Untitled Document
Sign Up | Login    
Dynamic website and Portals
  
March 21, 2015

ಖಾಸಗಿ ಎಫ್.ಎಂ.ರೇಡಿಯೋದಲ್ಲಿ ಸುದ್ದಿ ಪ್ರಸಾರಕ್ಕೆ ಕೇಂದ್ರದ ಅನುಮತಿ ಶೀಘ್ರ

ನವದೆಹಲಿ : ಕೆಲವೊಂದು ಷರತ್ತುಗಳೊಂದಿಗೆ ಖಾಸಗಿ ಎಫ್.ಎಂ.ರೇಡಿಯೋ ವಾಹಿನಿಗಳಿಗೆ ಸುದ್ದಿಗಳನ್ನು ಪ್ರಸಾರಿಸಲು ಅನುಮತಿ ನೀಡುವ ಪ್ರಸ್ತಾವ ತನ್ನ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸರಕಾರ ಲೋಕಸಭೆಗೆ ತಿಳಿಸಿದೆ.

ಎಫ್.ಎಂ.ರೇಡಿಯೋ ಎರಡನೇ ಹಂತದ ಯೋಜನೆಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಖಾಸಗಿ ಎಫ್.ಎಂ.ರೇಡಿಯೋ ವಾಹಿನಿಗಳಿಗೆ ಸುದ್ದಿಗಳನ್ನು ಬಿತ್ತರಿಸಲು ಅವಕಾಶ ಇಲ್ಲವಾಗಿದೆ. ಆದರೆ ಸುದ್ದಿಗಳ ಪ್ರಸಾರಕ್ಕೆ ಅನುಮತಿಯನ್ನು ನೀಡಬೇಕೆಂಬ ಬೇಡಿಕೆ ಖಾಸಗಿ ಎಫ್.ಎಂ.ರೇಡಿಯೋ ವಾಹಿನಿಗಳಿಂದ ಬಂದಿದ್ದು ಈ ಪ್ರಸ್ತಾವವನ್ನು ಸರಕಾರದ ಗಂಭೀರ ಪರಿಗಣನೆಯಲ್ಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಹಾಯಕ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಲೋಕಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.

ಎಫ್ ರೇಡಿಯೋ ಮೂರನೇ ಹಂತದ ಯೋಜನೆಯಲ್ಲಿ ಆರಂಭಗೊಳ್ಳಲಿರುವ ಎಫ್.ಎಂ.ರೇಡಿಯೋ ವಾಹಿನಿಗಳಿಗೆ ಆಲ್‌ ಇಂಡಿಯಾ ರೇಡಿಯೋದ ಸುದ್ದಿಗಳನ್ನು ಯಥಾವತ್ತಾಗಿ ಬಿತ್ತರಿಸಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ.

ಆದರೆ ಕ್ರೀಡಾ ಚಟುವಟಿಕೆಗಳ ನೇರಪ್ರಸಾರ, ಸಂಚಾರ ಮತ್ತು ಹವಾಮಾನ ಮಾಹಿತಿಗಳನ್ನು ಸುದ್ದಿಯೇತರ ವಿಚಾರಗಳೆಂದು ಪರಿಗಣಿಸಲಾಗಿದ್ದು ಈ ವಿಚಾರಗಳೊಂದಿಗೆ ಪ್ರಚಲಿತ ವಿದ್ಯಮಾನಗಳ ಪ್ರಸಾರಕ್ಕೆ ಅನುಮತಿಯನ್ನು ನೀಡಲಾಗುವುದು.

ಸ್ಥಳೀಯ ಮಟ್ಟದ ಕ್ರೀಡಾ ಚಟುವಟಿಕೆಗಳ ನೇರ ವೀಕ್ಷಕ ವಿವರಣೆ, ಸಂಚಾರ, ಹವಾಮಾನ ಹಾಗೂ ಸಾಂಸ್ಕೃತಿಕ ಮತ್ತು ಉತ್ಸವಗಳನ್ನು ಸುದ್ದಿಯೇತರ ವಿಭಾಗದಲ್ಲಿ ವಿಂಗಡಿಸಲಾಗಿದ್ದು ಇವುಗಳ ಪ್ರಸಾರಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದರು.

2011ರಲ್ಲಿ ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ ಪಡೆದ ಮೀಸಲು ಬೆಲೆ ಸೂತ್ರದಂತೆ 69ನಗರಗಳಲ್ಲಿನ 135 ಖಾಸಗಿ ಎಫ್.ಎಂ.ರೇಡಿಯೋ ವಾಹಿನಿಗಳ ಪ್ರಥಮ ಕಂತಿನ ಇ-ಟೆಂಡರ್‌ಗೆ ಜ.16ರಂದು ಸರಕಾರ ತನ್ನ ಅನುಮತಿಯನ್ನು ನೀಡಿದೆ. ಈ ಸಂಬಂಧ ವಾರ್ತಾ ಮತ್ತು ಪ್ರಸಾರ ಖಾತೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಜ.21ರಂದು ವಿವರಗಳನ್ನು ಪ್ರಕಟಿಸಲಾಗಿದೆ ಎಂದವರು ತಿಳಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited