ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕಾ ಪ್ರವಾಸಕ್ಕೆ ಹೆಚ್ಚುವರಿಯಾಗಿ ಬಳಸಲಾಗಿದ್ದ ಏರ್ ಇಂಡಿಯಾ ವಿಮಾನದಲ್ಲಿ ನಿಷ್ಕ್ರಿಯಗೊಂಡಿದ್ದ ಗ್ರೆನೇಡ್ ಪತ್ತೆಯಾಗಿದ್ದು ಭದ್ರತೆ ಬಗ್ಗೆ ಆತಂಕ ಉಂಟಾಗಿದೆ.
ಏರ್ ಇಂಡಿಯಾ ಜಂಬೋ ವಿಮಾನ ಬಿಸ್ನೆಸ್ ಕ್ಲಾಸ್ ನಲ್ಲಿ ನಿಷ್ಕ್ರಿಯಗೊಂಡಿದ್ದ ಗ್ರೆನೇಡ್ ಪತ್ತೆಯಾಗಿದೆ. ಮುಂಬೈ-ಹೈದರಾಬಾದ್ ಜೆಡ್ಡಾ ಮಾರ್ಗವಾಗಿ ಚಲಿಸುವ ವಿಮಾನದಲ್ಲಿ ನಿಷ್ಕ್ರಿಯಗೊಂಡಿದ್ದ ಗ್ರೆನೇಡ್ ನ್ನು ಕಂಡ ಏರ್ ಇಂಡಿಯಾ ಸಿಬ್ಬಂದಿಗಳು ಜೆಡ್ಡಾ ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ಪರಿಶೀಲನೆ ನಡೆಸಿರುವ ಭದ್ರತಾ ಸಿಬ್ಬಂಧಿಗಳು ಗ್ರೆನೇಡನ್ನು ವಿಮಾನದಿಂದ ಹೊರತೆಗೆದಿದ್ದಾರೆ.
ಗ್ರೆನೇಡ್ ಕಾಣಿಸಿಕೊಂಡಿದ್ದ ವಿಮಾನ, ಶೀಘ್ರವೇ ಕ್ಯಾಲಿಕಟ್ ಗೆ ತಲುಪಲಿದೆ ಎಂದು ವಿಮಾನ ನಿಲ್ದಾಣ ಸಿಬ್ಬಂಧಿಗಳು ತಿಳಿಸಿದ್ದಾರೆ. ಗ್ರೆನೇಡ್ ಪತ್ತೆಯಾಗಿದ್ದ ವಿಮಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕಾ ಪ್ರವಾಸಕ್ಕೆ ಸ್ಟ್ಯಾಂಡ್ ಬೈ(ಹೆಚ್ಚುವರಿ) ವಿಮಾನವನನ್ನಾಗಿ ಬಳಸಲಾಗಿತ್ತು.