Untitled Document
Sign Up | Login    
Dynamic website and Portals
  
April 22, 2015

ಅಮೆರಿಕ ಅಧ್ಯಕ್ಷರು ನಮ್ಮ ಪ್ರಧಾನಿಯನ್ನು ಹೊಗಳಿರುವುದು ಇತಿಹಾಸದಲ್ಲೆ ಮೊದಲು: ರಾಹುಲ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

ನವದೆಹಲಿ : 'ಸಂಸತ್ ಅಧಿವೇಶನ'ದ ಲೋಕಸಭೆಯ ಕಲಾಪದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅಮೆರಿಕಾ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿರುವ ಬಗ್ಗೆ ಮಾತನಾಡಿದ್ದಾರೆ.

'ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸಕ್ಕೆ ಭೇಟಿ ನೀಡಿದಾಗ ಟೈಮ್ ಮ್ಯಾಗಜೀನ್ ನಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಮೋದಿ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದಿರುವ ಸುದೀರ್ಘ ಲೇಖನವನ್ನು ಓದಿದೆ. ಪ್ರಧಾನಿ ಮೋದಿ ಅವರ ಜೀವನದ ಬಗ್ಗೆಯೂ ಬರೆದಿದ್ದಾರೆ. ಬಹುಷಃ ಕಳೆದ 60 ವರ್ಷಗಳಲ್ಲೇ ಭಾರತದ ಪ್ರಧಾನಿಯನ್ನು ಹೊಗಳಿ ಅಮೆರಿಕದ ಯಾವೊಬ್ಬ ಅಧ್ಯಕ್ಷರೂ ಲೇಖನ ಬರೆದಿರಲಿಲ್ಲ. ಇದೇ ಮೊದಲು ಭಾರತದ ಪ್ರಧಾನಿಯೊಬ್ಬರ ಬಗ್ಗೆ ಅಮೆರಿಕಾ ಅಧ್ಯಕ್ಷರು ಮೆಚ್ಚುಗೆಯ ಲೇಖನ ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಒಬಾಮ ಸಾಮಾನ್ಯ ವ್ಯಕ್ತಿಯಲ್ಲ, ವಿಶ್ವದ ಖ್ಯಾತ ಕೈಗಾರಿಕೋದ್ಯಮಿಗಳು ಅಮೆರಿಕಾದಲ್ಲಿದ್ದಾರೆ, ಈ ಹಿಂದೆ ಅಮೆರಿಕಾ ಅಧ್ಯಕ್ಷರುಗಳು ಯು.ಎಸ್.ಎಸ್.ಆರ್ ನ ನಾಯಕರನ್ನು (ಮಿಖೈಲ್ ಗೋರ್ಬಚೆವ್) ಹೊಗಳುತ್ತಿದ್ದರು. ಆದರೆ ಪ್ರಧಾನಿಯೊಬ್ಬರನ್ನು ಹೊಗಳಿರುವುದು ಇತಿಹಾಸದಲ್ಲೇ ಮೊದಲು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಯು.ಎಸ್ ಅಧ್ಯಕ್ಷರು ಪ್ರಥಮ ಬಾರಿಗೆ ಹೊಗಳಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಟೈಮ್ ಮ್ಯಾಗಜೀನ್ ನಲ್ಲಿ ಲೇಖನ ಬರೆದು ಮೆಚ್ಚುಗೆ ವ್ಯಕ್ತಪಡಿಸುವುದಕ್ಕಿಂತಲೂ ಮುನ್ನವೇ ಮೋದಿ ಅವರನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಯು.ಆರ್ ಮ್ಯಾನ್ ಆಫ್ ಆಕ್ಷನ್ ಎಂದು ಬಣ್ಣಿಸಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited