ವಾಷಿಂಗ್ಟನ್ : ವಾಷಿಂಗ್ಟನ್ ಡಿಸಿ ಮೇಲೆ ನ್ಯೂಕ್ಲಿಯರ್ ಬಾಂಬ್ ಹಾಕುತ್ತೇವೆ ಎಂದು ವಿಶ್ವದ ದೊಡ್ಡಣ್ಣ ಅಮೆರಿಕಾಕ್ಕೆ ಉತ್ತರ ಕೊರಿಯಾ ಬೆದರಿಕೆ ಹಾಕಿ ವಿಡಿಯೋ ಬಿಡುಗಡೆ ಮಾಡಿದೆ.
ಉತ್ತರ ಕೊರಿಯಾದ ಮುಖವಾಣಿ ವೆಬ್ ಸೈಟ್ ಡಿಪಿಆರ್ ಕೆ ಇತ್ತೀಚೆಗೆ 4 ನಿಮಿಷಗಳ ಕಾಲದ ಲಾಸ್ಟ್ ಚಾನ್ಸ್ ತಲೆಬರಹದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಉತ್ತರ ಕೊರಿಯಾದ ಜೊತೆ ಅಮೆರಿಕ ಸೋತ ಚಿತ್ರಣ. 1968ರಲ್ಲಿ ಅಮೆರಿಕದ ಗೂಢಚಾರ ಹಡಗನ್ನು ವಶಕ್ಕೆ ತೆಗೆದುಕೊಂಡ ಚಿತ್ರಣವನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಅಮೆರಿಕಕ್ಕೆ ಕೊನೆಯ ಅವಕಾಶ ಎಂಬ ಟೈಟಲ್ ನಲ್ಲಿ ಉತ್ತರ ಕೊರಿಯಾ ಅಮೆರಿಕದ ವಾಷಿಂಗ್ಟನ್ ಡಿಸಿ ಮೇಲೆ ನ್ಯೂಕ್ಲಿಯರ್ ಬಾಂಬ್ ಪ್ರಯೋಗಿಸಿ ಅದರಲ್ಲಿ ಅಮೆರಿಕದ ಬಾವುಟ ಸುಟ್ಟು ಬೂದಿಯಾಗೋದನ್ನು ಚಿತ್ರೀಕರಿಸಲಾಗಿದೆ. ಉತ್ತರ ಕೊರಿಯಾ ಹೀಗೆ ವೀಡಿಯೋದಲ್ಲಿ ಅಮೆರಿಕಕ್ಕೆ ಧಮ್ಕಿ ಹಾಕುತ್ತಿರುವುದು ಇದೇ ಮೊದಲೇನಲ್ಲ ಎಂದು ಹೇಳಲಾಗಿದೆ.