Untitled Document
Sign Up | Login    
Dynamic website and Portals
  
February 24, 2015

ಲ್ಯಾಂಡ್ ಲೈನ್, ಮೊಬೈಲ್ ಕರೆ ದರದಲ್ಲಿ ಭಾರಿ ಇಳಿಕೆ!

ಲ್ಯಾಂಡ್ ಲೈನ್, ಮೊಬೈಲ್ ಕರೆ ದರದಲ್ಲಿ ಭಾರಿ ಇಳಿಕೆ!

ನವದೆಹಲಿ : ಲ್ಯಾಂಡ್ ಲೈನ್ ಸಂಪರ್ಕವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಟೆಲಿಕಾಮ್ ರೆಗ್ಯುಲೇಟರ್(ಟ್ರಾಯ್) ಮಹತ್ವದ ನಿರ್ಧಾರ ಕೈಗೊಂಡಿದ್ದು, ಲ್ಯಾಂಡ್ ಲೈನ್ ಹಾಗೂ ಮೊಬೈಲ್ ಕರೆಗಳ ದರದಲ್ಲಿ ಭಾರೀ ಇಳಿಕೆ ಮಾಡಲು ಶಿಫಾರಸು ಮಾಡಿದೆ.

ಈ ಹಿಂದೆ ಲ್ಯಾಂಡ್ ಲೈನ್ ನಿಂದ ಲ್ಯಾಂಡ್ ಲೈನ್ ಹಾಗೂ ಲ್ಯಾಂಡ್ ಲೈನ್ ನಿಂದ ಮೊಬೈಲ್ ಕರೆ ದರ ಪ್ರತಿ ನಿಮಿಷಕ್ಕೆ 20 ಪೈಸೆಯಷ್ಟಿತ್ತು. ಇನ್ಮುಂದೆ ಈ ದರದಲ್ಲಿ ಬದಲಾವಣೆಯಾಗಲಿದ್ದು, ಕರೆ ದರ ಸಂಪೂರ್ಣ ಉಚಿತವಾಗಲಿದೆ. ಪ್ರಸ್ತುತ ಟ್ರಾಯ್ ಟಾರಿಫ್ ಪ್ರಕಾರ, ಸ್ಥಳೀಯ ಮತ್ತು ನ್ಯಾಷನಲ್ ಕರೆಗಳಿಗೆ ಮೊಬೈಲ್ ಟು ಮೊಬೈಲ್ ಗೆ ಈ ಮೊದಲು ನಿಮಿಷಕ್ಕೆ 20 ಪೈಸೆ ಇದ್ದ ದರ, ಇನ್ಮುಂದೆ 14 ಪೈಸೆಯಷ್ಟಾಗಲಿದೆ. ಇಂಟರ್ ಕನೆಕ್ಷನ್ ದರವನ್ನು ಕಡಿತ ಮಾಡುವ ಟ್ರಾಯ್ ನಿರ್ಧಾರದಿಂದ ಗ್ರಾಹಕರಿಗೆ ಲಾಭವಾಗಲಿದೆ.

ಬಿ.ಎಸ್.ಎನ್.ಎಲ್ ದೇಶದಲ್ಲಿಯೇ ಅತಿ ಹೆಚ್ಚು ಲ್ಯಾಂಡ್ ಲೈನ್ ಗ್ರಾಹಕರನ್ನು ಹೊಂದಿದೆ. ನಾವು ಈ ಅನುಕೂಲವನ್ನು ಗ್ರಾಹಕರಿಗೆ ಏಪ್ರಿಲ್ ತಿಂಗಳಿನಿಂದಲೇ ಮಾಡಿಕೊಡಲಿದ್ದೇವೆ ಎಂದು ಬಿ.ಎಸ್.ಎನ್.ಎಲ್ ಎಂ.ಡಿ ಅನುಪಮ್ ಶ್ರೀವಾಸ್ತವ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ. ಟ್ರಾಯ್ ನ ಶಿಫಾರಸು ಗ್ರಾಹಕರಿಗೆ ಖುಷಿ ಕೊಡುವುದರಲ್ಲಿ ಅನುಮಾನವಿಲ್ಲ.

ಮೊಬೈಲ್ ನ ಒಳಬರುವ ಕರೆಗಳನ್ನು ದರ ರಹಿತ ಮಾಡಿದಾಗಿನಿಂದ ಲ್ಯಾಂಡ್ ಲೈನ್ ಕನೆಕ್ಷನ್ ಗಳನ್ನು ಕೇಳುವವರಿರಲಿಲ್ಲ. 2014ರ ವೇಳೆಗೆ ಮೊಬೈಲ್ ಸಂಪರ್ಕಗಳ ಸಂಖ್ಯೆ 94.39 ಕೋಟಿಯಷ್ಟಾಗಿದ್ದರೆ ಲ್ಯಾಂಡ್ ಲೈನ್ ಸಂಪರ್ಕಗಳ ಸಂಖ್ಯೆ ಕೇವಲ 2.7 ಕೋಟಿಯಷ್ಟಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited