Untitled Document
Sign Up | Login    
Dynamic website and Portals
  

ಅದಿತಿ ವೆಜ್ ರೆಸ್ಟೋರೆಂಟ್‌ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

July 24, 2013
ಅದಿತಿ ವೆಜ್ ರೆಸ್ಟೋರೆಂಟ್‌ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಕಾಂಗ್ರೆಸ್ ಸರ್ಕಾರ ಎ.ಸಿ.ರೆಸ್ಟೋರೆಂಟ್ ಗಳ ಮೇಲೆ ಹೊರಿಸಿರುವ ತೆರಿಗೆಯನ್ನು ವಿರೋಧಿಸಿ ಮುಂಬೈಯಲ್ಲಿರುವ ’ಅದಿತಿ’ ವೆಜ್ ರೆಸ್ಟೋರೆಂಟ್‌ ನ ಮಾಲೀಕ ಶ್ರೀನಿವಾಸ್ ಶೆಟ್ಟಿ ತಮ್ಮ ರೆಸ್ಟೋರೆಂಟ್‌ ನಲ್ಲಿ ಗ್ರಾಹಕರಿಗೆ ನೀಡಲಾಗುವ ಬಿಲ್‌ ನಲ್ಲಿ ಯುಪಿಎ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿರುವ ಟಿಪ್ಪಣಿಯೊಂದನ್ನು ಮುದ್ರಿಸಿದ್ದರು. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಕಾಂಗ್ರೆಸ್ ಕಾರ್ಯಕರ್ತರು, ರೆಸ್ಟೋರೆಂಟ್ ಮಾಲೀಕರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

'ಯುಪಿಎ ಸರ್ಕಾರದ ಪ್ರಕಾರ, ಹಣ (2ಜಿ, ಕಲ್ಲಿದ್ದಲು, ಕಾಮನ್‌ವೆಲ್ತ್ ಗೇಮ್ ಹಗರಣ) ಕೊಳ್ಳೆಹೊಡೆಯುವುದು ಅನಿವಾರ್ಯ, ಆದರೆ ಎ.ಸಿ ರೆಸ್ಟೋರೆಂಟ್‌ ನಲ್ಲಿ ತಿಂಡಿ ತಿನ್ನುವುದು ವಿಲಾಸಿತನ' ಎಂದು ಬಿಲ್ ಮೇಲೆ ಮುದ್ರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭತಿಸಿ ಅದಿತಿ ವೆಜ್ ರೆಸ್ಟೋರೆಂಟ್‌ನ್ನು ಸೋಮವಾರ ಬಂದ್ ಮಾಡಿಸಿದ್ದರು.

ಇಷ್ಟೇ ಅಲ್ಲದೇ ಭಾರತೀಯ ದಂಡ ಸಂಹಿತೆಯ ಪರಿಚ್ಛೇದ 501ರ ಪ್ರಕಾರ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಪ್ರತಿಭಟನೆ ನಡೆದು ಒಂದು ದಿನದ ನಂತರ ಅಂದರೆ, ಜು.23ರಂದು ರೆಸ್ಟೋರೆಂಟ್ ಪುನಾರಂಭಗೊಂಡಿದ್ದು ಬಿಲ್‌ ನಲ್ಲಿರುವ ಟೀಕೆ-ಟಿಪ್ಪಣಿ ಮುಂದುವರೆದಿದೆ.

ದೇಶವನ್ನೇ ವಿನಾಶದಂಚಿಗೆ ಕೊಂಡೊಯ್ಯುತ್ತಿರುವ ಭ್ರಷ್ಠಾಚಾರದ ಬಗ್ಗೆ ವಿರೋಧ ವ್ಯಕ್ತಪಡಿಸುವುದೂ ಕೂಡಾ ಅಪರಾಧವೇ ? ಈ ಬಗ್ಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು ನಿಮಗಿದೋ ಅಹ್ವಾನ..

 

Share: 

Readers' Comments (14)

ಮೋದಿ ಅಭಿಮಾನಿ24-07-2013:10:46:33 pm

ಯುಪಿಎ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಧಿಕ್ಕಾರ, 1975ರಲ್ಲಿ ತುರ್ತು ಪರಿಸ್ಥಿತಿ ಎದುರಾಗಿತ್ತು, ಅಂದು ಸರ್ಕಾರದ ವಿರುದ್ಧ ಯಾರೇ ಮಾತನಾಡುವುದಕ್ಕೆ ನಿಷೇಧವಿತ್ತು. 2013ರಲ್ಲೂ ಅಘೋಷಿತ ತುರ್ತು ಪರಿಸ್ಥಿತಿ ಎದುರಾಗುವ ಲಕ್ಷಣಗಳು ದಟ್ಟವಾಗಿದೆ. ಕೇಂದ್ರ ಸರ್ಕಾರ ಎ.ಸಿ.ರೆಸ್ಟೋರೆಂಟ್ ಗಳ ಮೇಲೆ ತೆರಿಗೆ ಹೆಚ್ಚಿಸಿದ್ದರಿಂದ ರೆಸ್ಟೋರೆಂಟ್ ಮಾಲಿಕರು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ ಉತ್ತಮ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಇದನ್ನು ಸಹಿಸದ ಕಾಂಗ್ರೆಸ್ ಕಾರ್ಯಕರ್ತರು ರೆಸ್ಟೋರೆಂಟ್ ವಿರುದ್ಧವೇ ಅನಾಗರೀಕ ರೀತಿಯಲ್ಲಿ ಪ್ರತಿಭಟನೆ ನಡೆಸುವುದೇ? ಯುಪಿಎ ಸರ್ಕಾರ ಹಾಗೂ ಅದರ ಕಾರ್ಯಕರ್ತರ ಧೋರಣೆ ಹೀಗೆ ಮುಂದುವರೆದರೆ ಭಾರತದಲ್ಲಿಯೂ ಹಿಟ್ಲರ್ ರೀತಿಯ ಆಡಳಿತ ವ್ಯವಸ್ಥೆ(ಹಿಟ್ಲರಿಸಂ) ಜಾರಿಗೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ! ಎಚ್ಚರ

Mahesh24-07-2013:10:57:48 pm

i agree with you Modi Abhimaani....

ಮೋದಿ ಅಭಿಮಾನಿ24-07-2013:11:40:50 pm

thank you mahesh

Circuit Circulate24-07-2013:06:28:55 pm

think and vote

Puneeth M Viswakarma24-07-2013:05:49:46 pm

When truth is seen reaction will be like this...

Nagaraj24-07-2013:03:16:32 pm

beware of national congress party from past 60 years, by passing local bills by providing reservation,free food and drinks to create vote bank, in 1917 USD 13 Dollars = INR RS--1.
in 2013 INR 60 Rupees = 1 Dollar

This is the development made by UPA Government, and bangalore is the targeted decompose by garbage and lack forest and water there is no proper drainage.soooooooooooooooo pleaseeeeeeeeeeeeeeeeeeeeeeeeeeeeeeeeee. fight

prasad24-07-2013:02:23:53 pm

ಇಲ್ಲಿ ಕಮೆ೦ಟ್ ಮಾಡಿದರೂ ಹಲ್ಲೆ ಮಾಡಬಹುದು....ಹಹಹಹ....

Deepa24-07-2013:05:50:37 pm

True...

ಸುಮೇಶ್24-07-2013:07:13:06 pm

ಹೌದು, ಸರಿಯಾಗಿ ಹೇಳಿದ್ರಿ..

Subrato24-07-2013:02:19:36 pm

Intolerance is the hall mark of Congress.. The lameduck Prime Minister is simply enjoying all the tamasha as he knows very well that he got two terms as PM not because of his capability, but just because Sonia wanted a 'Yes man' as PM. But the Congresswallas want to come to one more term and completely ruin this country.

Beware Indians.. Wake up otherwise this country will become another Pakistan.

Dinesh24-07-2013:01:52:28 pm

Wake up India, Wake up...

ಗೀತಾ24-07-2013:01:35:42 pm

ದೇಶದ ಪರಿಸ್ಥಿತಿಯನ್ನ ಎಂತಾ ಸ್ಥಿತಿಗೆ ತಂದಿದ್ದಾರೆ ಈ ದೇಶ ಆಳುವವರು...? ಅದನ್ನ ಹೇಳುವುದು ಒಂದು ಅಪರಾಧ ಅಂತ ಹೇಳಿದರೆ ಹೇಗೆ..? ಜನರಿಗೆ ಈ ಸರ್ಕಾರದ ಬಗ್ಗೆ ಎಷ್ಟು ರೋಸಿ ಹೋಗಿದೆ ಅನ್ನೋದಕ್ಕೆ ಇದೇ ಸಾಕ್ಷಿ.

ಕಿರಣ್25-07-2013:12:10:22 pm

ನಮ್ಮ ದೇಶದ ಪರಿಸ್ಥಿತಿಯನ್ನ ಯಾವ ಹಂತಕ್ಕೆ ತಂದು ನಿಲ್ಲಿಸಿದೆ ಈ ನಮ್ಮ ಸರ್ಕಾರ...!

ರಾಕೇಶ್24-07-2013:11:51:47 am

ಕಾಂಗ್ರೆಸ್ಸಿಗರು ಈ ದೇಶವನ್ನೇ ಲೂಟಿಮಾಡಿದ್ದಲ್ಲದೆ ಈಗ ಜನರ ಬಾಯನ್ನೂ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಹುಳುಕುಗಳನ್ನು ಮುಚ್ಚಿಹಾಕಲು ಯಾವ ಕಾರ್ಯಕ್ಕೂ ಹೇಸದ ಜನ ಇವರು. ಬಾಯಿ ತೆರೆಯಲೂ ಧೈರ್ಯವಿಲ್ಲದ ಪ್ರಧಾನಿ ಒಂದೆಡೆಯಾದರೆ, ಹಗಲಿರುಳೂ ಭ್ರಷ್ಠಾಚಾರದಲ್ಲಿ ಮುಳುಗಿರುವ ಮಂತ್ರಿಮಾಗಧರು ಇನ್ನೊಂದೆಡೆ. ಅಂತೂ ಜನರಿಗೆ ಎಚ್ಚರವಾಗದಿದ್ದರೆ ಈ ದೇಶದ ಉಳಿವು ಅಸಾಧ್ಯ.

ಕಿರಣ್25-07-2013:12:10:22 pm

ನಮ್ಮ ದೇಶದ ಪರಿಸ್ಥಿತಿಯನ್ನ ಯಾವ ಹಂತಕ್ಕೆ ತಂದು ನಿಲ್ಲಿಸಿದೆ ಈ ನಮ್ಮ ಸರ್ಕಾರ...!

Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited