ಬೆಂಗಳೂರು : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಮೂವರು ಶಂಕಿತ ಹಂತಕರ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ ಸಿದ್ದಿಗೋಷ್ಠಿ ನಡೆಸಿದ ಎಸ್ಐಟಿ ಮುಖ್ಯಸ್ಥ ಬಿಕೆ ಸಿಂಗ್, ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಂಕಿತರ ರೇಖಾಚಿತ್ರವನ್ನು ಬಿಡಸಲಾಗಿದೆ. ಸಿಸಿಟಿವಿಯಲ್ಲಿ ಹಂತಕರ ಚಿತ್ರ ಸೆರೆಯಾಗಿದೆ. ಸ್ಥಳೀಯರ ನೆರವು ಪಡೆದು ಶಂಕಿತರ ರೇಖಾಚಿತ್ರವನ್ನು ರಚಿಸಲಾಗಿದೆ. ಎಂದು ಶಂಕಿತ ಹಂತಕರ ರೇಖಾ ಚಿತ್ರ ಬಿಡುಗಡೆಗೊಳಿಸಿದರು.
ಗೌರಿ ಲಂಕೇಶ್ ಮನೆ ಬಳಿ ಎರಡು ಬೈಕ್ ನಲ್ಲಿ ಮೂವರು ದುಶ್ಕರ್ಮಿಗಳು ಆಗಮಿಸಿದ್ದಾರೆ, ಇಬ್ಬರು ಒಂದು ಬೈಕ್ ನಲ್ಲಿ, ಮತ್ತೊಬ್ಬ ಇನ್ನೊಂದು ಬೈಕ್ ನಲ್ಲಿದ್ದ, ಮೂವರು ಕೂಡ ಹೆಲ್ಮೆಟ್ ಧರಿಸಿದ್ದರಿಂದ ಅವರು ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ, ಆದರೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಶಂಕಿತ ಹಂತಕನ ರೇಖಾ ಚಿತ್ರ ಬಿಡಿಸಲಾಗಿದೆ ಎಂದರು.
7.65ಎಂಎಂ ಕಂಟ್ರಿ ಮೇಡ್ ಪಿಸ್ತೂಲ್ ನಿಂದ ಗೌರಿ ಲಂಕೇಶ್ ಅವರ ಹತ್ಯೆ ನಡೆಸಲಾಗಿದೆ. ಅಷ್ಟೇ ಅಲ್ಲ ಶಂಕಿತ ಹಂತಕರು 7 ದಿನಗಳಿಂದ ಬೆಂಗಳೂರಿನಲ್ಲಿದ್ದ ಶಂಕೆ ಇದ್ದಿರುವುದಾಗಿ ತಿಳಿಸಿದರು.