Untitled Document
Sign Up | Login    
Dynamic website and Portals
  
December 20, 2014

ಪಾಕ್ ರಾಜಕಾರಣಿಗಳ ಮಕ್ಕಳನ್ನು ಹತ್ಯೆ ಮಾಡುವುದಾಗಿ ತೆಹ್ರೀಕ್-ಇ-ತಾಲೀಬಾನ್ ಬೆದರಿಕೆ

ಇಸ್ಲಾಮಾಬಾದ್ : ಉಗ್ರ ಫಜಾಲುಲ್ಲಾ ಹತ್ಯೆಯಿಂದ ಕೆರಳಿರುವ ತೆಹ್ರೀಕ್-ಇ-ತಾಲೀಬಾನ್ ಉಗ್ರ ಸಂಘಟನೆ, ಪಾಕಿಸ್ತಾನದ ರಾಜಕಾರಣಿಗಳ ಮಕ್ಕಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದೆ.

ಮೊಹಮ್ಮದ್ ಖರಾಸಾನಿ ಎಂಬುವವನಿಂದ ಪತ್ರ ಬಂದಿದ್ದು ಆತ, ಪಾಕ್ ರಾಜಕಾರಣಿಗಳ ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಖರಾಸಾನಿ ತೆಹ್ರೀಕ್-ಇ-ತಾಲೋಬಾನ್ ನ ಕಮಾಂಡರ್ ಎಂದು ಹೇಳಲಾಗಿದೆ.

ಭಯೋತ್ಪಾದಕರನ್ನು ಹತ್ಯೆ ಮಾಡುವ ಪಾಕಿಸ್ತಾನದ ನಡೆ ಮುಂದುವರೆದಲ್ಲಿ ಟಿಟಿಪಿ ಉಗ್ರ ಸಂಘಟನೆ ಪ್ರಧಾನಿ ನವಾಜ್ ಷರೀಫ್, ಸೇನಾಧಿಕಾರಿಗಳೂ ಸೇರಿ ದೇಶದ ಪ್ರಮುಖ ರಾಜಕಾರಣಿಗಳ ಕುಟುಂಬವನ್ನು ಕೊಲೆ ಮಾಡುವುದಾಗಿ ಪತ್ರದ ಮೂಲಕ ಎಚ್ಚರಿಕೆ ನೀಡಲಾಗಿದೆ. ಪೇಶಾವರದಲ್ಲಿ ಶಾಲಾ ಮಕ್ಕಳನ್ನು ಕೊಂದಿರುವ ತಮ್ಮ ಪೈಶಾಚಿಕ ಕೃತ್ಯವನ್ನು ತೆಹ್ರಿಕ್-ಇ-ತಾಲೀಬಾನ್ ಸಮರ್ಥಿಸಿಕೊಂಡಿದೆ.

ಸೇನಾ ಶಾಲೆ ಮೇಲೆ ನಡೆದಿದ್ದ ದಾಳಿಯ ರುವಾರಿ ಫಜಾಲುಲ್ಲಾ ಸೇರಿದಂತೆ 70ಕ್ಕೂ ಹೆಚ್ಚು ಉಗ್ರರನ್ನು ಪಾಕಿಸ್ತಾನ ಸೇನೆ ಈವರೆಗೂ ಹತ್ಯೆ ಮಾಡಿದೆ. ಈ ಹಿನ್ನೆಲೆಯಲ್ಲಿ ತೆಹ್ರೀಕ್-ಇ-ತಾಲೀಬಾನ್ ಬೆದರಿಕೆ ಹಾಕಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited