Untitled Document
Sign Up | Login    
Dynamic website and Portals
  
April 16, 2015

ನರೇಂದ್ರ ಮೋದಿ ಭಾರತದ ಸುಧಾರಣೆಯ ಮುಖ್ಯಸ್ಥ: ಬರಾಕ್ ಒಬಾಮ ಬಣ್ಣನೆ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ವಾಷಿಂಗ್ಟನ್ : ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಅತ್ಯುತ್ತಮ ಸ್ನೇಹ ಸಂಬಂಧವನ್ನು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಪ್ರತಿಷ್ಠಿತ ಟೈಮ್ ಮ್ಯಾಗಜೀನ್ ಗೆ ಮೋದಿ ಕುರಿತು ವ್ಯಕ್ತಿಚಿತ್ರಣವನ್ನು( profile write up) ಬರೆದಿದ್ದು, ಮೋದಿಯವರನ್ನು ಭಾರತದ ಸುಧಾರಣೆಯ ಮುಖ್ಯಸ್ಥ (India’s reformer-in-chief) ಎಂದು ಬಣ್ಣಿಸಿದ್ದಾರೆ.

ಟೈಮ್ ನಿಯತಕಾಲಿಕೆ ನಡೆಸಿದ ಸಮೀಕ್ಷೆಯಲ್ಲಿ ವಿಶ್ವದ ನೂರು ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಥಾನ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಲೇಖನ ಬರೆದಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ನರೇಂದ್ರ ಮೋದಿ ಕ್ರಿಯಾಶೀಲತೆ ಹಾಗೂ ಭಾರತದ ಬೆಳವಣಿಗೆಯ ಸಾಮರ್ಥ್ಯವನ್ನು ಪ್ರತಿನಿಧಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕರಾಗಿದ್ದಾರೆ. ಬಡತನದಿಂದ ಪ್ರಧಾನಿಯಾಗುವವರೆಗಿನ ಮೋದಿ ಅವರ ಜೀವನಗಾಥೆ, ಭಾರತದ ಬೆಳವಣಿಗೆಯ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಅಲ್ಲದೇ ನರೇಂದ್ರ ಮೋದಿ ಅವರು ಬಡತನ, ಶೈಕ್ಷಣಿಕ ಅಭಿವೃದ್ಧಿ, ಮಹಿಳಾ ಸಬಲೀಕರಣದ ಬಗ್ಗೆ ಮಹಾತ್ವಾಕಾಂಕ್ಷೆಯ ದೂರ ದೃಷ್ಟಿ ಹೊಂದಿದ್ದಾರೆ ಎಂದು ಒಬಾಮ ಹೇಳಿದ್ದಾರೆ. ಭಾರತದಂತೆಯೇ ಪ್ರಧಾನಿ ನರೇಂದ್ರ ಮೋದಿ ಪ್ರಾಚೀನತೆ ಮತ್ತು ಆಧುನಿಕತೆ ಎರಡನ್ನೂ ಬಿಂಬಿಸುತ್ತಾರೆ. ಯೋಗದ ಆರಾಧಕರಾಗಿರುವ ಮೋದಿ, ಟ್ವಿಟರ್ ಮೂಲಕ ಸಮಸ್ತ ಭಾರತೀಯರೊಂದಿಗೆ ಸಂಪರ್ಕದಲ್ಲಿರುವ ಮೂಲಕ ಡಿಜಿಟಲ್ ಇಂಡಿಯಾ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ಒಬಾಮ ಬಣ್ಣಿಸಿದ್ದಾರೆ.

ಒಬಾಮ ಅವರಿಗೆ ಟ್ವಿಟರ್ ಮೂಲಕ ಧನ್ಯವಾದ ಅರ್ಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಟೈಮ್ ನಿಯತಕಾಲಿಕೆಗೆ ತಮ್ಮ ಬಗ್ಗೆ ಬರೆದಿರುವುದು ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited