Untitled Document
Sign Up | Login    
Dynamic website and Portals
  
May 16, 2015

ಚೀನಾದಲ್ಲಿ ಸಿಇಒಗಳ ಸಭೆ: ಮೇಕ್ ಇನ್ ಇಂಡಿಯಾದಲ್ಲಿ ಕೈಜೋಡಿಸುವಂತೆ ಮೋದಿ ಕರೆ

ಶಾಂಘೈನಲ್ಲಿ ಚೀನಾದ ಪ್ರತಿಷ್ಠಿತ 20ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳ ಜತೆ ಪ್ರಧಾನಿ ಮೋದಿ ಸಭೆ ಶಾಂಘೈನಲ್ಲಿ ಚೀನಾದ ಪ್ರತಿಷ್ಠಿತ 20ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳ ಜತೆ ಪ್ರಧಾನಿ ಮೋದಿ ಸಭೆ

ಶಾಂಘೈ : ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಶಾಂಘೈನಲ್ಲಿ ಚೀನಾದ ಪ್ರತಿಷ್ಠಿತ 20ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳ ಜತೆ ಸಭೆ ನಡೆಸಿದ್ದಾರೆ.

ಸಿಇಒಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಬಂಡವಾಳ ಹೂಡುವಂತೆ ಆಹ್ವಾನ ನೀಡಿದ್ದಾರೆ. ನಿಜಕ್ಕೂ ಇದೊಂದು ಐತಿಹಾಸಿಕ ಸಭೆಯಾಗಿದ್ದು, ಹೊಸ ಹೊಸ ಬದಲಾವಣೆಗಳಿಗೆ ಈ ಸಭೆ ನಾಂದಿ ಹಾಡಿದೆ ಎಂದರು.

21ನೇ ಶತಮಾನ ಏಷ್ಯಾದ ಶತಮಾನವಾಗಲಿದೆ. ಸಿಇಒಗಳ ಜತೆ ಸಭೆ ಖುಷಿತಂದಿದೆ. ಸಿಇಒಗಳ ಜತೆಗಿನ ಮಾತುಕತೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮಹತ್ವದ ಈ ಸಭೆಯ ಫಲವನ್ನು ನಾವು ಮುಂದೆ ನೋಡಲಿದ್ದೇವೆ. ಚೀನಾದಿಂದ ನಾವು ಸಾಕಷ್ಟು ಕಲಿತಿದ್ದೇವೆ, ಕಲಿಯುತ್ತಲಿದ್ದೇವೆ. ಪ್ರಮುಖವಾಗಿ ಕೌಶಲಾಭಿವೃದ್ದಿ, ಮೂಲಸೌಕರ್ಯಗಳ ಬಗ್ಗೆ ಕಲಿಯಬೇಕಿದೆ. ಈ ನಿಟ್ಟಿನಲ್ಲಿ ಚೀನಾ ಸಾಕಷ್ಟು ಸಾಧಿಸಿದೆ ಎಂದು ತಿಳಿಸಿದರು.

ಭಾರತ-ಚೀನಾ ಒಂದೇ ರೀತಿಯ ಇತಿಹಾಸವನ್ನು ಹೊಂದಿದೆ. ನಾವು ಒಂದೇ ರೀತಿಯ ಗಡಿಪ್ರದೇಶಗಳನ್ನು ಹೊಂದಿದ್ದೇವೆ. ಚೀನಾದ ನಾವಿನ್ಯತೆಯಲ್ಲಿ ಇನ್ನಷ್ಟು ಐಡಿಯಾಗಳು ಸೇರಬೇಕು. ಈ ನಿಟ್ಟಿನಲ್ಲಿ ಕಂಪನಿಗಳು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮೋದಿ ಕರೆ ನೀಡಿದರು.

ನಾವು ಎಲ್ಲವನ್ನೂ ನಮ್ಮಲ್ಲೇ ಉತ್ಪಾದಿಸಬೇಕೆಂದಿದ್ದೇವೆ. ಈ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಮಹತ್ವದ ಯೋಜನೆಯಾಗಿದೆ. ಈ ಯೋಜನೆಗೆ ಚೀನಾ ಸಹಕಾರ ಅತ್ಯಗತ್ಯ. ಈ ಹಿಂದೆ ಭಾರತ-ಚೀನಾ ಒಟ್ಟಾಗಿ ಸೇರಿ ಸಾಕಷ್ಟು ಸಾಧಿಸಿವೆ. ಇನ್ಮುಂದೆ ಆ ಸಾಧನೆ ಗಗನ ಮುಂಟ್ಟಬೇಕು ಎಂಬುದು ನಮ್ಮ ಹೆಬ್ಬಯಕೆ ಎಂದು ಮನದಾಳ ಬಿಚ್ಚಿಟ್ಟರು.

ಚೀನಾದೊಂದಿಗೆ ಸೇರಿ ಕೆಲಸಮಾಡಲು ನಾವು ಉತ್ಸುಕರಾಗಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಗೆ ನಾವು ಪಣತೊಟ್ಟಿದ್ದೇವೆ. ಭಾರತ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಬೇಕೆಂದು ನಾವು ಬಯಸುತ್ತೇವೆ. ವ್ಯಾಪಾರ, ವಾಣಿಜ್ಯ ವಹಿವಾಟು ನಡೆಸಲು ಭಾರತ ಸಿದ್ಧವಿದೆ. ನಾವು ಅಧಿಕಾರಕ್ಕೆ ಬಣ್ದ ಬಳಿಕ ಸಾಕಷ್ಟು ಬ್ವದಲಾವಣೆಗಳಾಗಿವೆ. ಭಾರತದಲ್ಲಿ ಹೂಡಿಕೆಗೆ ಎಲ್ಲರೂ ಉತ್ಸುಕರಾಗಿದ್ದಾರೆ. ಹೊಸದಾಗಿ ಜಿ ಎಸ್ ಟಿ ಕಾಯ್ದೆ ಜಾರಿಗೆ ತರಲಾಗಿದೆ. ಇನ್ನು ಭಾರತದಲ್ಲಿ ರೈಲ್ವೆ, ಮೆಟ್ರೋ ಯೋಜನೆಗಳು ವಿಸ್ತಾರಗೊಳ್ಳುತ್ತಿವೆ. ಹೀಗಾಗಿ ಬಂಡವಾಳ ಹೂಡಲು ಭಾರತ ಪ್ರಶಸ್ತ ಜಾಗವಾಗಿದೆ ಎಂದು ಮೋದಿ ತಿಳಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited