Untitled Document
Sign Up | Login    
Dynamic website and Portals
  

ಜ್ಯಾತ್ಯಾತೀತ ರಾಷ್ಟ್ರಕ್ಕೆ ಮತೀಯ ವಿಶ್ವವಿದ್ಯಾನಿಲಯ ಅಗತ್ಯವೇ?

January 16, 2013

ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಮತೀಯ ವಿಶ್ವವಿದ್ಯಾನಿಲಯ ಸ್ಥಾಪಿಸಲು ಹೊರಟಿರುವ ಕೇಂದ್ರ ಸರ್ಕಾರದ ನಿಲುವು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಭಾರತ ವಿಶ್ವದಲ್ಲೇ ಜ್ಯಾತ್ಯಾತೀತ ರಾಷ್ಟ್ರ ಎಂಬ ಖ್ಯಾತಿ ಪಡೆದಿದೆ. ಇಲ್ಲಿ ಎಲ್ಲರೂ ಸಮಾನರು. ವಿವಿಧತೆಯಲ್ಲಿ ಏಕತೆ ಕಂಡಂಥಹ ರಾಷ್ಟ್ರ ಇದು. ಎಲ್ಲಾ ಧರ್ಮದವರೂ ಸಮಾನ, ಎಲ್ಲರೂ ಒಂದೇ ಎಂಬ ಭಾವನೆ ಇದೆ.

ಅಲ್ಪ ಸಂಖ್ಯಾತರು ಎಂಬುದು ನಮ್ಮನ್ನು ಒಡೆದು ಆಳಲು ಬ್ರಿಟುಷರು ಕೊಟ್ಟ ಪರಿಕಲ್ಪನೆ, ಈ ಅಲ್ಪಸಂಖ್ಯಾತ ಆಧಾರಿತ ವಿಶ್ವವಿದ್ಯಾನಿಲಯ ಸ್ಥಾಪಿಸಿದರೆ ದೇಶದ ಐಕ್ಯತೆಗೆ ಧಕ್ಕೆಯಾಗುತ್ತಿದೆ. ಅಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಭಯೋತ್ಪಾದನೆಗೆ ಪ್ರಚೋದನೆ ನಡೆಯುತ್ತಿದೆ ಎಂಬ ಅಪಖ್ಯಾತಿ ಬಂದಿದೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಮತೀಯ ವಿಶ್ವವಿದ್ಯಾನಿಲಯಗಳು ಸ್ಥಾಪನೆಗೆ ಅವಕಾಶ ಕಲ್ಪಿಸಿದರೆ ದೇಶ ವಿಭಜನೆಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಅಲ್ಲದೆ, ಟಿಪ್ಪು ಹಿಂದೂ ದ್ವೇಶಿಯಾಗಿದ್ದ, ಅಸಂಖ್ಯಾತ ಹಿಂಡುಗಳನ್ನು ಮತಾಂತರ ಮಾಡಿದ್ದಾನೆ, ಇಂತಹ ವ್ಯಕ್ತಿಯ ಹೆಸರಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವುದು ಎಷ್ಟು ಸಮಂಜಸ? ಇದು ಓಟ್ ಬ್ಯಾಂಕ್ ರಾಜಕೀಯ ನಡೆಸುವ ನಾಯಕರ ಹುನ್ನಾರ ಎಂಬ ವಾದ ಕೇಳಿ ಬರುತ್ತಿದೆ. ಹಲವಾರು ಸಾಹಿತಿಗಳು, ಸಂಶೋಧಕರು, ಇತಿಹಾಸಕಾರರು, ಸಾರ್ವಜನಿಕರು ಇದರ ವಿರುದ್ಧ ದನಿ ಎತ್ತಿದ್ದಾರೆ.

ಇನ್ನೂ ಕೆಲವರಿಂದ, ವಿಶ್ವದದಲ್ಲಿ ಯಾವುದೇ ದೇಶದಲ್ಲಿ ಕಾಣಲು ಸಾಧ್ಯವಾಗದ ವೈವಿಧ್ಯತೆಯನ್ನು ಭಾರತದಲ್ಲಿ ಕಾಣಬಹುದು, ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರಿಗೊಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸುವುದರಲ್ಲಿ ತಪ್ಪೇನಿದೆ? ಎಂಬ ಪ್ರಶ್ನೆಗಳು ಉದ್ಭವಿಸುತ್ತದೆ.

ಸಾಂಸ್ಕೃತಿಕ ನಗರಿ ಮೈಸೂರು ಸಮೀಪ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ವಿಶ್ವವಿದ್ಯಾನಿಲಯ ಸ್ಥಾಪಿಸುವುದರ ಕುರಿತು ಈಗಾಗಲೇ ರೂಪು ರೇಷೆಗಳನ್ನು ಸಿದ್ದಪಡಿಸಲು ಕೇಂದ್ರದ ಯುಪಿಯೆ ಸರಕಾರ ಒಂದು ಪ್ರತ್ಯೇಕ ಸಮಿತಿ ರಚನೆ ಮಾಡಿದೆ.

ಮತೀಯ(ಅಲ್ಪಸಂಖ್ಯಾತ) ಆಧಾರಿತ ವಿಶ್ವವಿದ್ಯಾಲಯಗಳ ಸ್ಥಾಪನೆ ಬಗ್ಗೆ 2012 ನವೆಂಬರ್ ನಲ್ಲಿ ಕೇಂದ್ರ ಅಲ್ಪಸಂಖ್ಯಾತ ಸಚಿವ ರೆಹಮಾನ್ ಖಾನ್ ಮಾತನಾಡಿ, ಕೇಂದ್ರ ಸರ್ಕಾರ ದೇಶಾದ್ಯಂತ 5 ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಲಿದ್ದು, ಅದರಲ್ಲಿ ಒಂದು ಮೈಸೂರಿನ ಶ್ರೀರಂಗಪಟ್ಟಣ್ದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಸ್ಥಾಪನೆಯಾಗಲಿದೆ, ಈ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದಿದ್ದಾರೆ.

ಈಗ ನಮ್ಮ ಮುಂದಿರುವ ಪ್ರಶ್ನೆ - ಜ್ಯಾತ್ಯಾತೀತ ಭಾರತಕ್ಕೆ ಮತೀಯ ವಿಶ್ವವಿದ್ಯಾನಿಲಯ ಅಗತ್ಯವಿದೆಯೇ ಅಥವಾ ಇಲ್ಲವೆ ಎಂಬುದು. ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ..

 

Share: 

Readers' Comments (1)

pinku22-07-2013:05:10:08 pm

wao nice site

Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited