Untitled Document
Sign Up | Login    
Dynamic website and Portals
  
January 15, 2015

ಮೈಸೂರು ಇನ್ಫಿ ಕ್ಯಾಂಪಸ್‌ ದೇಶದ ಮೊದಲ ಸ್ಮಾರ್ಟ್‌ಸಿಟಿ

ನವದೆಹಲಿ : ದೇಶದಲ್ಲಿ ಬರೋಬ್ಬರಿ 100 ಮಾದರಿ ಸ್ಮಾರ್ಟ್‌ಸಿಟಿಗಳನ್ನು ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಯ ಮೊದಲ ಹೆಗ್ಗಳಿಕೆ ಮೈಸೂರಿಗೆ ಪ್ರಾಪ್ತವಾಗುವುದು ಬಹುತೇಕ ಖಚಿತವಾಗಿದೆ.

ಮೈಸೂರಿನಲ್ಲಿ ದೇಶದ ಪ್ರತಿಷ್ಠಿತ ಮಾಹಿತಿ-ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ನಿರ್ಮಿಸಿರುವ ಬೃಹತ್‌ ಕ್ಯಾಂಪಸ್‌ ಅನ್ನೇ ಸ್ಮಾರ್ಟ್‌ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದನ್ನೇ ದೇಶದ ಮೊದಲ ’ಮಾದರಿ ಸ್ಮಾರ್ಟ್‌ಸಿಟಿ' ಎಂದು ಘೋಷಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಸ್ವತಃ ಇನ್ಫೋಸಿಸ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶಾಲ್‌ ಸಿಕ್ಕಾ ತಿಳಿಸಿದ್ದಾರೆ.

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌ಗೆ ಭೇಟಿ ನೀಡಲು ಮೋದಿ ಒಪ್ಪಿಕೊಂಡಿದ್ದು, ಅವರು ಇದೇ ತಿಂಗಳ ಏಪ್ರಿಲ್‌ನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ ಎಂದೂ ಸಿಕ್ಕಾ ಹೇಳಿದ್ದಾರೆ.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ರಾಜನಾಥ ಸಿಂಗ್‌ ಅವರನ್ನು ರಾಜಧಾನಿಯಲ್ಲಿ ಬುಧವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಕ್ಕಾ, "ಮೈಸೂರು ಇನ್ಫೋಸಿಸ್‌ ಸಂಸ್ಥೆಯ ಆವರಣ 30 ಸಾವಿರ ಜನಸಂಖ್ಯೆ ಹೊಂದಿದ್ದು, 350 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇಲ್ಲಿ ಸಕಲ ಸವಲತ್ತುಗಳಿವೆ. 2 ಲಕ್ಷ ಗಿಡ-ಮರಗಳಿವೆ. ಆವರಣವು ಇಂಧನ ದಕ್ಷತೆ ಹೊಂದಿದೆ. ನರೇಂದ್ರ ಮೋದಿ ಅವರ ಕನಸಿನ ಸ್ವತ್ಛ ಭಾರತ ಮತ್ತು ಸ್ಮಾರ್ಟ್‌ ಸಿಟಿ ಯೋಜನೆಗೆ ಅನುಗುಣವಾಗಿ ಮೈಸೂರು ಇನ್ಫೋಸಿಸ್‌ ನಗರವಿದೆ. ಇಲ್ಲಿ ಎಲ್ಲವೂ ಡಿಜಿಟಲ್‌ (ಇಡೀ ಕ್ಯಾಂಪಸ್‌ ಮತ್ತು ಶೌಚಾಲಯ ವ್ಯವಸ್ಥೆ ಸೇರಿದಂತೆ) ಎಂದು ವಿವರಿಸಿದರು. ಮೈಸೂರು ಇನ್ಫೋಸಿಸ್‌ ಸ್ಮಾರ್ಟ್‌ ಸಿಟಿ ಉದ್ಘಾಟನೆಗೆ ಏಪ್ರಿಲ್‌ನಲ್ಲಿ ಆಗಮಿಸಲು ಮೋದಿ ಒಪ್ಪಿಕೊಂಡಿದ್ದಾರೆ ಎಂದು ಸಿಕ್ಕಾ ಮಾಹಿತಿ ನೀಡಿದರು.

ಸಾಫ್ಟ್ವೇರ್‌ ಅಭಿವೃದ್ಧಿಗೆ 1500 ಕೋಟಿ: ದೇಶದ ಸಾಫ್ಟ್ವೇರ್‌ ಕ್ಷೇತ್ರದ ಅಭಿವೃದ್ಧಿಗಾಗಿ ಇನ್ಫೋಸಿಸ್‌ 1500 ಕೋಟಿ ರೂ. ನೀಡಲಿದೆ ಎಂದು ಮೋದಿ ಅವರಿಗೆ ಈ ವೇಳೆ ತಾವು ತಿಳಿಸಿದ್ದಾಗಿ ಹೇಳಿದ ಸಿಕ್ಕಾ, ಇದಕ್ಕೆ ’ಇನ್ನೋವೇಟಿವ್‌ ಇನ್‌ ಇಂಡಿಯಾ' ಎಂದು ಹೆಸರಿಡಲಾಗಿದೆ ಎಂದರು.

ಇನ್ನು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 2016ರಲ್ಲಿ ಕುಂಭ ಮೇಳ ನಡೆಯಲಿದ್ದು, ಇದರ ನಿರ್ವಹಣೆಗೆ ಇನ್ಫೋಸಿಸ್‌, ಸಾಫ್ಟ್ವೇರ್‌ ರಚಿಸಿಕೊಡಲಿದೆ ಎಂದು ಮೋದಿ ಅವರಿಗೆ ಸಿಕ್ಕಾ ಭರವಸೆ ನೀಡಿದರು.

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಒಂದು ಪುಟ್ಟ ಸ್ಮಾರ್ಟ್‌ಸಿಟಿ. 350 ಎಕರೆ ವಿಸ್ತೀರ್ಣದ ಈ ಕ್ಯಾಂಪಸ್‌ನಲ್ಲಿ ಯಾವಾಗಲೂ ಕನಿಷ್ಠ 30 ಸಾವಿರ ಜನ ಕೆಲಸ ಮಾಡುತ್ತಾರೆ. 2 ಲಕ್ಷ ಮರಗಳಿರುವ ಈ ಕ್ಯಾಂಪಸ್‌ ಹಸಿರಿನಿಂದ ಕಂಗೊಳಿಸುತ್ತಿದೆ. ಇಂಧನ ದಕ್ಷತೆ ಇದಕ್ಕಿದೆ. ಇದನ್ನು ನಾವು ಮಾದರಿ ಸ್ಮಾರ್ಟ್‌ಸಿಟಿಯನ್ನಾಗಿ ಅಭಿವೃದ್ಧಿಪಡಿಸುತ್ತಿದ್ದು, ಏಪ್ರಿಲ್‌ನಲ್ಲಿ ಇದರ ಲೋಕಾರ್ಪಣೆಗೆ ಆಗಮಿಸಲು ಪ್ರಧಾನಿ ಮೋದಿ ಒಪ್ಪಿಕೊಂಡಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited