ನವದೆಹಲಿ : ಕೆಲ ದಿನಗಳಿಂದ ನಿಮಗೆ ವಾಟ್ಸಾಪ್ ಕಾಲಿಂಗ್(ಉಚಿತ ಕರೆ)ಸೌಲಭ್ಯವನ್ನು ಅಳವಡಿಸಿಕೊಳ್ಳುವಂತೆ ಆಹ್ವಾನ ಬಂದಿದೆಯಾ? ಹಾಗಾದರೆ ಅದು ಫೇಕ್ ಸಂದೇಶ ಎಂದು ನಿರ್ಲಕ್ಷಿಸಿ.
ವಾಟ್ಸ್ ಆಪ್ ಗ್ರಾಹಕರನ್ನು ಸೈಬರ್ ಸ್ಕ್ಯಾಮರ್ ಗಳು ಟಾರ್ಗೆಟ್ ಮಾಡುತ್ತಿದ್ದು, ವಾಟ್ಸಾಪ್ ಕಾಲಿಂಗ್ ಸೌಲಭ್ಯವನ್ನು ಡೌನ್ ಲೋಡ್ ಮಾಡುವುದು ಅಪಾಯಕಾರಿ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವಾಟ್ಸಾಪ್ ಕಾಲಿಂಗ್ ಸೌಲಭ್ಯವನ್ನು ಡೌನ್ ಲೋಡ್ ಮಾಡಿದ ನಂತರ ಮೊಬೈಲ್ ನಲ್ಲಿರುವ ಡೇಟಾ ಸೋರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈವರೆಗೂ ವಾಟ್ಸಾಪ್ ಇಂತಹ ಸೌಲಭ್ಯವನ್ನು ಅಧಿಕೃತವಾಗಿ ಪರಿಚಯಿಸಿಲ್ಲ. ಆದ್ದರಿಂದ ಈ ಸೌಲಭ್ಯಕ್ಕೆ ಸಂಬಂಧಿಸಿದಂತೆ ಬರುತ್ತಿರುವ ಎಸ್.ಎಂ.ಎಸ್ ನ್ನು ನಂಬಿ ಡೌನ್ ಲೋಡ್ ಮಾಡಿಕೊಳ್ಳದಿರುವುದು ಸೂಕ್ತವಾಗಿದೆ. ಆದರೆ ಈಗಾಗಲೇ ಹಲವು ಗ್ರಾಹಕರು ಈ ಸೌಲಭ್ಯವನ್ನು ಡೌನ್ ಲೋಡ್ ಮಾಡಿದ್ದಾರೆ.