ಎನ್.ಡಿ.ಯೆ ಸರಕಾರ ರೈಲ್ವೇ ಪ್ರಯಾಣ ದರವನ್ನು ಶೇ.14 ರಷ್ಟು ಏರಿಸಿದೆ. ನಷ್ಟದಲ್ಲಿ ನಡೆಯುತ್ತಿರುವ ಭಾರತೀಯ ರೈಲ್ವೇ ಯನ್ನು ವಾಪಸ್ ಸುಸ್ತಿಗೆ ತರಲು ದರ ಏರಿಕೆ ಅನಿವಾರ್ಯ ಎಂದು ಸರಕಾರ ಹೇಳಿದೆ. ಅಲ್ಲದೆ, ಡೀಸೆಲ್ ಬೆಲೆ ಕೂಡಾ ಇತ್ತೀಚಿನ ದಿನಗಳಲ್ಲಿ ಹೆಚ್ಚಿದ್ದು, ರೈಲ್ವೇ ಇಲಾಖೆ ಮೇಲೆ ಇದು ಸಹ ವ್ಯತಿರಿಕ್ತ ಪರಿಣಾಮ ಬೀರಿದೆ, ಆದ್ದರಿಂದ ದರ ಏರಿಕೆಯನ್ನು ಸಮರ್ಥಿಸಲಾಗಿದೆ.
ದರ ಏರಿಕೆ ಬಗ್ಗೆ, ಹಾಗೂ ಭಾರತೀಯ ರೈಲ್ವೇಯನ್ನು ಹಳಿಗೆ ತರಲು ನಿಮ್ಮ ಸಲಹೆಗಳೇನು ? ಇಲ್ಲಿ ವ್ಯಕ್ತಪಡಿಸಿ...
ಅಗತ್ಯವಿಲ್ಲ.
ರಾಜ ಗುರು ಹೇಳಿದ್ದು ಸರಿಯಾಗಿದೆ ... ಗುಜರಿ ಗೆ ಹಾಕೋಕ್ಕೆ ಬೇಕಾದಷ್ಟು ಇವೆ ರೈಲ್ವೆ ಲಿ ... ಅದೆನೆಲ್ಲ... ಸರಿಯಾಗಿ ನಿರ್ವೈಸಿದ್ದೆ ಆದ್ರೆ ಬೇಕಾದಷ್ಟು ಅದ್ಯ ಬರುತ್ತೆ
ಹಿನ್ದಿನ ಕಾನ್ಗ್ರೆಸ್ ಸರಕಾರ ಮೊದಲೆ ದರ ಎರಿಕೆ ಬಗ್ಗೆ ಸುಲಿವು ನೀದಿತ್ತು .. ಆದರೆ ಚುನಾವನೆ ಕಾರನದಿನ್ದ ಆಜ್ನೆ ಹೊರದಿಸಿರಲಿಲ್ಲ..
ಈಗಿನ ದರ ಏರಿಕೆ ಯುಪಿಯೆ ಸರಕಾರ ನಿರ್ಧಾರವಾಗಿದ್ದು, ರೈಲ್ವೇಯನ್ನು ಇಂಥ ಸ್ಥಿತಿಗೆ ತಂದ ಯುಪಿಯೆ ಇದ್ದಕೆ ಹೊಣೆ. ಆದರೆ ರೈಲ್ವೆ ಇಲಾಖೆಯನ್ನು ಅಭಿವೃದ್ಧಿಗೊಳಿಸಲು ನನ್ನ ಸಲಹೆಗಳು -
೧. ರೈಲ್ವೇಯನ್ನು ಆಧುನೀಕರಿಸುವುದು. ಇನ್ನೂ ೨೦-೩೦ ಕಿ.ಮಿ. ವೇಗದಲ್ಲಿ ಚಲಿಸುವ, ಡೀಸೆಲ್ ಕಬಳಿಸುವ ಎಣ್ಜಿನ್ ಗಳ ಬದಲಾಗಿ ಹೊಸ ಎಂಜಿನ್, ಸುಸಜ್ಜಿತ ಬೋಗಿಗಳನ್ನು ಹಾಕುವುದು. ಇದರಿಂದ ಹೆಚ್ಚಿನ ಜನರು ರೈಲ್ವೇ ಸಾರಿಗೆಯನ್ನು ಉಪ್ಯೋಗಿಸಬಹುದು, ಇದರಿಂದ ಆದಾಯ ಹೆಚ್ಚುತ್ತದೆ.
೨. ರೈಲ್ವೇಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಆಸ್ಥಿ ಇದೆ. ಇದನ್ನು ಲೀಸ್ / ಬಾಡಿಗೆ ಗೆ ಕೊಟ್ಟು ಆದಾಯ ಗಳಿಸಬಹುದು.
೩. ರೈಲ್ವೇಯಲ್ಲಿ ಖಾಸಗಿಯವರಿಗೂ ಅವಕಾಶ ಕೊಡುವುದು. ಅಂದರೆ ಹಳಿಗಳನ್ನು ಬಾಡಿಗೆಗೆ ಕೊಟ್ಟು, ಅದರಿಂದ ಖಾಸಗಿಯವರು ರೈಲು ಓಡಿಸಿ, ಅದರೈಂದ ಬರುವ ಅದಾಯದಲ್ಲಿ ರೈಲ್ವೇ ಪಾಲು ಪಡೆಯುವುದು. ಅಲ್ಲದೆ, ಖಾಸಗಿ ಕಂಪನಿಗಳಿಗೆ ಹೊಸ ರೈಲು ಮಾರ್ಗ ರಚಿಸಲು ಪರವಾನಿಗೆ ಕೊಡುವುದರ ಮೂಲಕ ರೈಲು ಸಂಪರ್ಕಹೆಚ್ಹುತ್ತದೆ.
೪. ಅನೇಕ ರೈಲು ಮಾರ್ಗಗಳಲ್ಲಿ (ರೂಟ್) ಸಾಕಷ್ಟು ರೈಲುಗಳೇ ಇಲ್ಲ. ಪ್ರಯಾಣಿಕರು ೧-೨ ತಿಂಗಳುಗಳ ಮುಂಚೆ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಅಂಥ ರೂಟ್ ಗಳಲ್ಲಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕು.
೫. ಟಿಕೆತ್ ರಹಿತ ಪ್ರಯಾಣ ಹಾಗೂ ರೈಲ್ವೇ ಸೊತ್ತುಗಳ ಕೞತನ ದೊಡ್ಡ ಸಮಸ್ಯೆ. ಇದನ್ನು ತಡೆಗಟ್ಟಿದರೆ ರೈಲ್ವೇಗೆ ಇನ್ನಷ್ಟು ಆದಾಯ ಬರುತ್ತದೆ, ನಷ್ಟ ಕಡಿಮೆಯಾಗುತ್ತದೆ.
೬.
ನಿಮ್ಮ ಮಾತು ನಿಜ..
Very good points, well said.
ಒಂದೇ ಸಲ ಬೆಲೆ ಏರಿಕೆ ಸಾಮಾನ್ಯ ಜನರಿಗೆ ಹೊರೆ
ರೈಲ್ವೆ ಗುಜರಿ ಮಾರಾಟ ಮಾಡಿದರೆ ಇಲಾಖೆಗೆ ಬಹಳಷ್ಟು ಆದಾಯ ಲಭಿಸಬಹುದು. ಹಳೆ ಬೋಗಿಗಳು, ಉಪಯೋಗಕ್ಕೆ ಬಾರದ ರೈಲ್ವೆ ಹಳಿಗಳು ಹಾಗೂ ಇನ್ನಿತರೆ ಗುಜರಿ ವಸ್ತುಗಳನ್ನು ಹಾಗೆಯೇ ಬಿಡಲಾಗಿದೆ. ಸಚಿವ ಸದಾನಂದ ಗೌಡರು ಇದರ ವಿಲೇವಾರಿಗೆ ಆದೇಶ ನೀಡಿದರೆ, ಈ ಬಾರಿ ರೈಲ್ವೆ ದರ ಏರಿಸದೆಯೇ ಪ್ರಯಾಣಿಕರಿಗೆ ಹೊರೆಯಾಗದಂತೆ ಅಭಿವೃದ್ಧಿ ಕಡೆಗೆ ಗಮನಹರಿಸಬಹುದು.
ರಾಜಾಗುರುವರ ಸಲಹೆ ಸರಿಯಾಗಿದೆ. ದರ ಹೆಚ್ಚಿಸಿ, ಸಾಮಾನ್ಯ ಜನರಿಗೆ ಬರೆ ಹಾಕುವ ಬದಲು ಬೇರೆ ರೀತಿಯಿಂದಲೂ ಸಮಸ್ಯೆ ಬಗೆಹರಿಸುವತ್ತ ಸರ್ಕಾರ ಗಮನಕೊಡಬೇಕು.
ನಮ್ಮ ರೈಲ್ವೆಯಲ್ಲಿ ಖಂಡಿತಾ ಬದಲಾವಣೆ ಅಗತ್ಯ. ಗುಣಮಟ್ಟ ಹೆಚ್ಚಿಸಲು ದರದ ಹೆಚ್ಚಳ ಅಗತ್ಯವಿರಬಹುದು. ದರ ಹೆಚ್ಚಳ ಮಾಡಿದರು ತೊಂದರೆಯಿಲ್ಲ ಅದರ ಜೊತೆಗೆ ಗುಣಮಟ್ಟ, ಸ್ವಚ್ಚತೆಗೆ ಆದ್ಯತೆ ಕೊಡಬೇಕು
ಅನಿತಾ ಅವರು ಹೇಳಿದ್ದು ಸರಿ. ದರ ಹೆಚ್ಚು ಮಾಡಿದರೂ ಆಧುನೀಕರಣಕ್ಕೆ ಪ್ರಾಶಸ್ತ್ಯ ಕೊಡಬೇಕು