Untitled Document
Sign Up | Login    
Dynamic website and Portals
  
August 20, 2016

ಪ್ರಧಾನಿ ಮೋದಿ ಈಗ ಇನ್ ಕ್ರೆಡಿಬಲ್ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್

ಪ್ರಧಾನಿ ಮೋದಿ ಈಗ ಇನ್ ಕ್ರೆಡಿಬಲ್ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್

ನವದೆಹಲಿ : ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ರಮ ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನರಾಯಭಾರಿ ಯಾರಾಗಬಹುದು ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಬ್ರ್ಯಾಂಡ್ ಅಂಬಾಸಿಡರ್ ಆಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಆಯ್ಕೆ ಮಾಡಲಾಗಿದೆ.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ತೀವ್ರ ಚರ್ಚೆಗೆ ಕಾರಣವಾಗಿದ್ದ ಇನ್ ಕ್ರೆಡಿಬಲ್ ಇಂಡಿಯಾ ಪ್ರಚಾರ ರಾಯಭಾರಿ ಹುದ್ದೆಗೆ ಪ್ರಧಾನಿ ಮೋದಿ ಅವರನ್ನೇ ಆಯ್ಕೆ ಮಾಡಿದೆ.

ಒಂದು ವಾರದಲ್ಲಿ ನಿರ್ಮಾಪಕರಿಗೆ ಜಾಹೀರಾತು ಚಿತ್ರಗಳ ಪರಿಕಲ್ಪನೆಗಳನ್ನು ಸಲ್ಲಿಸುವಂತೆ ಪ್ರವಾಸೋದ್ಯಮ ಸಚಿವಾಲಯ ಕೇಳಿಕೊಂಡಿದ್ದು, ಅವುಗಳಲ್ಲಿ ಪ್ರಧಾನಿ ಮೋದಿ ಅವರು ದೇಶದ ವಿವಿಧ ಸ್ಥಳಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.

ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಅವರು ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ಪ್ರಚಾರಕ್ಕೆ ಪ್ರಧಾನಿಯೇ ಸೂಕ್ತ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ನೂತನ ರಾಯಭಾರಿಯನ್ನಾಗಿ ಈಗ ಪ್ರಧಾನಿ ಮೋದಿಯವರನ್ನು ಆಯ್ಕೆಮಾಡಲಾಗಿರುವುದು ವಿಶೇಷ.

ಅಸಹಿಷ್ಣುತೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ದೇಶಾದ್ಯಂತ ಕೋಲಾಹಲಕ್ಕೆ ಕಾರಣನಾಗಿದ್ದ ಬಾಲಿವುಡ್ ನಟ ಆಮೀರ್ ಖಾನ್ ಅವರನ್ನು ಇನ್ ಕ್ರೆಡಿಬಲ್ ಇಂಡಿಯಾ ರಾಯಭಾರಿ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ನಂತರ ಆ ಸ್ಥಾನಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಪ್ರಿಯಾಂಕ ಚೋಪ್ರ ಅವರ ಹೆಸರುಗಳು ಕೇಳಿಬಂದಿದ್ದವು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited