Untitled Document
Sign Up | Login    
Dynamic website and Portals
  
March 29, 2015

ಏರ್ ಇಂಡಿಯಾ ವಿಮಾನ ಹೈಜಾಕ್‍ ಮಾಡಲು ಪಾಕ್ ಯತ್ನ

ನವದೆಹಲಿ : ನೌಕಾಪಡೆಯ ವರ್ಷ ಯೋಜನೆಗೆ ಕಣ್ಣು ಹಾಕಿದ್ದ ಪಾಕಿಸ್ತಾನ ಈಗ, ಏರ್‍ ಇಂಡಿಯಾ ವಿಮಾನ ಹೈಜಾಕ್ ಮಾಡಲು ಯತ್ನಿಸಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಲಂಡನ್‍ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ರೋಗಿ ಮತ್ತು ವೈದ್ಯರಂತೆ ನಟಿಸಿಕೊಂಡು ಐವರು ಪಾಕಿಸ್ತಾನಿ ನಾಗರಿಕರು ಈ ಪ್ರಯತ್ನ ನಡೆಸಿದ್ದಾರೆ. ಅವರಲ್ಲೊಬ್ಬ ಆರಂಭದಲ್ಲಿ ರೋಗಿಯಂತೆ ನಟಿಸಿದ. ಇತರ ನಾಲ್ವರು ವೈದ್ಯರಂತೆ ಸೋಗು ಹಾಕಿಕೊಂಡು ಅವನನ್ನು ಪರೀಕ್ಷೆ ಮಾಡುವಂತೆ ನಟನೆ ಮಾಡಿದರು. ಇದಾದ ಬಳಿಕ ಅವರು ಕಾಕ್‍ ಪಿಟ್‍ಗೆ ಪ್ರವೇಶಿಸುವ ಇಚ್ಛೆ ವ್ಯಕ್ತಪಡಿಸಿ, ಅಲ್ಲಿ ಕ್ಯಾಪ್ಟನ್‍ನನ್ನು ಭೇಟಿ ಮಾಡಬೇಕೆಂದು ತಿಳಿಸಿದರು.

ಆದರೆ ಭದ್ರತಾ ಸಿಬ್ಬಂದಿ ಅದಕ್ಕೆ ಒಪ್ಪಲಿಲ್ಲ. ಆದರೂ, ಪಟ್ಟು ಬಿಡದ ಪಾಕಿಸ್ತಾನಿ ನಾಗರಿಕರು ಭೇಟಿ ಮಾಡಿಯೇ ಸಿದ್ಧ ಎಂದರು. ಭದ್ರತಾ ಸಿಬ್ಬಂದಿ ಮತ್ತು ಕ್ಯಾಪ್ಟನ್ ಆ ರೀತಿ ಭೇಟಿ ಸಾಧ್ಯವೇ ಇಲ್ಲ ಎಂದು ಖಡಕ್ ಆಗಿ ಹೇಳಿದ ಬಳಿಕ ಪಾಕಿಸ್ತಾನಿ ನಾಗರಿಕರು ಸುಮ್ಮನಾದರು.

ವಿಮಾನದಲ್ಲಿ ಈ ಘಟನೆ ನಡೆದ ಬಳಿಕ ಏರ್ ಇಂಡಿಯಾ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ಐವರು ಪಾಕಿಸ್ತಾನಿ ನಾಗರಿಕರ ಪಾಸ್ ಪೋರ್ಟ್ ನಲ್ಲಿದ್ದ ದೂರವಾಣಿ ಸಂಖ್ಯೆಗಳಿಗೆ ಡಯಲ್ ಮಾಡಿದರು. ಆದರೆ, ಅವುಗಳು ನಕಲಿ ಸಂಖ್ಯೆಗಳೆಂದು ಗೊತ್ತಾಗಿದೆ. ಇದರಿಂದಾಗಿ ಆ ಐವರು ನಕಲಿ ಪಾಸ್ ಪೋರ್ಟ್ ಬಳಸಿ ಲಂಡನ್‍ನಿಂದ ದೆಹಲಿಗೆ ಪ್ರಯಾಣಿಸಿದ್ದರೇ ಎಂದು ಶಂಕೆ ವ್ಯಕ್ತವಾಗಿದೆ. ವಿಮಾನ ತಪಾಸಣೆಯನ್ನೂ ನಡೆಸಲಾಯಿತು.

ಏರ್ ಇಂಡಿಯಾ, ಡಿಜಿಸಿಎ ಹೈಜಾಕ್ ಯತ್ನ ನಡೆದಿತ್ತು ಎಂಬ ವರದಿಯನ್ನು ತಳ್ಳಿಹಾಕಿದೆ. ಆದರೆ ಅಧಿಕೃತ ಸಿಬ್ಬಂದಿ ಹೊರತು ಪಡಿಸಿ ಬೇರ್ಯಾರಿಗೂ ಕಾಕ್‍ಪಿಟ್ ಪ್ರವೇಶಕ್ಕೆ ಅವಕಾಶ ನೀಡಬಾರದು. ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ಇರಿಸಬೇಕೆಂದು ಸರ್ಕಾರಿ ಮತ್ತು ಖಾಸಗಿ ವೈಮಾನಿಕ ಸಂಸ್ಥೆಗಳಿಗೆ ಸೂಚಿಸಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited