚೆ ನಡೆಸಿದ್ದು, ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಬೆಂಬಲಿಸುವ...

ಲ್ಯಾಂಡ್ ಲೈನ್, ಮೊಬೈಲ್ ಕರೆ ದರದಲ್ಲಿ ಭಾರಿ ಇಳಿಕೆ!

ಲ್ಯಾಂಡ್ ಲೈನ್ ಸಂಪರ್ಕವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಟೆಲಿಕಾಮ್ ರೆಗ್ಯುಲೇಟರ್(ಟ್ರಾಯ್) ಮಹತ್ವದ ನಿರ್ಧಾರ ಕೈಗೊಂಡಿದ್ದು, ಲ್ಯಾಂಡ್ ಲೈನ್ ಹಾಗೂ ಮೊಬೈಲ್ ಕರೆಗಳ ದರದಲ್ಲಿ ಭಾರೀ ಇಳಿಕೆ ಮಾಡಲು ಶಿಫಾರಸು ಮಾಡಿದೆ. ಈ ಹಿಂದೆ ಲ್ಯಾಂಡ್ ಲೈನ್ ನಿಂದ ಲ್ಯಾಂಡ್ ಲೈನ್ ಹಾಗೂ ಲ್ಯಾಂಡ್...

ಏರೋ ಇಂಡಿಯಾ ಪ್ರದರ್ಶನ: ರನ್ ವೇ ಪಕ್ಕದಲ್ಲಿ ಬೆಂಕಿ

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2015ರ ಪ್ರದರ್ಶನದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ವಾಯುನೆಲೆಯ ರನ್ ವೇ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲಕಾಲ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಫೆ.20ರಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ರನ್ ವೇ ಪಕ್ಕದಲ್ಲೇ ಬೆಂಕಿ ಕಾಣಿಸಿಕೊಂಡು...

ಏರೋ ಇಂಡಿಯಾ ಪ್ರದರ್ಶನದ ವೇಳೆ ವಿಮಾನಗಳು ಡಿಕ್ಕಿ

'ಯಲಹಂಕ'ದಲ್ಲಿ ನಡೆಯುತ್ತಿರುವ ಏರ್ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ನಡೆಯಬೇಕಿದ್ದ ಭಾರಿ ಅನಾಹುತವೊಂದು ತಪ್ಪಿದೆ. ಏರ್ ಶೋ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ವೈಮಾನಿಕ ಸಾಹಸ ಪ್ರದರ್ಶನದ ವೇಳೆ ರೆಡ್ ಬುಲ್ ನ ಎರಡು...

ಏರೋ ಇಂಡಿಯಾ-2015 ಏರ್ ಶೋ ಗೆ ಪ್ರಧಾನಿ ಮೋದಿ ಚಾಲನೆ

ಮೇಕ್‌ ಇನ್‌ ಇಂಡಿಯಾ' ಮಂತ್ರದೊಂದಿಗೆ ಹತ್ತನೇ ಆವೃತ್ತಿಯ ’ಏರೋ ಇಂಡಿಯಾ ಶೋ' ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2015 ಏರ್ ಶೋ ಕಾರ್ಯಕ್ರಮವನ್ನುಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ,ಏರ್ ಶೋನಲ್ಲಿ ಭಾಗವಹಿಸುತ್ತಿರುವ ಎಲ್ಲ...

ಗಂಗಾ ನದಿಯ ಎರಡು ಘಾಟ್ ಗಳಲ್ಲಿ ವೈಫೈ ಸೌಲಭ್ಯ

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿರುವ ಪವಿತ್ರ ಗಂಗಾ ನದಿಗೆ ಈಗ ಹೈಟೆಕ್ ಸ್ಪರ್ಷ ನೀಡಲಾಗಿದೆ. ಗಂಗಾ ನದಿಯ ಶೀತಲ್ ಹಾಗೂ ದಶ್ವಾಶ್ ಮೇಘ್ ಎಂಬ ಎರಡು ಘಾಟ್ ಗಳಿಗೆ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಇದೇ ಪ್ರಥಮ...

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ದೆಹಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ಜಹಾಂಗಿರ್ ಪುರದಲ್ಲಿ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷ ಹಾಗೂ ನರೇಂದ್ರ ಮೋದಿ...

ಜಾರಿಗೆ ಬರಲು ಸಿದ್ಧವಾಗಿದೆ ಎನ್.ಡಿ.ಎ ಸರ್ಕಾರದಿಂದ 'ರೀಡ್ ಇಂಡಿಯಾ' ಎಂಬ ವಿನೂತನ ಯೋಜನೆ

'ಮೇಕ್ ಇನ್ ಇಂಡಿಯಾ'ದಂತಹ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ, ರೀಡ್ ಇಂಡಿಯಾ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಫೆ.14ರಂದು ಈ ಅಭಿಯಾನ ಜಾರಿಗೆ ಬರುವ ಎಲ್ಲಾ ಸಾಧ್ಯತೆಗಳಿವೆ. ಯೋಜನೆಯ ಭಾಗವಾಗಿ ದೇಶಾದ್ಯಂತ...

ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ನಿಧನ

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ಅವರು ವಿಧಿವಶರಾಗಿದ್ದಾರೆ. ಆರ್.ಕೆ ಲಕ್ಷ್ಮಣ್ ಅವರನ್ನು ಪುಣೆಯ ದೀನನಾಥ್ ಮಂಗೇಷ್ಕರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣದಿಂದ ವೆಂಟಿಲೇಟರ್ ಅಳವಡಿಸಲಾಗಿತ್ತು. ಕರ್ನಾಟಕದ ಮೈಸೂರು ಮೂಲದವರಾದ 94 ವರ್ಷದ...

ಅಮೆರಿಕಾದೊಂದಿಗೆ ಅಣು ಒಪ್ಪಂದ: ಸರ್ಕಾರದ ವಿರುದ್ಧ ದಿಗ್ವಿಜಯ್ ಸಿಂಗ್ ವಾಗ್ದಾಳಿ

'ಎನ್.ಡಿ.ಎ' ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಅಮೆರಿಕಾದೊಂದಿಗೆ ಅಣು ಒಪ್ಪಂದ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರ ಸರ್ಕಾರ ಉಲ್ಟಾ ಹೊಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುಪಿಎ ಸರ್ಕಾರ ಅಮೆರಿಕಾದೊಂದಿಗೆ ಅಣು ಒಪ್ಪಂದಕ್ಕೆ ಸಹಿ ಹಾಕಬೇಕಾದರೆ...

ಮುಸ್ಲಿಮ್ ಸಮುದಾಯದ ಜನಸಂಖ್ಯೆ ಶೇ24ರಷ್ಟು ಬೆಳವಣಿಗೆ

ದೇಶದಲ್ಲಿ ಧರ್ಮಾಧಾರಿತ ಜನಗಣತಿ ಅಂಕಿ-ಅಂಶ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಬಿಡುಗಡೆಗೊಳ್ಳಲಿದೆ. ಈ ಅಂಕಿ-ಅಂಶದಲ್ಲಿ 2001ರಿಂದ 2011ರ ವರೆಗೆ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇ.24ರಷ್ಟು ಬೆಳವಣಿಗೆ ಕಂಡುಬಂದಿದೆ. ಯುಪಿಎ ಸರ್ಕಾರದಲ್ಲಿ ಕಳೆದ ವರ್ಷವೇ ನಡೆಸಲಾಗಿದ್ದ ಜನಗಣತಿ ಅಂಕಿ-ಅಂಶಗಳನ್ನು ಕಾರಣಾಂತರಗಳಿಂದ ಬಿಡುಗಡೆ ಮಾಡಿರಲಿಲ್ಲ....

ಮೈಸೂರು ಇನ್ಫಿ ಕ್ಯಾಂಪಸ್‌ ದೇಶದ ಮೊದಲ ಸ್ಮಾರ್ಟ್‌ಸಿಟಿ

ದೇಶದಲ್ಲಿ ಬರೋಬ್ಬರಿ 100 ಮಾದರಿ ಸ್ಮಾರ್ಟ್‌ಸಿಟಿಗಳನ್ನು ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಯ ಮೊದಲ ಹೆಗ್ಗಳಿಕೆ ಮೈಸೂರಿಗೆ ಪ್ರಾಪ್ತವಾಗುವುದು ಬಹುತೇಕ ಖಚಿತವಾಗಿದೆ. ಮೈಸೂರಿನಲ್ಲಿ ದೇಶದ ಪ್ರತಿಷ್ಠಿತ ಮಾಹಿತಿ-ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ನಿರ್ಮಿಸಿರುವ ಬೃಹತ್‌ ಕ್ಯಾಂಪಸ್‌ ಅನ್ನೇ ಸ್ಮಾರ್ಟ್‌ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದನ್ನೇ...

ಫೆಬ್ರವರಿಯಲ್ಲಿ ಮೇಕ್‌ ಇನ್‌ ಇಂಡಿಯಾ ಜಾಗತಿಕ ಸಮಾವೇಶ

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕ್‌ ಇನ್‌ ಇಂಡಿಯಾಕ್ಕೆ ಜಾಗತಿಕ ಬಂಡವಾಳವನ್ನು ಆಕರ್ಷಿಸಲು ಕೇಂದ್ರ ಸರ್ಕಾರ ಮೊದಲ ಬಾರಿಗೆ ಬಂಡವಾಳ ಹೂಡಿಕೆದಾರರ ಬೃಹತ್‌ ಸಮಾವೇಶವನ್ನು ಫೆಬ್ರವರಿ ತಿಂಗಳಲ್ಲಿ ಆಯೋಜಿಸಲಿದೆ. ಜಗತ್ತಿನ ಅತಿದೊಡ್ಡ ಬಂಡವಾಳ ನಿರ್ವಹಣಾ ಕಂಪನಿ ಬ್ಲ್ಯಾಕ್‌ರಾಕ್‌ಗೆ ಸಮ್ಮೇಳನದ...

ವಿದೇಶಿ ಬಂಡವಾಳ ಹೂಡಿಕೆ ಇಂದಿನ ಅಗತ್ಯ: ಪ್ರಧಾನಿ ಮೋದಿ

ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತದ ಅರ್ಥ ವ್ಯವಸ್ಥೆಗೆ ಪೂರಕವಾಗಿ ವಿದೇಶಿ ಬಂಡವಾಳ ಹೂಡಿಕೆ ಇಂದಿನ ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಪ್ರತಿಪಾದಿಸಿದ್ದಾರೆ. ಗುಜರಾತ್‌ನ ಗಾಂಧಿನಗರದಲ್ಲಿ ಇಂದು ಆಯೋಜಿಸಿರುವ ವಿಶ್ವ ಬಂಡವಾಳ ಹೂಡಿಕೆದಾರರ ವೈಬ್ರೆಂಟ್ ಗುಜರಾತ್ 7ನೇ ಸಮಾವೇಶದಲ್ಲಿ ಮಾತನಾಡಿದ ಮೋದಿ,...

ಕಲ್ಲಿದ್ದಲು ನೌಕರರ ಮುಷ್ಕರ ವಾಪಸ್

ಎರಡು ದಿನಗಳ ಕಾಲ ದೇಶಾದ್ಯಂತ ನಡೆದ ಕೋಲ್ ಇಂಡಿಯಾ ಲಿಮಿಟೆಡ್ ನೌಕರರ ಮುಷ್ಕರ ಹಿಂಪಡೆಯಲಾಗಿದೆ. ತಡರಾತ್ರಿ ದೆಹಲಿಯಲ್ಲಿ ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳ ಜತೆ ನಡೆದ ಮಾತುಕತೆ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಕೋಲ್ ಇಂಡಿಯಾವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವುದಿಲ್ಲ,...

ದೆಹಲಿ-ಕಾಬೂಲ್ ವಿಮಾನ ಅಪಹರಣ ಸಾಧ್ಯತೆ: ಗುಪ್ತಚರ ಇಲಾಖೆ ಎಚ್ಚರಿಕೆ

ದೆಹಲಿ-ಕಾಬೂಲ್ ಮಾರ್ಗದ ವಿಮಾನ ಅಪಹರಣವಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಅಲ್ಲದೇ ಏರ್ ಇಂಡಿಯಾ ಉಗ್ರಗಾಮಿಗಳ ಗುರಿ ಎಂದು ಸೂಚನೆ ನೀಡಿವೆ. ವಿಮಾನನಿಲ್ದಾಣದ ಐ ಜಿ ಐ ಅವರು ಎಲ್ಲ ವಿಮಾನನಿಲ್ದಾಣಗಳನ್ನು ಹೈ ಅಲರ್ಟ್ ನಲ್ಲಿಟ್ಟಿದ್ದು, ತಪಾಸಣೆಯನ್ನು ತೀವ್ರಗೊಳಿಸುವಂತೆ ಭದ್ರತಾ...

ಪ್ರಧಾನಿಯ ಯೋಜನೆಗಳ ಪೈಕಿ ಸ್ವಚ್ಛ ಭಾರತ ಅಭಿಯಾನಕ್ಕೇ ದೇಶಾದ್ಯಂತ ಅತಿ ಹೆಚ್ಚು ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಯೋಜನೆಗಳ ಪೈಕಿ ದೇಶದ ಜನತೆ ಸ್ವಚ್ಛ ಭಾರತ ಅಭಿಯಾನವನ್ನು ಅತಿ ಹೆಚ್ಚು ಇಷ್ಟಪಟ್ಟಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ, ದೇಶಾದ್ಯಂತ ನರೇಂದ್ರ ಮೋದಿ ಅವರ ಉಳಿದ ಎಲ್ಲಾ...

ಪಾಕ್ ರಾಜಕಾರಣಿಗಳ ಮಕ್ಕಳನ್ನು ಹತ್ಯೆ ಮಾಡುವುದಾಗಿ ತೆಹ್ರೀಕ್-ಇ-ತಾಲೀಬಾನ್ ಬೆದರಿಕೆ

ಉಗ್ರ ಫಜಾಲುಲ್ಲಾ ಹತ್ಯೆಯಿಂದ ಕೆರಳಿರುವ ತೆಹ್ರೀಕ್-ಇ-ತಾಲೀಬಾನ್ ಉಗ್ರ ಸಂಘಟನೆ, ಪಾಕಿಸ್ತಾನದ ರಾಜಕಾರಣಿಗಳ ಮಕ್ಕಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದೆ. ಮೊಹಮ್ಮದ್ ಖರಾಸಾನಿ ಎಂಬುವವನಿಂದ ಪತ್ರ ಬಂದಿದ್ದು ಆತ, ಪಾಕ್ ರಾಜಕಾರಣಿಗಳ ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಟೈಮ್ಸ್ ಆಫ್...

ಕ್ರಿಸ್ ಮಸ್ ರಜೆ: ಟೈಮ್ಸ್ ಆಫ್ ಇಂಡಿಯಾ ವರದಿ ವಿರುದ್ಧ ಸ್ಮೃತಿ ಇರಾನಿ ಅಸಮಾಧಾನ

ಡಿ.15ರ ಬೆಳಿಗ್ಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದರ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿ.ಬಿ.ಎಸ್.ಇ. ಶಾಲೆಗಳಲ್ಲಿ ಡಿ.25ರಂದು ಕ್ರಿಸ್ ಮಸ್ ದಿನದಂದು ರಜೆ ನೀಡುವ ಬದಲು ಅಟಲ್ ಬಿಹಾರಿ...

ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಿಸೋಣ: ಪ್ರಧಾನಿ ಮೋದಿ

ಮಾದಕ ವ್ಯಸನ ಮುಕ್ತ ಸಮಾಜಕ್ಕೆ ಬದ್ಧರಾಗೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಭಾನುವಾರ ಪ್ರಸಾರವಾದ 'ಮನ್ ಕೀ ಬಾತ್‌' ನಲ್ಲಿ ದೇಶದಲ್ಲಿ ಮಾದಕ ವಸ್ತುಗಳ ಸೇವನೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಜನರು ತಮ್ಮ ಅಭಿಪ್ರಾಯಗಳನ್ನು ತಮ್ಮೊಂದಿಗೆ ಹಂಚಿಕೊಂಡಿರುವುದಕ್ಕೆ...

ಮೊಬೈಲ್ ಒನ್‌ ಸೇವೆಗೆ ರಾಷ್ಟ್ರಪತಿ ಚಾಲನೆ

ದೇಶದಲ್ಲೇ ಮೊದಲ ಬಾರಿಗೆ 'ಕರ್ನಾಟಕ ಮೊಬೈಲ್ ಒನ್‌' ಸೇವೆಗೆ ರಾಷ್ಪ್ರಪತಿ ಪ್ರಣಬ್ ಮುಖರ್ಜಿ ಚಾಲನೆ ನೀಡಿದ್ದಾರೆ. ನಾಲ್ಕುವರೆ ಸಾವಿರಕ್ಕೂ ಅಧಿಕ ಸೇವೆಗಳನ್ನು ಹೊಂದಿರುವ ಮೊಬೈಲ್ ಓನ್ ಸೇವೆಯನ್ನು ರಾಜ್ಯಪಾಲ ವಿ.ಆರ್.ವಾಲ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಗರದ ಅಂತಾರಾಷ್ಟ್ರೀಯ ಪ್ರದರ್ಶನ ಸಭಾಂಗಣದಲ್ಲಿ...

ಭಾರತದಲ್ಲಿ ಬಂಡವಾಳ ಹೂಡಲು ಮಲೇಷಿಯಾ ಕಂಪನಿಗಳಿಗೆ ಮೋದಿ ಆಹ್ವಾನ

'ಏಸಿಯಾನ್-ಇಂಡಿಯಾ ಶೃಂಗಸಭೆ'ಯಲ್ಲಿ ಭಾಗವಹಿಸಲು ಮಯನ್ಮಾರ್ ಗೆ ತೆರಳಿರುವ ಪ್ರಧಾನಿ ಮೋದಿ ಅವರು, ಮಲೇಷಿಯಾ ಕಂಪನಿಗಳನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ. ಶೃಂಗ ಸಭೆಯ ಸಂದರ್ಭದಲ್ಲಿ ಮಲೇಷಿಯಾದ ಪ್ರಧಾನಿ ನಜೀಬ್ ರಜಾಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ...

ಇನ್ಸ್ಟಾಗ್ರಾಮ್ ನಲ್ಲಿ ಶೃಂಗ ಸಭೆ ಫೋಟೊ ಅಪ್ಲೋಡ್ ಮಾಡಿದ ಮೋದಿ

ಏಸಿಯಾನ್-ಇಂಡಿಯಾ ಶೃಂಗ ಸಭೆಯಲ್ಲಿ ಭಾಗವಹಿಸಲು ಮಯನ್ಮಾರ್ ಗೆ ತೆರಳಿರುವ ಪ್ರಧಾನಿ ಮೋದಿ ಅವರು, ಫೋಟೋ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಶೃಂಗ ಸಭೆಯ ಚಿತ್ರವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಹತ್ತುದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಮಯನ್ಮಾರ್ ನಲ್ಲಿ ನಡೆಯಲಿರುವ ಶೃಂಗ ಸಭೆಯಲ್ಲಿ...

ಭಾರತ ಸರ್ಕಾರ ಆಕ್ಟ್ ಈಸ್ಟ್ ಪಾಲಿಸಿ ಬಗ್ಗೆ ಗಮನ ಕೇಂದ್ರೀಕರಿಸುತ್ತದೆ: ಪ್ರಧಾನಿ ಮೋದಿ

ತಮ್ಮ ನೇತೃತ್ವದ ಭಾರತ ಸರ್ಕಾರ ಆಕ್ಟ್ ಈಸ್ಟ್ ಪಾಲಿಸಿ(ಪೂರ್ವ ದೇಶಗಳೊಂದಿಗೆ ಸಕ್ರಿಯ ಸಂಬಂಧ) ಬಗ್ಗೆ ಗಮನ ಕೇಂದ್ರೀಕರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಸಿಯಾನ್-ಇಂಡಿಯಾ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಸೀಯಾನ್ ರಾಷ್ಟ್ರಗಳೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿದೆ....

ಇಂಡಿಯಾಗೆ ಮರುನಾಮಕರಣ: ಅರ್ಜಿ ವಜಾಗೊಳಿಸಿದ ಸುಪ್ರೀಂ

'ಇಂಡಿಯಾ'ವನ್ನು ಭಾರತವನ್ನಾಗಿ ಮರುನಾಮಕರಣ ಮಾಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್, ನ. 10ರಂದು ತಿರಸ್ಕರಿಸಿದೆ. ದೇಶಕ್ಕೆ ಮರುನಾಮಕರಣ ಮಾಡುವ ವಿಷಯದಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಸೂಕ್ತ ಬೆಂಬಲ ವ್ಯಕ್ತವಾದ ನಂತರ ಅರ್ಜಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ನ...

ಏರ್ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಉಗ್ರರಿಂದ ಬೆದರಿಕೆ ಕರೆ

'ಕೊಚ್ಚಿ' ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಗ್ರನೊಬ್ಬನಿಂದ ಬೆದರಿಕೆ ಕರೆ ಬಂದಿದ್ದು, ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ವ್ಯಕ್ತಿಯೋರ್ವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಕಳಿಸಿದ್ದು ಕೇಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಸೇರಿದ ಅಹಮದಾಬಾದ್-ಕೊಚ್ಚಿ...

ಬೆದರಿಕೆ ಕರೆ ಹಿನ್ನೆಲೆ: ಎಲ್ಲಾ ವಿಮಾನ ನಿಲ್ದಾಣಗಳಿಗೆ ಎಚ್ಚರಿಕೆ ಸೂಚನೆ ರವಾನೆ

'ಕೊಚ್ಚಿ' ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಾಗರಿಕ ವಿಮಾನಯಾನ ಭಧ್ರತಾ ದಳ ಉನ್ನತ ಮಟ್ಟದ ಸಭೆ ನಡೆಸಿದೆ. ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಎಲ್ಲ ವಿಮಾನನಿಲ್ದಾಣಗಳಿಗೆ 'ಗರಿಷ್ಠ ಎಚ್ಚರಿಕೆ' ಸೂಚನೆಯನ್ನು ನೀಡಲಾಗಿದೆ...

ನೇಪಥ್ಯಕ್ಕೆ ಸರಿಯುತ್ತಿರುವ ಅಂಚೆಪೇದೆಗಳನ್ನು ಸಶಕ್ತರನ್ನಾಗಿಸುವ ಡಿಜಿಟಲ್ ಇಂಡಿಯಾ ಯೋಜನೆ

'ಇ-ಮೇಲ್' ಗಳದ್ದೇ ದರ್ಬಾರ್ ನಡೆಯುತ್ತಿರುವ ಇಂದಿನ ಯುಗದಲ್ಲಿ ಪೋಸ್ಟ್ ಮ್ಯಾನ್ ಸಹ ಮತ್ತೊಮ್ಮೆ ಪ್ರಸ್ತುತವಾಗುವ ಕಾಲ ಸನ್ನಿಹಿತವಾಗಿದೆ. ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ನೇಪಥ್ಯಕ್ಕೆ ಸರಿಯುತ್ತಿರುವ ಪೋಸ್ಟ್ ಮ್ಯಾನ್ ಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಯೋಜನೆ...

ನಿರ್ಭಯ ಪರಮಾಣು ಕ್ಷಿಪಣಿಯ ಯಶಸ್ವಿ ಉಡಾವಣೆ

ಪರಮಾಣು ಅಸ್ತ್ರವನ್ನು ಹೊತ್ತೊಯ್ಯಬಲ್ಲ 'ನಿರ್ಭಯ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಇಂದು ಯಶಸ್ವಿಯಾಗಿ ಮಾಡಲಾಯಿತು. ಅತಿ ಆಧುನಿಕವಾದ ಈ ಕ್ಷಿಪಣಿಯನ್ನು ಡಿ.ಆರ್.ಡಿ.ಒ. (ರಕ್ಷಣಾ ಅನ್ವೇಷಣೆ ಮತ್ತು ಅಭಿವೃದ್ಧಿ ಸಂಸ್ಥೆ) ಸಂಸ್ಥೆ ಅಭಿವೃದ್ಧಿಪಡಿಸಿದೆ. ಒಡಿಶಾದ ಬಾಲಾಸೋರ್ ನ ಚಾಂದಿಪುರ ಉಡಾವಣಾ ಕ್ಷೇತ್ರದಿಂದ ಈ ಕ್ಷಿಪಣಿಯನ್ನು...

ಭವಿಷ್ಯದ ಯುದ್ಧಗಳು ಬಾಹ್ಯಾಕಾಶ ತಂತ್ರಜ್ನಾನದ ಮೇಲೆ ಅವಲಂಬಿತವಾಗಲಿದೆ- ಮೋದಿ

ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಯುದ್ಧಗಳು ಕಡಿಮೆಯಾಗಲಿದೆ. ಆದರೆ ಶತೃಗಳಿಂದ ದಾಳಿಗೆ ಪ್ರತಿರೋಧವೊಡ್ಡಲು ನಮ್ಮ ಶಕ್ತಿ ಎಂದಿನಂತೆಯೇ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅ.17ರಂದು ಭಾರತದ ಕಮಾಂಡರ್ ಗಳ ಜಂಟಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,...

ಮೋದಿ ಅಮೆರಿಕಾ ಪ್ರವಾಸದ ಸ್ಟ್ಯಾಂಡ್ ಬೈ ವಿಮಾನದಲ್ಲಿ ಗ್ರೆನೇಡ್ ಪತ್ತೆ

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕಾ ಪ್ರವಾಸಕ್ಕೆ ಹೆಚ್ಚುವರಿಯಾಗಿ ಬಳಸಲಾಗಿದ್ದ ಏರ್ ಇಂಡಿಯಾ ವಿಮಾನದಲ್ಲಿ ನಿಷ್ಕ್ರಿಯಗೊಂಡಿದ್ದ ಗ್ರೆನೇಡ್ ಪತ್ತೆಯಾಗಿದ್ದು ಭದ್ರತೆ ಬಗ್ಗೆ ಆತಂಕ ಉಂಟಾಗಿದೆ. ಏರ್ ಇಂಡಿಯಾ ಜಂಬೋ ವಿಮಾನ ಬಿಸ್ನೆಸ್ ಕ್ಲಾಸ್ ನಲ್ಲಿ ನಿಷ್ಕ್ರಿಯಗೊಂಡಿದ್ದ ಗ್ರೆನೇಡ್ ಪತ್ತೆಯಾಗಿದೆ. ಮುಂಬೈ-ಹೈದರಾಬಾದ್...

125ಕೋಟಿ ಭಾರತೀಯರು ತಮ್ಮ ಶಕ್ತಿಯನ್ನು ಅರಿತುಕೊಳ್ಳಬೇಕು: ಪ್ರಧಾನಿ ನರೇಂದ್ರ ಮೋದಿ

ಭಾರತೀಯರು ವಿಶೇಷ ಕೌಶಲ್ಯ ಹಾಗೂ ಜ್ನಾನದಿಂದ ಆಶೀರ್ವದಿಸಲ್ಪಟ್ಟಿದ್ದಾರೆ. 120ಕೋಟಿ ಭಾರತೀಯರು ತಮ್ಮ ಶಕ್ತಿಯನ್ನು ಅರಿತರೆ ದೇಶ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಥಮ ಬಾರಿಗೆ 'ಮನ್ ಕಿ ಬಾತ್‌' ಕಾರ್ಯಕ್ರಮದ...

ಮೇಕ್ ಇನ್ ಇಂಡಿಯಾ, ಭಾರತದ ನಕ್ಷೆಯನ್ನೇ ಬದಲಾಯಿಸಿ: ಕಂಪನಿಗಳಿಗೆ ಪ್ರಧಾನಿ ಮೋದಿ ಕರೆ

'ಮೇಕ್ ಇನ್ ಇಂಡಿಯಾ' ಬರೀ ಅಭಿಯಾನವಲ್ಲ, ಅದು ನಮ್ಮೆಲ್ಲರ ಜವಾಬ್ದಾರಿ. ದೇಶದ ಬಡ ನಾಗರಿಕನಿಗೂ ಉದ್ಯೋಗ ನೀಡಿ ಭಾರತದ ಅಭಿವೃದ್ಧಿಗೆ ನಾಂದಿ ಹಾಡೋಣ ಎಂದು ಉದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನವದೆಹಲಿಯ ವಿಜ್ನಾನಭವನದಲ್ಲಿ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾ...

ಮೋದಿ ಪ್ರಧಾನಿಯಾಗಿರುವುದು ಭಾರತ ಭಾಗ್ಯ: ಮುಕೇಶ್ ಅಂಬಾನಿ

ಭಾರತವನ್ನು ತಯಾರಿಕಾ ಘಟಕದ ಹಬ್ ಆಗಿ ಪರಿವರ್ತಿಸಬೇಕು ಎಂಬುದು ಮೋದಿ ಕನಸು. ಇಂತಹ ಅಭಿಯಾನ ಯಶಸ್ವೀಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಭಾರತದ ಕೈಗಾರಿಕೆಗೆ ಇಂದು ಐತಿಹಾಸಿಕ, ಸುದಿನ ಎಂದು ಉದ್ಯಮಿ ಮುಖೇಶ್ ಅಂಬಾನಿ ಅಭಿಪ್ರಾಯ ಪಟ್ಟಿದ್ದಾರೆ. ಮೇಕ್ ಇನ್ ಇಂಡಿಯಾ ಅಭಿಯನದಲ್ಲಿ ಮಾತನಾಡಿದ ಅವರು,...

ಹೆಚ್.ಎಂ.ಟಿ ಗೀಗ ಕಂಪನಿ ಮುಚ್ಚೋ ಟೈಮ್!

ಒಂದು ಕಾಲದಲ್ಲಿ ದೇಶದ ಹೆಮ್ಮೆಯ ಗುರುತಾಗಿದ್ದ ಹೆಚ್.ಎಂ.ಟಿ ವಾಚ್ ಕಂಪನಿಗೆ ಬೀಗ ಜಡಿಯಲು ಸರ್ಕಾರ ನಿರ್ಧರಿಸಿದೆ. ಕಳೆದ 14 ವರ್ಷಗಳಿಂದ ನಿರಂತರ ನಷ್ಟ ಎದುರಿಸುತ್ತಿರುವ ಹೆಚ್.ಎಂ.ಟಿ ವಾಚಸ್ ಹಾಗೂ ಹೆಚ್.ಎಂ.ಟಿ ಚಿನಾರ್ ವಾಚಸ್ ಕಂಪನಿಯನ್ನು ಕೇಂದ್ರ ಸರ್ಕಾರ ಸದ್ಯದಲ್ಲೇ ಬಂದ್ ಮಾಡಲಿದೆ. ಹೆಚ್.ಎಂ.ಟಿ...

ಜಪಾನ್ ಹೂಡಿಕೆದಾರರಿಗೆ ರೆಡ್ ಟೇಪ್ ಬದಲು ರೆಡ್ ಕಾರ್ಪೆಟ್ ಸ್ವಾಗತ: ಪ್ರಧಾನಿ ಮೋದಿ

ಜಪಾನ್ ಹೂಡಿಕೆದಾರರಿಗೆ ಭಾರತಕ್ಕಿಂತಲೂ ಶಾಂತಿಯುತ ದೇಶ ಮತ್ತೊಂದಿಲ್ಲ, ಜಪಾನ್ ಹೂಡಿಕೆದಾರರಿಗೆ ಭಾರತದಲ್ಲಿ ರೆಡ್ ಟೇಪ್ ಬದಲು ರೆಡ್ ಕಾರ್ಪೆಟ್ ಸ್ವಾಗತ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 4ನೇ ದಿನದ ಜಪಾನ್ ಪ್ರವಾಸದಲ್ಲಿ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,...

ಲವ್ ಜಿಹಾದ್ ನಿಲ್ಲದಿದ್ದರೆ ಜಿಹಾದಿಗಳಿಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರ:ಯೋಗಿ ಆದಿತ್ಯನಾಥ್

'ಉತ್ತರ ಪ್ರದೇಶ'ದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್, ಮುಸ್ಲಿಂ ಯುವಕರು ಹೆಸರು ಬದಲಾಯಿಸಿಕೊಂಡು ಹಿಂದೂ ಯುವತಿಯರೊಂದಿಗೆ ಪ್ರೀತಿ ನಾಟಕವಾಡಿ ಮೋಸ ಮಾಡುವುದನ್ನು ಬಿಡದೇ ಇದ್ದಲ್ಲಿ ಅವರ ಭಾಷೆಯಲ್ಲೇ ಉತ್ತರಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಇಂಡಿಯಾ...

ಏರ್ ಇಂಡಿಯಾದಿಂದ ಅಗ್ಗದ ದರದಲ್ಲಿ ಟಿಕೆಟ್ ಮಾರಾಟ

'ಏರ್ ಇಂಡಿಯಾ' ದಿನಾಚರಣೆ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕಂಪನಿ ತನ್ನ ಗ್ರಾಹಕರಿಗೆ ವಿನೂತನ ಆಫರ್ ನೀಡಿದ್ದು ಕೇವಲ 100ರೂಪಾಯಿಗೆ (ತೆರಿಗೆ ಹೊರತುಪಡಿಸಿ)ಟಿಕೆಟ್ ನೀಡುತ್ತಿದೆ. ಇಂಡಿಯನ್ ಏರ್ ಲೈನ್ಸ್ ಮತ್ತು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗಳು ವಿಲೀನಗೊಂಡ ವಾರ್ಷಿಕೋತ್ಸದ ಹಿನ್ನೆಲೆಯಲ್ಲಿ...

ಡಿಜಿಟಲ್ ಇಂಡಿಯಾ ಯೋಜನೆಗೆ ಕೇಂದ್ರ ಸಂಪುಟ ಸಮ್ಮತಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ, ಡಿಜಿಟಲ್ ಇಂಡಿಯಾ ಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಸಮಾಜದ ಆರ್ಥಿಕ ಮತ್ತು ಜ್ನಾನವನ್ನು ವೃದ್ಧಿಸುವ ಕೆಲಸವನ್ನು ಡಿಜಿಟಲ್ ಇಂಡಿಯಾ ಮಾಡಲಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ನಾನ ಇಲಾಖೆ...

ದೇಶ ಮುಂದುವರೆಯುವುದೆಂದರೆ ರಾಜ್ಯಗಳು ಮುಂದುವರೆಯುವುದು- ಪ್ರಧಾನಿ ನರೇಂದ್ರ ಮೋದಿ

ದೇಶ ಮುಂದುವರಿಯುವುದೆಂದರೆ ರಾಜ್ಯಗಳು ಮುಂದುವರಿಯುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಾರ್ಖಂಡ್ ನಲ್ಲಿ ವಿದ್ಯುತ್ ಗ್ರಿಡ್ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಯಾವುದೇ ಭಾಗ ದುರ್ಬಲವಾಗಿರಬಾರದು, ಎಲ್ಲಾ ರಾಜ್ಯಗಳೂ ಅಭಿವೃದ್ಧಿ ಹೊಂದಬೇಕು, ಎಲ್ಲಾ ರಾಜ್ಯಗಳು ಅಭಿವೃದ್ಧಿ...

ಸಮೀಕ್ಷೆ: ನರೇಂದ್ರ ಮೋದಿ ಸರ್ಕಾರದ ಬಗ್ಗೆ ದೇಶಾದ್ಯಂತ ಮೆಚ್ಚುಗೆಯ ಮಹಾಪೂರ

'ನರೇಂದ್ರ ಮೋದಿ' ನೇತೃತ್ವದ ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದು ಮೂರು ತಿಂಗಳು ಕಳೆದಿದ್ದು ಇಂಡಿಯಾ ಟುಡೆ ಮಾಧ್ಯಮ ಹಾಗೂ ಹನ್ಸಾ ರಿಸರ್ಚ್ ಸಂಸ್ಥೆ ಸರ್ಕಾರದ ಜನಪ್ರಿಯತೆ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಸರಕಾರದ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದಿದೆ. ದೇಶಾದ್ಯಂತ ನಡೆಸಲಾಗಿರುವ...

ಟೀಂ ಇಂಡಿಯಾ ನಿರ್ದೇಶಕರಾಗಿ ರವಿಶಾಸ್ತ್ರಿ ನೇಮಕ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಿಣಿಯ ಹೀನಾಯ ಸೋಲಿನ ಹಿನ್ನಲೆಯಲ್ಲಿ ಎಚ್ಚೆತ್ತ ಬಿಸಿಸಿಐ ಟೀಂ ಇಂಡಿಯಾಗೆ ಮೇಜರ್ ಸರ್ಕರಿ ಮಾಡಿದ್ದು, ಹೊಸ ನಿರ್ದೇಶಕರನ್ನು ನೇಮಕ ಮಾಡಿದೆ. ರವಿ ಶಾಸ್ತ್ರಿಯವರನ್ನು ಟೀಂ ಇಂಡಿಯಾದ ಏಕದಿನ ತಂಡದ ನಿರ್ದೇಶಕರನ್ನಾಗಿ ಬಿಸಿಸಿಐ ನೇಮಕ ಮಾಡಿದೆ. 5 ಟೆಸ್ಟ್ ಪಂದ್ಯಗಳಿಗೆ...

ಪ್ರಧಾನ ಮಂತ್ರಿಯಲ್ಲ, ಪ್ರಧಾನ ಸೇವಕನಿಂದ ಸ್ವಾತಂತ್ರ್ಯೋತ್ಸವದ ಶುಭಾಷಯಗಳು-ಮೋದಿ

'ಸ್ವಾತಂತ್ರ್ಯ ದಿನಾಚರಣೆ' ಹಿನ್ನೆಲೆಯಲ್ಲಿ ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ಐತಿಹಾಸಿಕ ಭಾಷಣ ಮಾಡಿದರು. 68ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ, ನಾನು ಈ ದೇಶದ ಪ್ರಧಾನ ಮಂತ್ರಿಯಲ್ಲ ಪ್ರಧಾನ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited