Untitled Document
Sign Up | Login    
Dynamic website and Portals
  
January 8, 2016

ಅಮಿತಾಬ್ ಬಚ್ಚನ್ ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ನೂತನ ರಾಯಭಾರಿಯಾಗುವ ಸಾಧ್ಯತೆ

ಅಮಿತಾಬ್ ಬಚ್ಚನ್ ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ನೂತನ ರಾಯಭಾರಿಯಾಗುವ ಸಾಧ್ಯತೆ

ನವದೆಹಲಿ : ನಟ, ಗುಜರಾತ್ ಪ್ರವಾಸೋದ್ಯಮರಾಯಭಾರಿ ಅಮಿತಾಬ್ ಬಚ್ಚನ್, ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ನೂತನ ರಾಯಭಾರಿಯಾಗುವ ಸಾಧ್ಯತೆ ಇದೆ. ನಟ ಅಮೀರ್ ಖಾನ್ ಒಪ್ಪಂದ ಮುಗಿದ ಹಿನ್ನಲೆಯಲ್ಲಿ ಅಮಿತಾಬ್ ಬಚ್ಚನ್ ಅನ್ನು ಮೋದಿ ಸರ್ಕಾರ ನೂತನ ರಾಯಭಾರಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.

ಅಮಿತಾಬ್ ಬಚ್ಚನ್ ಅವರು ಸಚಿವಾಲಯದ ಮೊದಲ ಆಯ್ಕೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ. ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರನ್ನು ಸಹ ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.

ಖಾಸಗಿ ಸಂಸ್ಥೆಯೊಂದು ಅಮೀರ್ ಖಾನ್ ನನ್ನು ಇನ್ ಕ್ರೆಡಿಬಲ್ ಇಂಡಿಯಾರಾಯಭಾರಿಯಾಗಿ ಆಯ್ಕೆ ಮಾಡಿತ್ತು. ಈಗ ಸಂಸ್ಥೆಯೊಂದಿನ ಒಪ್ಪಂದ ಮುಗಿದಿದೆ. ಆದ್ದರಿಂದ ಅಮೀರ್ ಖಾನ್ ನೊಂದಿನ ವ್ಯವಸ್ಥೆ ಕೂಡ ಮುಗಿದಿರುತ್ತದೆ ಎಂದು ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅಮೀರ್ ಖಾನ್, ಸರ್ಕಾರದ ನಿರ್ಧಾರವನ್ನು ಗೌರವಿಸುತ್ತೇನೆ. ಈ ಅಭಿಯಾನಕ್ಕೆ ನಾನು ಯಾವತ್ತೂ ಸಂಭಾವನೆ ಪಡೆದಿಲ್ಲ ಎಂದು ಹೇಳಿದ್ದಾರೆ. ಯಾವುದೇ ಅಭಿಯಾನಕ್ಕೆ ರಾಯಭಾರಿ ಬೇಕೋ ಬೇಡವೋ ಎಂದು ನಿರ್ಧರಿಸುವುದು ಸರ್ಕಾರ, ಒಂದು ವೇಳೆ ರಾಯಭಾರಿ ಬೇಕೆಂದರೆ ಯಾರಾಗಬೇಕೆಂದು ನಿರ್ಧರಿಸುವುದೂ ಸಹ ಸರ್ಕಾರ ಎಂದು ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.

 

 

English Summary : Actor, Amitabh Bachchan, brand ambassador of Gujarath Tourisma to replace Aamir Khan for Incredible India Campaign. Amitabh Bachchan is the Modi government's first choice said sources.

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited