Untitled Document
Sign Up | Login    
Dynamic website and Portals
  
January 29, 2015

ಜಾರಿಗೆ ಬರಲು ಸಿದ್ಧವಾಗಿದೆ ಎನ್.ಡಿ.ಎ ಸರ್ಕಾರದಿಂದ 'ರೀಡ್ ಇಂಡಿಯಾ' ಎಂಬ ವಿನೂತನ ಯೋಜನೆ

ಪ್ರಧಾನಿ  ನರೇಂದ್ರ ಮೋದಿ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : 'ಮೇಕ್ ಇನ್ ಇಂಡಿಯಾ&id=17075'>ಮೇಕ್ ಇನ್ ಇಂಡಿಯಾ'ದಂತಹ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ, ರೀಡ್ ಇಂಡಿಯಾ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.

ಫೆ.14ರಂದು ಈ ಅಭಿಯಾನ ಜಾರಿಗೆ ಬರುವ ಎಲ್ಲಾ ಸಾಧ್ಯತೆಗಳಿವೆ. ಯೋಜನೆಯ ಭಾಗವಾಗಿ ದೇಶಾದ್ಯಂತ ಹೊಸ ಗ್ರಂಥಾಲಯಗಳು ಸ್ಥಾಪನೆಯಾಗಲಿದ್ದು, ಎಲ್ಲಾ ವಯೋಮಿತಿಯ ಜನರಿಗೂ ಅಗತ್ಯವಿರುವ ಪುಸ್ತಗಳನ್ನು ಈ ಗ್ರಂಥಾಲಯದ ಮೂಲಕ ತಲುಪಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಪ್ರಸ್ತುತ ಇರುವ ಯೋಜನೆ ಸಂಸದ ಆದರ್ಶ ಗ್ರಾಮ ಯೋಜನೆಯಡಿ ಪ್ರತಿಯೊಬ್ಬ ಸಂಸದ ದತ್ತು ತೆಗೆದುಕೊಂಡಿರುವ ಗ್ರಾಮಗಳಲ್ಲಿ ಪ್ರಕಾರ ಸ್ಟಡಿ ಸೆಂಟರ್ ಗಳು ಪ್ರಾರಂಭವಾಗಲಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಈ ಯೋಜನೆಯನ್ನು ನಿರ್ವಹಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಈ ವರೆಗೂ ಸಂಸದ ಆದರ್ಶ ಗ್ರಾಮ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು ಈಗ ರೀಡ್ ಇಂಡಿಯಾ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದಾರೆ. ಈ ಮೂಲಕ ಪುಸ್ತಕ, ಗ್ರಂಥಾಲಯಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited