ನವದೆಹಲಿ : ತಮ್ಮನ್ನು ಪ್ರಧಾನ ಸೇವಕನೆಂದೇ ಹೇಳುವ ಪ್ರಧಾನಿ ನರೇಂದ್ರ ಮೋದಿ ಇಂದು ಪಾರ್ಲಿಮೆಂಟ್ ನ ಕ್ಯಾಂಟೀನ್ ನಲ್ಲಿ ಗುಜರಾತ್ ಸಂಸದರೊಂದಿಗೆ ಮಧ್ಯಾಹ್ನದ ಭೋಜನ ಸವಿದಿದ್ದಾರೆ.
ಸಂಸತ್ ಭವನದಲ್ಲಿರುವ ಕ್ಯಾಂಟೀನ್ ಗೆ ಅನಿರೀಕ್ಷಿತ ಭೇಟಿ ನೀಡಿದ ನರೇಂದ್ರ ಮೋದಿ, ವೆಜಿಟೇರಿಯನ್ ತಾಲಿ ಗೆ ಆರ್ಡರ್ ಮಾಡಿ ಗುಜರಾತ್ ನ ಸಂಸದರೊಂದಿಗೆ ಊಟ ಮಾಡಿ 29ರೂಪಾಯಿ ಬಿಲ್ ಪಾವತಿ ಮಾಡಿದ್ದಾರೆ. ಭೋಜನದ ವೇಳೆ ಗುಜರಾತ್ ಸಂಸದರೊಂದಿಗೆ ಮೋದಿ ಚರ್ಚೆ ನಡೆಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕ್ಯಾಂಟೀನ್ ಸಂದರ್ಶಕರ ಪುಸ್ತಕದಲ್ಲಿಯೂ ಬರೆದಿರುವ ಪ್ರಧಾನಿ ನರೇಂದ್ರ ಮೋದಿ ಅನ್ನದಾತ ಸುಖೀಭವ ಎಂದು ಸಂದೇಶ ನೀಡಿದ್ದಾರೆ. ಪ್ರಧಾನಿಯೊಬ್ಬರು ಸಂಸತ್ ಭವನದಲ್ಲಿರುವ ಕ್ಯಾಂಟೀನ್ ಗೆ ಭೇಟೀ ನೀಡಿ ಮಧ್ಯಾಹ್ನದ ಆಹಾರ ಸೇವಿಸಿರುವುದು ಅಪರೂಪದ ಸಂಗತಿಯಾಗಿದೆ.