Untitled Document
Sign Up | Login    
Dynamic website and Portals
  
January 22, 2015

ಮುಸ್ಲಿಮ್ ಸಮುದಾಯದ ಜನಸಂಖ್ಯೆ ಶೇ24ರಷ್ಟು ಬೆಳವಣಿಗೆ

ಕಳೆದ ದಶಕಕ್ಕಿಂತ ಕುಸಿದ ಬೆಳವಣಿಗೆ ಪ್ರಮಾಣ

ನವದೆಹಲಿ : ದೇಶದಲ್ಲಿ ಧರ್ಮಾಧಾರಿತ ಜನಗಣತಿ ಅಂಕಿ-ಅಂಶ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಬಿಡುಗಡೆಗೊಳ್ಳಲಿದೆ. ಈ ಅಂಕಿ-ಅಂಶದಲ್ಲಿ 2001ರಿಂದ 2011ರ ವರೆಗೆ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇ.24ರಷ್ಟು ಬೆಳವಣಿಗೆ ಕಂಡುಬಂದಿದೆ.

ಯುಪಿಎ ಸರ್ಕಾರದಲ್ಲಿ ಕಳೆದ ವರ್ಷವೇ ನಡೆಸಲಾಗಿದ್ದ ಜನಗಣತಿ ಅಂಕಿ-ಅಂಶಗಳನ್ನು ಕಾರಣಾಂತರಗಳಿಂದ ಬಿಡುಗಡೆ ಮಾಡಿರಲಿಲ್ಲ. ಈ ಅಂಕಿ-ಅಂಶಗಳನ್ನು ಎನ್.ಡಿ.ಎ ಸರ್ಕಾರ ಬಿಡುಗಡೆ ಮಾಡುತ್ತಿದ್ದು, ವರದಿಯಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.24ರಷ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ. ಕಳೆದ ದಶಕಕ್ಕೆ ಹೋಲಿಸಿದರೆ ಈ ದಶಕದಲ್ಲಿ ಮುಸ್ಲಿಮರ ಜನಸಂಖ್ಯೆ ಬೆಳವಣಿಗೆ ಇಳಿಕೆಯಾಗಿದೆ. 1991-2001ರಲ್ಲಿ ಅವರ ಜನಸಂಖ್ಯೆ ಶೇ.29ರಷ್ಟಿತ್ತು.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಅಸ್ಸಾಂ ನಲ್ಲಿ ಮುಸ್ಲಿಂ ಸಮುದಾಯದ ಬೆಳವಣಿಗೆ ಹೆಚ್ಚುತ್ತಿದೆ ಎಂದು ತಿಳಿದುಬಂದಿದೆ. ಕಳೆದ ದಶಕದಲ್ಲಿ ಶೇ.30ರಷ್ಟಿದ್ದ ಜನಸಂಖ್ಯೆ ಈ ದಶಕದಲ್ಲಿ ಶೇ.34.2ರಷ್ಟು ಏರಿಕೆಯಾಗಿದೆ. ಈ ಏರಿಕೆಗೆ ಬಾಂಗ್ಲಾ ದೇಶದಿಂದ ವಲಸೆ ಬಂದಿರುವವರೇ ಕಾರಣ ಎಂದು ಹೇಳಲಾಗಿದೆ.

ಅಸ್ಸಾಂ ನ ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳವಿದ್ದು, ಬಾಂಗ್ಲಾ ದೇಶದ ನಾಗರಿಕರ ಅಕ್ರಮ ವಲಸೆಯ ಪರಿಣಾಮ ಶೇ.27ರಷ್ಟು ಮುಸ್ಲಿಂ ಸಮುದಾಯದ ಜನ ಸಂಖ್ಯೆ ಹೆಚ್ಚಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited