Untitled Document
Sign Up | Login    
Dynamic website and Portals
  

ದೇಶ ಸೇವೆಗೆ ಉನ್ನತ ವಿದ್ಯಾಭ್ಯಾಸ ಅನಿವಾರ್ಯವೆ?

May 29, 2014

ಲೋಕಸಭಾ ಚುನಾವಣೆಯಲ್ಲಿ ಎರಡು ಅಂಕಿ ಸ್ಥಾನಗಳನ್ನು ದಾಟದೇ ಪ್ರತಿಪಕ್ಷ ಸ್ಥಾನವನ್ನೂ ಉಳಿಸಿಕೊಳ್ಳಲು ಅರ್ಹತೆ ಪಡೆಯದ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಸದಸ್ಯೆ ಸ್ಮೃತಿ ಇರಾನಿ ಅವರ ವಿದ್ಯಾರ್ಹತೆಯನ್ನು ಧಾರಾಳವಾಗಿ ಪ್ರಶ್ನಿಸುತ್ತಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶವನ್ನು ಬಹುಕಾಲ ಆಳಿರುವ ಕಾಂಗ್ರೆಸ್ ನಲ್ಲಿ ಅಕ್ಷರಸ್ಥರಿದ್ದರೂ ಸಾಮಾನ್ಯಜ್ನಾನ, ಕನಿಷ್ಠ ತಿಳುವಳಿಕೆಯ ಕೊರತೆಯಿಂದ ಬಳಲುತ್ತಿದ್ದ ಕೆಲ ನಾಯಕರು ಸ್ವಹಿತಾಸಕ್ತಿಯ ಏಕೈಕ ಕಾರಣದಿಂದ ದೇಶದ ಹಿತಾಸಕ್ತಿಯನ್ನೇ ಬಲಿಕೊಟ್ಟು ಭಾರತದ ಅಭಿವೃದ್ಧಿಯನ್ನು ತಮ್ಮ ಬುದ್ಧಿಮಟ್ಟಕ್ಕಿಂತಲೂ ಕೆಳಮಟ್ಟಕ್ಕೆ ತಳ್ಳಿದ್ದು ಎಲ್ಲರಿಗೂ ತಿಳಿದೇ ಇದೆ. ನೆಹರು ಅವರಿಂದ ಹಿಡಿದು ಮನಮೋಹನ ಸಿಂಗ್ ತನಕ ಕಾಂಗ್ರೆಸ್ ಇತಿಹಾಸವನ್ನು ತಿರುವಿಹಾಕಿದರೆ ಅದೆಷ್ಟೋ ನಿರಕ್ಷರ ಕುಕ್ಷಿಗಳು ಕುಟುಂಬ ನಿಷ್ಠೆಯ ಅರ್ಹತೆ ಮಾತ್ರದಿಂದಲೇ ಆಯಕಟ್ಟಿನ ಸ್ಥಾನ ಅಲಂಕರಿಸಿದ್ದಿದೆ. ಪ್ರಪಂಚದಲ್ಲೇ ಅತ್ಯಂತ ವಿದ್ಯಾವಂತ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾದ ಮನಮೋಹನರ ಆಢಳಿತ ಕಾಲದಲ್ಲಿ ಭಾರತ ಕಂಡಿದ್ದು ಪಾತಾಳವನ್ನೇ. ಡಿಗ್ರಿಯೊಂದೇ ಅರ್ಹತೆ ಎನ್ನುವುದಾದರೆ, ಮನಮೋಹನರ ಆಡಳಿತದಲ್ಲಿ ಭಾರತ ಇತಿಹಾಸದಲ್ಲೇ ಅತ್ಯಂತ ಉನ್ನತಿಯನ್ನು ಹೊಂದಬೇಕಾಗಿತ್ತು, ಆದದ್ದೇ ಬೇರೆ..

ಅಪರೂಪಕ್ಕೊಮ್ಮೆ ಎಚ್ಚೆತ್ತುಕೊಂಡಿರುವ ಭಾರತದ ನಾಗರಿಕ ಪ್ರಪಂಚ, ಗಟ್ಟಿ ನಾಯಕತ್ವಕ್ಕೆ ಸಂಪೂರ್ಣ ಬೆಂಬಲ ನೀಡಿ ದೇಶದ ಅಭಿವೃದ್ಧಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಐತಿಹಾಸಿಕ ತೀರ್ಪು ನೀಡಿದೆ. ವಿದ್ಯಾರ್ಹತೆ ಇಲ್ಲದೇ ಇದ್ದರೂ ಜನರ ನಾಡಿಮಿಡಿತ ಅರಿತ ಸಂವೇದನಾಶೀಲ ವ್ಯಕ್ತಿತ್ವಕ್ಕೆ ದೇಶ ಅಭಿವೃದ್ಧಿಗೊಳಿಸುವ ಸದಾವಕಾಶ ದೊರೆತಿದೆ. ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ವಿದ್ಯಾರ್ಹತೆ 10ನೇ ತರಗತಿ, ಆದರೆ ಕಾಂಗ್ರೆಸ್ ನವರೇ ಅವರನ್ನು ಆದರಿಸಿ ರಾಜ್ಯ ಸಭಾ ಸ್ಥಾನ, ಭಾರತ ರತ್ನ ನೀಡಿದ್ದಾರೆ. ಪ್ರಮಾಣಪತ್ರದ ಮೂಲಕ ಬೆಳಕಿಗೆ ಬಾರದ ಅದೆಷ್ಟೋ ಪ್ರತಿಭೆಗಳು ಕಾರ್ಯವೈಖರಿಯಿಂದ ಸಾರ್ವಜನಿಕ ವಲಯದಲ್ಲಿ ತಾವು ಮಾಡಿರುವ ಉತ್ತಮ ಕೆಲಸಗಳಿಂದ ಇಂದಿಗೂ ಜನಪ್ರಿಯವಾಗಿವೆ.

ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳ 'ವಿದ್ಯಾವಂತ' ಎನಿಸಿಕೊಂಡ ನಾಯಕರು ಸಾರ್ವಜನಿಕ ಘನತೆಯನ್ನೇ ಮೀರಿ ತಮ್ಮ ವಿರೋಧಿಗಳನ್ನು ಹಳಿಯುವುದನ್ನು ನೋಡಿದರೆ, ದೇಶ ಸೇವೆಗೆ ಟೊಂಕಕಟ್ಟಿ ನಿಂತ ನಾಯಕರಿಗೆ ಕೇವಲ ಉಚ್ಚ ಡಿಗ್ರಿಗಳು, ಸರ್ಟಿಫಿಕೇಟುಗಳು ಇದ್ದರೆ ಸಾಕೆ, ಅಥವಾ, ದೇಶದ, ಜನತೆಯ ಅಭಿವೃದ್ಧಿಗಾಗಿ, ಕಳಕಳಿ, ಭಕ್ತಿ, ಸಂವೇದನೆ, ನಿಷ್ಠೆ ಹಾಗೂ ಆಢಳಿತ ದಕ್ಷತೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸಾಮನ್ಯ ಜ್ನಾನ (ಕಾಮನ್ ಸೆನ್ಸ್) ಇತ್ಯಾದಿಗಳು ಹೆಚ್ಚು ಅಗತ್ಯ ಅನಿಸುತ್ತದೆಯೆ?..

ಸ್ವಪ್ರಯತ್ನ, ಛಲ ಹಾಗೂ ಕಠಿಣಶ್ರಮದಿಂದ ರಾಜಕೀಯ ಜೀವನದಲ್ಲಿ ಮೇಲೆಬಂದ ಸ್ಮೃತಿ ಇರಾನಿ ಅವರಿಗೆ ಉನ್ನತ ವಿದ್ಯಾರ್ಹತೆ ಇಲ್ಲ, ಹಾಗಾಗಿ ಅವರು ಮಂತ್ರಿ ಹುದ್ದೆಗೆ ಅನರ್ಹ ಎಂಬ ಕಾಂಗ್ರೆಸ್ಸಿಗರ ವಾದ ಎಷ್ಟರ ಮಟ್ಟಿಗೆ ಸರಿ?, ಜನ ಸೇವೆ ಮಾಡಲು ಉನ್ನತ ವಿದ್ಯಾರ್ಹತೆ ಅನಿವಾರ್ಯವೇ?. ನಿಮ್ಮ ಅಭಿಪ್ರಾಯವೇನು?..

 

Share: 

Readers' Comments (4)

Santosh30-05-2014:11:48:06 am

Congress has a loser's mentality. They are still living in dark age and have an arrogant mindset.

ಸೌಮಿತ್ರಿ30-05-2014:11:46:34 am

ಸ್ಮೃತಿ ಇರಾನಿ ತಮ್ಮ ಶ್ರಮದಿಂದ ಮೇಲೆ ಬಂದವರು ಮತ್ತು ಈ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಅವರು ಯಾವುದೇ ಒಬ್ಬ ಮಹಿಳೆಯಾಗಿ ಅವರು ನಮ್ಮಂಥ ಅಸಂಖ್ಯಾತ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಅವರನ್ನು ಟಾರ್ಗೆಟ್ ಮಾಡಿದ ಕಾಂಗ್ರೆಸ್ ನಾಯಕರು ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಉತ್ತಮ ಆಡಳಿತ ನಡೆಸಲು ಯೋಗ್ಯತೆ ಮುಖ್ಯ, ಸರ್ಟಿಫಿಕೇಟ್ ಅಲ್ಲ, ಇಲ್ಲವಾದರೆ, ಎಂ.ಬಿ.ಎ., ಐ.ಐ.ಟಿ. ಓದಿದವರೆಲ್ಲರೂ ಕಡಿಮೆ ಓದಿದವರಿಗಿಂತ ಹೆಚ್ಚು ಯಶಸ್ವಿಯಾಗಬೇಕಿತ್ತು, ಆದರೆ ವಾಸ್ಥವವೇ ಬೇರೆ.

ಕಾರ್ತಿಕ್ ಆರ್.29-05-2014:04:55:23 pm

ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಸ್ಮೃತಿ ಇರಾನಿಯವರನ್ನು ಹೀಯಾಳಿಸಿರುವುದು ಅವಿವೇಕತನದ ಪರಮಾವಧಿ. ಕಾಂಗ್ರೆಸ್ ನಾಯಕಿ ಸೋನಿಯಾ ಏನು ಓದಿದ್ದಾರೆ?. ರಾಹುಲ್ ವಿದ್ಯಾರ್ಹತೆ ಕೂಡಾ ಪ್ರಶ್ನಾರ್ಥಕವಾಗಿದೆ. ಇಂದಿರಾ ಗಾಂಧಿ, ಕೆ.ಕಾಮರಾಜ್ ಇವರೆಲ್ಲ ಸ್ನಾತಕೋತ್ತರ ಪದವಿ ಪಡೆದಿದ್ದರೆ?, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೇವಲ್ ೧೦ನೇ ಕ್ಲಾಸ್! ಆದರೂ ದಕ್ಷ ಆಡಳಿತಗಾರ್ತಿ ಎಂಬ ಹೆಸರು ಗಳಿಸಿಲ್ಲವೆ?. ರಿಲಯನ್ಸ್ ಸಂಸ್ಥೆ ಕಟ್ಟಿದ ಬಿಲಿಯನೇರ್ ಧೀರುಭಾಯ್ ಅಂಬಾನಿ ೧೦ನೇ ಕ್ಲಾಸ್ ಓದಿದವರು ತಾನೆ? ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್ ಮೂತಾದ ಘಟಾನುಘಟಿಗಳು ಕಾಲೇಜು ಮೆಟ್ಟಿಲು ಕೂಡಾ ಹತ್ತಿಲ್ಲ!. ನಮ್ಮ ನಾಡಿನ ಹೆಸರಾಂತ ಸಾಹಿತಿ ಡಾ. ಶಿವರಾಮ ಕಾರಂತರೂ ಮೆಟ್ರಿಕ್ ಅಷ್ಟೇ ಓದಿದ್ದು. ಆದರೂ ನಾವೆಲ್ಲ ಹೆಮ್ಮೆ ಪಡುವಂತೆ ದೇಶವಿದೇಶಗಳಲ್ಲಿ ಹೆಸರುವಾಸಿಯಾಗಿದ್ದಾರೆ, ಮಾತ್ರವಲ್ಲ ಪ್ರತಿಷ್ಟಿತ ಜ್ನಾನಪೀಠ ಪ್ರಶಸ್ಥಿಯನ್ನೂ ಪಡೆದಿದ್ದರು.
ಸ್ಮೃತಿ ಸಣ್ಣ ವಯಸ್ಸಿನಿಂದಲೇ ಕಷ್ಟಪಟ್ಟು ಕೆಲಸ ಮಾಡಿ ಈ ಹಂತ ತಲುಪಿದ್ದಾರೆ. ಯಾರದೇ ಕೈ-ಕಾಲು ಹಿಡಿದು ಜೀವನದಲ್ಲಿ ಮೇಲೆ ಬರಲಿಲ್ಲ. ನಮ್ಮ ಪೂರ್ವಜರು ಎಂ.ಬಿ.ಬಿ.ಎಸ್., ಎಂ.ಡಿ ಮಾಡಿದ್ದರೆ? ಆದರೂ ಆಯುರ್ವೇದ ಪದ್ಧತಿಯಲ್ಲಿ ಮೆದುಳಿನ ಶಸ್ತ್ರ ಚಿಕಿತ್ಸೆ ಕೂಡ ಮಾಡುತ್ತಿರಲಿಲ್ಲವೆ?. ಯಶಸ್ಸು ಪಡೆಯಲು ಸರ್ಟಿಫಿಕೇಟು ಮುಖ್ಯವಲ್ಲ, ಬುದ್ಧಿವಂತಿಕೆ, ಗುರಿ ಸಾಧಿಸುವ ಛಲ, ಕಾಮನ್ ಸೆನ್ಸ್ ಮೂತಾದುವು ಬಹಳ ಮುಖ್ಯ.

ಅವಿನಾಶ್ ಶೆಟ್ಟಿ29-05-2014:12:25:41 pm

ಯಾವುದೇ ಕೆಲಸಕ್ಕೆ ಸರ್ಟಿಫಿಕೇಟ್ ಗಿಂತ ಹೆಚ್ಚಾಗಿ ನಿಪುಣತೆ, ಕಲಿಯುವ ಹುಮ್ಮಸ್ಸು ಮತ್ತು ಗುರಿ ಮುಖ್ಯ. ಡಿಗ್ರಿಗಳೇ ಮುಖ್ಯ ಅಂತಾದರೆ ಮನಮೋಹನ್ ಸಿಂಗ್ ಸರಕಾರ ವಿಫಲವಾಗಿದ್ದು ಯಾಕೆ?. ಕಪಿಲ್ ಸಿಬಲ್ ವಿದ್ಯಾವಂಥ ವ್ಯಕ್ತಿ, ನ್ಯಾಯವಾದಿ ಬೇರೆ. ಆದರೆ ಎಚ್.ಆರ್.ಡಿ. ಮಂತ್ರಿಯಾಗಿ ಅವರು ಮಾಡಿದ ಸಾಧನೆಯೇನು?. ತಮ್ಮ ವಿರೋಧಿಗಳ (ಪ್ರಮುಖವಾಗಿ ಮೋದಿ) ಬಗ್ಗೆ ಕೆಟ್ಟದಾಗಿ ಮಾತನಾಡುವ ಅಂಥವರಿಗೆ ವಿದ್ಯೆ ಇದ್ದೂ ಏನು ಉಪಯೋಗ?. ಅಷ್ಟಕ್ಕೂ, ಸ್ಮೃತಿ ಇರಾನಿ ವಿದ್ಯಾರ್ಹತೆ ಬಗ್ಗೆ ಕೆಟ್ಟದಾಗಿ ಮಾತನಾಡಿದ ಅಜಯ್ ಮಾಕೆನ್ ಅಥವಾ ಅವರಂಥ \'ವಿದ್ಯಾವಂತ\' ಕಾಂಗ್ರೆಸ್ಸಿಗರು ಯಾರಾದರೂ ಸ್ಮೃತಿ ಅವರ ಜೊತೆ ಯಾವುದೇ ವಿಷಯದ ಮೇಲೆ ಚರ್ಚೆಗೆ ಸಿದ್ಧರಿದ್ದಾರೆಯೆ? ಕಾಂಗ್ರೆಸ್ಸಿಗರು ಚುನಾವಣೆಯಲ್ಲಿ ಸೋಲುವುದಕ್ಕೆ ಅವರ ದುರಹಂಕಾರವೇ ಕಾರಣ ಮತ್ತು ದೇಶ ಆಳಲು ತಾವು ಮಾತ್ರ ಅರ್ಹರು ಎಂಬ ಭ್ರಮೆ ಮತ್ತು ಧಾರ್ಷ್ಟ್ಯ ಅವರಿಗೆ ಮುಳುವಾಯ್ತು. ದೇಶ ಬದಲಾಗಿದೆ, ಜನರಿಗೆ ಉತ್ತಮ ಆಡಳಿತ ಬೇಕು. ಕಾಂಗ್ರೆಸ್ಸಿಗರು ಇನ್ನಾದರೂ ಎಚ್ಚೆತ್ತು, ಜನರ ಕಷ್ಟಗಳಿಗೆ ಸ್ಪಂದಿಸಿ ಇರುವ ಮರ್ಯಾದೆ (ಸೀಟು) ಉಳಿಸುವುದು ಒಳಿತು.

Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited