Untitled Document
Sign Up | Login    
Dynamic website and Portals
  
December 12, 2015

ಪ್ರಧಾನಿ ಮೋದಿ ನಿರ್ಧಾರಗಳು ಬುಲೆಟ್ ರೈಲಿನಷ್ಟು ವೇಗ ಮತ್ತು ವಿಶ್ವಾಸಾರ್ಹಃ ಜಪಾನ್ ಪ್ರಧಾನಿ ಶಿಂಜೋ ಅಬೆ

ಬಿಜಿನೆಸ್ ಲೀಡರ್ಸ್ ಫೊರಮ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಬಿಜಿನೆಸ್ ಲೀಡರ್ಸ್ ಫೊರಮ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ

ನವದೆಹಲಿ : ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಶನಿವಾರ ಬಿಜಿನೆಸ್ ಲೀಡರ್ಸ್ ಫೊರಮ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಪಾನ್ ಪ್ರಧಾನಿ ಸಿಂಜೋ ಅಬೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸು ಮತ್ತು ಅವರು ತೆಗೆದುಕೊಂಡ ನಿರ್ಧಾರ ಬುಲೆಟ್ ರೈಲಿನಷ್ಟು ವೇಗವಾಗಿದೆ. ಅದು ವಿಶ್ವಾಸಾರ್ಹ ಮಾತ್ರವಲ್ಲ, ಸುರಕ್ಷಿತ ಕೂಡ ಎಂದು ಪ್ರಧಾನಿ ಮೋದಿ ಅವರನ್ನು ಹೊಗಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮೇಕ್ ಇನ್ ಇಂಡಿಯಾ ಯೋಜನೆಗೆ ಹಣ ಮೀಸಲಿಟ್ಟ ಜಪಾನ್ ನ ನಿರ್ಧಾರವನ್ನು ಶ್ಲಾಘಿಸಿದರು. ಜಪಾನ್ 12 ಬಿಲಿಯನ್ ಡಾಲರ್ ಅನ್ನು ಮೇಕ್ ಇನ್ ಇಂಡಿಯಾ ಯೋಜನೆಗೆ ವಿನಯೋಗಿಸಲು ತೆಗೆದಿರಿಸಿದೆ ಎಂದು ತಿಳಿಸಿದರು.

ಭಾರತ ತನ್ನ ಅಭಿವೃದ್ಧಿ ಕಾರ್ಯಸೂಚಿ ಜೊತೆ ಮುಂದುವರಿಯಲು ಬಯಸುತ್ತದೆ. ತಯಾರಿಕಾ ಬೆಳವಣಿಗೆ ಮತ್ತು ಔದ್ಯೋಗಿಕ ಉತ್ಪಾದನೆಯ ಬಗ್ಗೆ ಮಾತನಾಡಿ, ಭಾರತ ಅತ್ಯುತ್ತಮ ಮಾನವ ಸಂಪನ್ಮೂಲ ಮತ್ತು ತಾಂತ್ರಿಕತೆಯ ಭೂಮಿಯಾಗಿದೆ. ಜಪಾನ್ ಎಲ್ಲಾ ಸಂದರ್ಭಗಳಲ್ಲೂ ಭಾರತದೋಮ್ದಿಗೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇದೇ ಮೊದಲ ಬಾರಿಗೆ ಜಪಾನ್ ಭಾರತದಿಂದ ಮಾರುತೀ ಸುಜುಕೀ ಕಾರುಗಳನ್ನು ಖರೀದಿಸುತ್ತಿದೆ. ಭಾರತ ಬರೇ ಅತೀ ವೇಗದ ಬುಲೆಟ್ ರೈಲು ಮಾತ್ರವಲ್ಲ, ಜಪಾನ್ ಸಹಭಾಗಿತ್ವದಲ್ಲಿ ಅತೀ ವೇಗದ ಬೆಳವಣಿಗೆ ಬಯಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಶನಿವಾರ ವಾರಣಾಸಿಗೆ ಭೇಟಿ ನೀಡಿ ಗಂಗಾ ಆರತಿಯಲ್ಲಿ ಭಾಗವಹಿಸಲಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited