ಚೆನ್ನೈ : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚೆನ್ನೈನಲ್ಲಿ ಮೊದಲ ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ನರೆಂದ್ರ ಮೋದಿ ಅವರ ಒಂದು ದಿನದ ಭೇಟಿಯ ಹಿನ್ನಲೆಯಲ್ಲಿ ನಗರದಾದ್ಯಂತ ಬಿಗಿ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿ ನರೇಂದ್ತ ಮೋದಿ ಅವರು ಕೈಮಗ್ಗ ನೇಕಾರರಿಗೆ ಸಂತ ಕಬೀರ ಪ್ರಶಸ್ತಿ ಮತ್ತು ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಪ್ರಧಾನಿ ಮೋದಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಭೇಟಿ ಮಾಡಿ ಮಾತುಕತೆ ನಡೆಸುವ ನಿರೀಕ್ಷೆ ಇದೆ. ಆದರೆ ಬಿಜೆಪಿ ಅಥವಾ ಎಐಡಿಎಂಕೆ ಇದನ್ನು ಧೃಡಪಡಿಸಿಲ್ಲ, ಹಾಗೆಯೇ ನಿರಾಕರಿಸಿಯೂ ಇಲ್ಲ.
ಚೆನ್ನೈ ಭೇಟಿಯ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಹ್ಯಾಂಡ್ ಲೂಮ್ ಬ್ರ್ಯಾಂಡ್ ಅನ್ನು ಉದ್ಘಾಟನೆ ಮಾಡಲಿದ್ದಾರೆ.
ಪ್ರಶಸಿ ಪಡೆದವರ ಕಲಾಕೃತಿಗಳ ಪ್ರದರ್ಶನ ಸಹ ಈ ಸಂದಭದಲ್ಲಿ ಉದ್ಘಾಟನೆ ಆಗಲಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಮಗ್ಗ ಕ್ಷೇತ್ರದ ಸಾಧಕರಿಗೆ 2012, 2013, 2014ನೇ ಸಾಲಿನ ಸಂತ ಕಬೀರ್ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.