Untitled Document
Sign Up | Login    
Dynamic website and Portals
  
October 12, 2017

ಕಾಲೇಜು ಉಪನ್ಯಾಸಕರಿಗೆ ದೀಪಾವಳಿ ಕೊಡುಗೆ: ವೇತನ ಹೆಚ್ಚಳಕ್ಕೆ ಕೇಂದ್ರ ಸಂಪುಟ ಸಮ್ಮತಿ

ಕಾಲೇಜು ಉಪನ್ಯಾಸಕರಿಗೆ ದೀಪಾವಳಿ ಕೊಡುಗೆ: ವೇತನ ಹೆಚ್ಚಳಕ್ಕೆ ಕೇಂದ್ರ ಸಂಪುಟ ಸಮ್ಮತಿ

ನವದೆಹಲಿ : ಕಾಲೇಜು ಉಪನ್ಯಾಸಕರು ಮತ್ತು ಪ್ರಾಧ್ಯಾಪಕರಿಗೆ ಕೇಂದ್ರ ಸರ್ಕಾರ ಈ ಬಾರಿ ದಿಪಾವಳಿಗೆ ಭರ್ಜರಿ ಕೊಡುಗೆ ನೀಡಿದೆ. ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವ ವಿವಿಗಳಲ್ಲಿನ ಸುಮಾರು 7.5 ಲಕ್ಷ ಉಪನ್ಯಾಸಕರಿಗೆ ಶೇ. 22ರಿಂದ 28ರಷ್ಟು ವೇತನ ಹೆಚ್ಚಿಸುವ ಪ್ರಸ್ತಾವದ ಬಗ್ಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ

ಈ ಮೂಲಕ ಉಪನ್ಯಾಸಕರ ವೇತನ 10 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳ ವರೆಗೆ ಏರಿಕೆಯಾಗಲಿದೆ. ಈ ನಿರ್ಧಾರ 2016ರ ಜ.1 ರಿಂದಲೇ ಪೂರ್ವಾನ್ವಯವಾಗಲಿದೆ ಎಂದು ಕೇಂದ್ರ ಸಂಪುಟ ಸಭೆಯ ಬಳಿಕ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾಬ್ಡೇಕರ್‌ ತಿಳಿಸಿದ್ದಾರೆ.

ಆಯಾ ವಿಭಾಗಗಳಲ್ಲಿರುವ ಉಪನ್ಯಾಸ ಕರ ಸೇವಾವಧಿಯನ್ನು ಪರಿಗಣಿಸಿ ನಿಯಮ ಜಾರಿಯಾಗಲಿದೆ. ಯಾವುದೇ ವಿಭಾಗದಲ್ಲಿರುವ ಹಿರಿಯ ಪ್ರಾಧ್ಯಾಪಕರಿಗೆ ಗರಿಷ್ಠ ವೆಂದರೆ 50 ಸಾವಿರ ರೂ.ಗಳಷ್ಟು ವೇತನ ಏರಿಕೆಯಾಗಲಿದೆ. ಅಲ್ಲದೆ, 10 ಸಾವಿರ ರೂ. ಏರಿಕೆಯಾದರೂ ಉಪನ್ಯಾಸಕರಿಗೆ ಎರಿಯರ್ಸ್‌ ರೂಪದಲ್ಲೇ ಅಂದಾಜು 2 ಲಕ್ಷ ರೂ. ಹೆಚ್ಚುವರಿಯಾಗಿ ಸಿಗಲಿದೆ. ಕೇಂದ್ರ ಸರಕಾರಿ ನೌಕರರ ಏಳನೇ ವೇತನ ಆಯೋಗದ ಶಿಫಾರಸುಗಳ ಮಾದರಿಯಲ್ಲೇ ಇಲ್ಲೂ ವೇತನ ಹೆಚ್ಚಿಸಲಾಗಿದೆ.

 

 

Share this page : 
 

Table 'bangalorewaves.bv_news_comments' doesn't exist