Untitled Document
Sign Up | Login    
Dynamic website and Portals
  
August 15, 2015

ಸ್ಟಾರ್ಟ್ ಅಪ್ ಇಂಡಿಯಾ ಸ್ಟಾಂಡ್ ಅಪ್ ಇಂಡಿಯಾ ಪ್ರಧಾನಿ ನರೇಂದ್ರ ಮೋದಿ ಹೊಸ ಘೋಷ ವಾಕ್ಯ

ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ನವದೆಹಲಿ : 69 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿ ತಮ್ಮ ಎರಡನೇ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಪ್ರಮುಖಾಂಶಗಳು ಇಂತಿವೆ.

ಭಾಷಣದ ಪ್ರಮುಖಾಂಶಗಳು ಃ

* ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಶುಭಾಷಯಗಳು
* ಇದು ಸಾಮಾನ್ಯ ಬೆಳಗಲ್ಲ. ಈ ಬೆಳಗು 125 ಕೋಟಿ ಭಾರತೀಯರ ಕನಸು ಮತ್ತು ಆಕಾಂಕ್ಷೆಗಳನ್ನು ನಿರೀಕ್ಷಿಸುವ ಬೆಳಗಾಗಿದೆ.
* ನಾನು ಎಲ್ಲಾ ಸ್ವಾತಂತ್ರ ಹೋರಾಟಗಾರರಿಗೆ ನನ್ನ ನಮನ ಸಲ್ಲಿಸುತ್ತೇನೆ.
* ಪ್ರತಿ ಭಾರತೀಯರಲ್ಲಿ ಸರಳತೆ ಇದೆ ಮತ್ತು ದೇಶದ ಎಲ್ಲಾ ಮೂಲೆಗಳಲ್ಲೂ ಒಗ್ಗಟ್ಟಿದೆ, ಇದು ಭಾರತದ ಬಲವಾಗಿದೆ.
* ಒಗ್ಗಟ್ಟನ್ನು ನಾಶ ಮಾಡಿದರೆ, ದೇಶದ ಜನತೆಯ ಕನಸನ್ನು ನಾಶ ಮಾಡಿದಂತೆ.
* ಜಾತೀಯತೆ ಅಥವಾ ಕೋಮುವಾದಕ್ಕೆ ಇಲ್ಲಿ ಜಾಗವಿಲ್ಲ, ಯಾವುದೇ ರೀತಿ ಅವುಗಳನ್ನು ಸಹಿಸಲಾಗುವುದಿಲ್ಲ.
* 125 ಕೋಟಿ ಭಾರತೀಯರ ತಂಡವಿದೆ, ಇದು ದೇಶವನ್ನು ಕಟ್ಟುತ್ತದೆ ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.
* ಜನರ ಭಾಗವಹಿಸುವೆಕೆ ಪ್ರಜಾಪ್ರಭುತ್ವದ ದೊಡ್ಡ ಆಸ್ತಿ.
* ನಮ್ಮ ಎಲ್ಲ ಯೋಜನೆಗಳು ಬಡವರನ್ನು ತಲುಪಬೇಕು.
* ಯಾರೂ ಬಡವರಾಗಿರಲು ಬಯಸುವುದಿಲ್ಲ, ಎಲ್ಲರೂ ಬಡತನದಿಂದ ಹೊರಬರಲು ಬಯಸುತ್ತಾರೆ. ಆದ್ದರಿಂದ ನಮ್ಮ ಎಲ್ಲ ಯೋಜನೆಗಳು ಬಡವರಿಗಾಗಿ ಇರಬೇಕು.
* ಬ್ಯಾಂಕಗಳ ಬಾಗಿಲು ಬಡವರಿಗೆ ತೆರದಿರಲಿಲ್ಲಿ. ನಾವು ಅದನ್ನು ಕೊನೆಗಾಣಿಸಲು ನಿರ್ಧರಿಸಿದೆವು. ಆರ್ಥಿಕ ಸೇರ್ಪಡೆಯನ್ನು ಬಲಗೊಳಿಸಲು ನಿರ್ಥರಿಸಿದೆವು. ಆರ್ಥಿಕ ವ್ಯವಸ್ಥೆಯಲ್ಲಿ ಬಡವರನ್ನು ಸೇರಿಸಲು ಬ್ಯಾಂಕ್ ಖಾತೆ ಅತ್ಯವಶ್ಯಕ.
* 17 ಕೋಟಿ ಜನ ಪ್ರಧಾನ ಮಂತ್ರಿ ಜನಧನ ಯೋಜನೆಯ ಅಡಿಯಲ್ಲಿ ಬ್ಯಾಂಕ್ ಖಾತೆ ತೆರೆದಿದ್ದಾರೆ.
* ಬ್ಯಾಂಕ್ ಶಾಖೆ ತೆರೆದಾಗ ಜನ ಹಿಗ್ಗುತ್ತಾರೆ ಅದರೆ ಅದು ಸುಲಭ. ಅದೇ ಜನರನ್ನು ಬ್ಯಾಂಕ್ ಗೆ ಕರೆತರುವುದು ಕಷ್ಟ.
* ಸಾಮಾಜಿಕ ಭದ್ರತೆಗೆ ಒತ್ತು ನೀಡಿದ್ದೇವೆ.ಪ್ರಧಾನಮಂತ್ರಿ ಭೀಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ನಾವು ಕೊಟ್ಟ ಭರವಸೆಯಂತೆ ಮಾಡಿದ್ದೇವೆ.
* ಕಳೆದ ವರ್ಷ ಕೆಂಪು ಕೋಟೆಯಿಂದ ಶೌಚಾಲಯ ಮತ್ತು ಸ್ವಚ್ಛತೆಯ ಬಗ್ಗೆ ಮಾತನಾಡಿದ್ದೆ, ಆಗ ಕೆಲವರು ಇವರೆಂತ ಪ್ರಧಾನಿ ಎಂದು ಹೇಳಿದ್ದರು.
* ಸ್ವಚ್ಛತೆಯ ಚಳುವಳಿ ಪ್ರತಿಯೊಬ್ಬರಿಗೂ ಮುಟ್ಟಿದೆ. ಎಲ್ಲಾ ಕ್ಷೇತ್ರದ ಜನರೂ ಇದರಲ್ಲಿ ಭಾಗವಹಿಸಿ, ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
* ಈ ಸ್ವಚ್ಛ ಭಾರತ ಅಭಿಯಾನಕ್ಕೆ ಹೆಚ್ಚು ಬಲ ಕೊಟ್ಟವರು ಯಾರು ? ಅದು ಭಾರತದ ಮಕ್ಕಳು.
* ಮುಂದಿನ 1000 ದಿನಗಳಲ್ಲಿ 18,500 ಹಳ್ಲಿಗಳಿಗೆ ವಿದ್ಯುತ್ ಒದಗಿಸಲು ಸರ್ಕಾರ ಪ್ರಯತ್ನಿಸುತ್ತದೆ.
* ಹೊಸ ಘೋಷ ವಾಕ್ಯ - ಸ್ಟಾರ್ಟ್ ಅಪ್ ಇಂಡಿಯಾ ಸ್ಟಾಂಡ್ ಅಪ್ ಇಂಡಿಯಾ
* ಕೃಷಿ ಮಂತ್ರಾಲಯವನ್ನು ಕೃಷಿ ಮತ್ತು ರೈತರ ಕಲ್ಯಾಣ ಎಂದು ಪುನರ್ ನಾಮಕರಣ ಮಾಡಬೇಕು.
* ಒಂದು ಶ್ರೇಣಿ , ಒಂದು ಪಿಂಚಣಿ ಯೋಜನೆಯನ್ನು ನಾವು ಒಪ್ಪಿದ್ದೇವೆ. ಇದರ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಧನಾತ್ಮಕ ಫಲಿತಾಂಶ ಬರುವ ನಿರೀಕ್ಷೆ ಇದೆ.
* 2022 ರ ಹೊತ್ತಿಗೆ ಒಂದು ಸಾಧನೆಗೆ ಗುರಿ ಇರಬೇಕು. ಭಾರತದ 75 ನೇ ಸ್ವಾತಂತ್ರ್ಯೋತ್ಸವ ಆಚರಿಸುವಾಗ ಈ ಸಾಧನೆಯನ್ನು ಮಾಡಿರಬೇಕು.
* 2022 ರ ಹೊತ್ತಿಗೆ ಭಾರತ ಸಂವೃದ್ಧವಾದ ರಾಷ್ಟ್ರವಾಗಬೇಕು.
* ವಂದೇ ಮಾತರಂ, ಭಾರತ್ ಮಾತಾಕೀ ಜೈ, ಜೈ ಹಿಂದ್.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited