Untitled Document
Sign Up | Login    
Dynamic website and Portals
  
April 15, 2015

ದರೋಡೆಕೋರರಿಂದ ರಕ್ಷಣೆ ನೀಡುವ ಹೋಮ್ ಗಾರ್ಡ್ ಉಪಕರಣ ಲೋಕಾರ್ಪಣೆ

ಹೋಮ್ ಗಾರ್ಡ್ ಉಪಕರಣ ಲೋಕಾರ್ಪಣೆ ಹೋಮ್ ಗಾರ್ಡ್ ಉಪಕರಣ ಲೋಕಾರ್ಪಣೆ

ಬೆಂಗಳೂರು : ದರೋಡೆಕೋರರಿಂದ ಮನೆಯನ್ನು ಸಂಪೂರ್ಣವಾಗಿ ಸಂರಕ್ಷಿಸಲು ಅಭಿವೃದ್ಧಿ ಪಡಿಸಲಾಗಿರುವ ಎಲೆಕ್ಟ್ರಾನಿಕ್ ಉಪಕರಣವನ್ನು ಖ್ಯಾತ ಚಿತ್ರ ತಾರೆ ಹಾಗೂ ರಾಜ್ಯ ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ ಅವರು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಿದರು.

ಈ ಉಪಕರಣ ವಾಣಿಜ್ಯ ಸ್ವರೂಪದ್ದಾದರೂ ಇದರ ಸಾಮಾಜಿಕ ಉಪಯುಕ್ತತೆ, ಶ್ರೀಸಾಮಾನ್ಯರಿಗೂ ಎಟಕುವ ಬೆಲೆ, ಈ ಉತ್ಪನ್ನದ ಲಾಭಾಂಶದ ಒಂದು ಭಾಗ ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ಪುಟಾಣಿಗಳ ಚಿಕಿತ್ಸೆಗೆ ಹೋಗುವದೆಂಬ ಮತ್ತು ಮೇಕ್ ಇನ್ ಇಂಡಿಯಾದ ಒಂದು ಭಾಗವಾಗಿರುವದರಿಂದ ಈ ಉಪಕರಣವನ್ನು ಲೋಕಾರ್ಪಣೆ ಮಾಡಲು ಒಪ್ಪಿಕೊಂಡುದುದಾಗಿ ಹೇಳಿದರು.

ಪ್ರಖ್ಯಾತ ಸಮಾಮಾಜಿಕ ಧುರೀಣರೂ ಆದ ರಾಜ್ಯ ಮೇಲ್ಮನೆ ಸದಸ್ಯ ಡಾ.ಶರವಣ ಅವರು ತಾರಾ ಅವರ ಅಭಿಮತವನ್ನು ಒಪ್ಪುತ್ತ ಇಂಥ ಉಪಕರಣಗಳನ್ನು ಜನಸಾಮಾನ್ಯರು ತಮ್ಮಮನೆಗಳಲ್ಲಿ ಬಳಸಿಕೊಂಡು ತಮ್ಮ ವಡವೆ ವಸ್ತುಗಳನ್ನು ಸುರಕ್ಷತೆಯಿಂದ ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಈ ಉಪಕರಣದ ಕಾರ್ಯನಿರ್ವಹಣೆ ಕುರಿತ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು.

ಬೆಂಗಳೂರಿನ ಎಸ್.ಬಿ.ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ಪಡಿಸಿರುವ ಹೋಮ್ ಗಾರ್ಡ್ ಉಪಕರಣವನ್ನು ಚಿತ್ರ ನಟಿ ಹಾಗೂ ರಾಜ್ಯ ವಿಧಾನಪರಿಷತ್ ಸದಸ್ಯೆ ತಾರಾಅನುರಾಧಾ ಅವರು ಲೋಕಾರ್ಪಣೆ ಮಾಡಿದರು.ಸಮಾರಂಭದಲ್ಲಿ ರಾಜ್ಯ ಮೇಲ್ಮನೆ ಸದಸ್ಯ ಡಾ.ಶರವಣ, ಕಂಪೆನಿಯ ಎಮ್ ಡಿ ಶ್ರೀಕಾಂತ್, ಶ್ರೀಮತಿ ರಂಜಿತಾ, ಹಿರಿಯ ಪತ್ರಕರ್ತ ಹಾಗೂ ಕಂಪೆನಿಯ ಗೌ. ಸಲಹೆಗಾರ ವೆಂಕಟನಾರಾಯಣ ಉಪಸ್ಥಿತರಿದ್ದರು.

 

ಹೋಮ್ ಗಾರ್ಡ್ ಉಪಕರಣ:

ಹೋಮ್ ಗಾರ್ಡ್ ಇದು ಮನೆಯ ರಕ್ಷಕ. ಅದರಲ್ಲೂ ಮಹಿಳೆಯರು ಮತ್ತು ಮಕ್ಕಳಿರುವ ಮನೆಗಳಲ್ಲಿ ಎಲ್ಲರನ್ನೂ ಎಚ್ಚರಿಸುತ್ತದೆ. ಕಳ್ಳ ಕಾಕರರ ಕಾಟಕ್ಕೆ ಇದು ರಾಮಬಾಣ. ಇದು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಉಪಕರಣ. ಪ್ರಧಾನಿ ನರೇಂದ್ರ ಮೋದಿ ಪರಿಕಲ್ಪನೆಯ ಮೇಕ್ ಇನ್ ಇಂಡಿಯಾ ಘೋಷಣೆಯಡಿ ತಯಾರಾದ ಉಪಕರಣ ಎಂಬುದು ವೈಶಿಷ್ಟ್ಯ.

ಬೀಗ ಹಾಕಿದಾಗ, ಇಲ್ಲವೆ ಮನೆಯಲ್ಲಿ ಯಾರೂ ಇಲ್ಲದಾಗ, ಇಲ್ಲವೆ ಮನೆಯಲ್ಲಿ ಗಾಢ ನಿದ್ರೆಯಲ್ಲಿದ್ದಾಗ ಅಪರಿಚಿತರು ಕಳವು ಮಾಡಲು ಬಾಗಿಲು ತೆರೆದ ೬ ಸೆಕೆಂಡುಗಳಲ್ಲಿ ಮಾಲೀಕರಿಗೆ ಸ್ವಯಂ ಚಾಲಿತವಾಗಿ ಕರೆಯನ್ನು ರವಾನಿಸುತ್ತದೆ. ಈ ಮೂಲಕ ಎಚ್ಚರಿಕೆ ಸಂದೇಶ ರವಾನಿಸುತ್ತದೆ. ಈ ಸೌಲಭ್ಯವನ್ನು ಮನೆ ಅಥವಾ ಯಾವುದಾದರೂ ಕಟ್ಟಡದ ೩ ಬಾಗಿಲುಗಳಿಗೆ ಅಥವಾ ಕಿಟಕಿಗಳಿಗೆ ಅಳವಡಿಸಬಹುದಾಗಿದೆ. ಮನುಷ್ಯನ ಚಲನೆಯನ್ನು ಗ್ರಹಿಸುವಂಥಹ ಸೆನ್ಸರ್ ಆಯ್ಕೆಗೆ ಇದು ಸಿಗುತ್ತದೆ. ಒಂದು ವೇಳೆ ಮಾಲೀಕನು ಕರೆಯನ್ನು ಸ್ವಿಕರಿಸದೇ ಇದ್ದಾಗ, ಈ ಸಾಧನ ತುರ್ತು ಎಚ್ಚರಿಕೆ ಸಂದೇಶವನ್ನು ರವಾನಿಸುತ್ತದೆ.

ಮಾಲೀಕನು ಕರೆ/ ಸಂದೇಶ ಸ್ವೀಕರಿಸಿ ತಕ್ಷಣ ಮೊಬೈಲ್ ಮೂಲಕ ಸೈರನ್ನನ್ನು ಚಾಲನೆ ಮಾಡಬಹುದು. ಕೇವಲ ಒಂದು ದೂರವಾಣಿ ಕರೆಯ ಮುಖಾಂತರ ಬಾಗಿಲಿನ ಸ್ಥಿತಿ ತಿಳಿಯಬಹುದು. ಮನೆಯಲೈಟ್, ಮೋಟಾರ್ ಮತ್ತಿತರ ಒಂದು ಉಪಕರಣವನ್ನು ಚಾಲನೆ ಅಥವ ಸ್ಠಗಿತಗೊಳಿಸಬಹುದು. ಈಸಾಧನವನ್ನು 2 ಮೊಬೈಲ್ ಸಂಖ್ಯೆಗಳಿಗೆ ಅಡಕಗೊಳಿಸಿ ಸಕ್ರಿಯಗೊಳಿಸಬಹುದಾಗಿದೆ. ಈ ಸಾಧನ ಯಾವುದೇ ಆಂಡ್ರಾಯ್ಡೊ ಪೋನ್ ಸ್ಮಾರ್ಟ್ ಪೋನ್‌ಗಳಲ್ಲಿ ಉಪಯೋಗಿಸಬಹುದು. ಯಾವುದೇ ಸಾಧಾರಣ ಮೊಬೈಲ್ ಅಥವ ಸ್ಥಿರ ದೂರವಾಣಿಯ ಮುಖಾಂತರವೂ ಬಳಕೆ ಮಾಡುವ ವೈಶಿಷ್ಟ್ಯ ಹೊಂದಿದೆ.

ಈ ಸಾಧನವನ್ನು ಭಾರತದಲ್ಲೇ ಅಭಿವೃದ್ಧಿಪಡಿಸಿ ಉತ್ಪಾದಿಸಲಾಗುತ್ತಿದೆ. ಇದು ಭಾರತದ ಉತ್ಪನ್ನ ಎಂಬುದು ಹೆಮ್ಮೆಯ ವಿಷಯವಾಗಿದೆ. ಈ ಉತ್ಪನ್ನವು 19 ವರ್ಷಗಳ ಸುಧೀರ್ಘ ಅನುಭವವುಳ್ಳ ಭಾರತದ ಪ್ರತಿಷ್ಠಿತ ಸಂಸ್ಥೆಯಿಂದ ತಯಾರಿಸಲ್ಪಟ್ಟಿದೆ. ಇದು ಒಂದು ವರ್ಷ ಗುಣ ಮಟ್ಟದಖಾತರಿಯನ್ನು ಹೊಂದಿದ್ದು ದುರಸ್ತಿ ಮಾಡ ಬಹುದಾದಂತಹ ಸಾಧನವಾಗಿದೆ. ಇದು ಸುಲಭವಾಗಿ ಕಾರ್ಯನಿರ್ವಹಿಸುವಂತಹ ಚಿಕ್ಕಸಾಧನವೂ ಹೌದು.

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited