ನವದೆಹಲಿ : 'ಬಿಬಿಸಿ' ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರ ನಿಷೇಧದ ಬಗ್ಗೆ ಉಂಟಾಗಿರುವ ಚರ್ಚೆಯನ್ನು ಭಾರತದಲ್ಲಿರುವ ಜರ್ಮಿನಿಯ ರಾಯಭಾರಿ ಮೈಕೆಲ್ ಸ್ಟೀನರ್ ಸ್ವಾಗತಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೈಕೆಲ್ ಸ್ಟೀನರ್, ಡಿ.16ರ ಗ್ಯಾಂಗ್ ರೇಪ್ ಕುರಿತು ಬಿಬಿಸಿ ನಿರ್ಮಿಸಿರುವ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರವನ್ನು ಸಮರ್ಥಿಸಿಕೊಂಡಿದ್ದಾರೆ. ಬಿಬಿಸಿಯ ಉದ್ದೇಶ ವಾಸ್ತವವನ್ನು ತಿಳಿಸುವುದಾಗಿತ್ತು ಎಂದು ಹೇಳಿದ್ದಾರೆ.
ಭಾರತ ಸರ್ಕಾರ, ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದ ಮೇಲೆ ವಿಧಿಸಿರುವ ನಿಷೇಧದ ಬಗ್ಗೆ ಮೈಕೆಲ್ ಸ್ಟೀನರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಾದರೂ, ನಿಷೇಧದ ಬಗ್ಗೆ ಉಂಟಾಗಿರುವ ಚರ್ಚೆಯನ್ನು ಸ್ವಾಗತಿಸಿದ್ದಾರೆ.
ಆಪ್ಘಾನಿಸ್ಥಾನ, ಪಾಕಿಸ್ಥಾನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಮೇಲೂ ಗಮನ ಹರಿಸಬೇಕಿದೆ ಎಂದು ಸ್ಟೀನರ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮಹಿಳೆಯರ ಬಗ್ಗೆ ಹಾಗು ಲಿಂಗಸಮಾನತೆ ವಿಷಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾಳಜಿ ಬಗ್ಗೆ ಸ್ಟೀನರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.