Untitled Document
Sign Up | Login    
Dynamic website and Portals
  
December 25, 2015

ಅಫ್ಘಾನಿಸ್ತಾನದ ಹೊಸ ಸಂಸತ್ತಿನಲ್ಲಿ ಅಟಲ್ ಬ್ಲಾಕ್ಃ ಸಂತಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ

ಸಂಸತ್ ಭವನವನ್ನು ಉದ್ಘಾಟಿಸಿದ ಅಫ್ಘಾನಿಸ್ತಾನದ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಘನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನವನ್ನು ಉದ್ಘಾಟಿಸಿದ ಅಫ್ಘಾನಿಸ್ತಾನದ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಘನಿ ಮತ್ತು ಪ್ರಧಾನಿ ನರೇಂದ್ರ ಮೋದಿ

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಒಂದು ಭಾಗದ ಕಟ್ಟಡಕ್ಕೆ ಅಟಲ್ ಬ್ಲಾಕ್ ಎಂದು ಹೆಸರಿಸುವುದು ಸಂತಸ ತಂದಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಕ್ಕಿಂತ ಒೞೆಯ ದಿನವನ್ನು ನಾವು ಆಯ್ಕೆ ಮಾಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಫ್ಘಾನಿಸ್ತಾನದ ಸಂಸತ್ತ ಅನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. ಶುಕ್ರವಾರ ವಾಜಪೇಯಿ ಅವರ 91 ನೇ ಹುಟ್ಟುಹಬ್ಬ.

ಸಂಸತ್ ಭವನ ರಾಷ್ಟ್ರದ ಪ್ರಗತಿ ಮತ್ತು ಪ್ರಜಾಪ್ರಭುತ್ವಕ್ಕೆ ಒಂದು ಗೌರವ. ಇದು ವಿಶೇಷ ಸಂಬಂಧ ಪ್ರೀತಿ ಮತ್ತು ಆಕಾಂಕ್ಷೆಗಳ ಭಾವನೆಗಳನ್ನು ಮತ್ತು ಮೌಲ್ಯಗಳನ್ನು ಬಂಧಿಸುವ ಒಂದು ನಿರಂತರ ಸಂಕೇತವಾಗಿ ನಿಲ್ಲುತ್ತದೆ ಎಂದು ತಮ್ಮ 30 ನಿಮಿಷಗಳ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನುಡಿದರು.

ಅಫ್ಘಾನಿಸ್ತಾನದ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಘನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಾಗಿ ಕಟ್ಟಿಸಿದ ಸಂಸತ್ ಭವನವನ್ನು ಉದ್ಘಾಟಿಸಿ ಕಟ್ಟಡವನ್ನು ವೀಕ್ಷಿಸಿದರು.

710 ಕೋಟಿ ರೂ ವೆಚ್ಚದಲ್ಲಿ 6 ವರ್ಷದಲ್ಲಿ ಈ ಭವನವನ್ನು ಕಟ್ಟಲಾಯಿತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಟ್ಟಡದ ಶಿಲಾನ್ಯಾಸ ನೆರವೇರಿಸಿದ್ದರು. ಮೊಘಲ್ ಮತ್ತು ಆಧುನಿಕ ವಾಸ್ತುಶಿಲ್ಪಗಳ ಪ್ರಕಾರ ಕಟ್ಟಡವನ್ನು ಕಟ್ಟಲಾಗಿದೆ.

 

 

English Summary : Prime minister Narendra Modi inaugurated newly built Afghan parliament built by India. Inaugurating the building on Friday, PM Modi said, he is deeply touched by the gesture of naming one of its block as Atal block

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited