Untitled Document
Sign Up | Login    
Dynamic website and Portals
  
March 3, 2015

ಎಚ್‌1ಎನ್‌1 ರೋಗಿಗಳಿಗೆ ಮಹಾರಾಷ್ಟ್ರದಲ್ಲಿ ಉಚಿತ ಚಿಕಿತ್ಸೆ

ಮುಂಬೈ : ಎಚ್‌1ಎನ್‌1 ಹಂದಿ ಜ್ವರ ರೋಗಿಗಳಿಗೆ ಸರಕಾರದ ಖರ್ಚಿನಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ.

ಈ ನಡುವೆ ಮುಂಬಯಿಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಎಚ್‌1ಎನ್‌1 ಹಂದಿ ಜ್ವರವು ಇನ್ನಷ್ಟು ಹೆಚ್ಚುವ ಭೀತಿ ಮೂಡಿಸಿದೆ.

ರಾಜ್ಯಾದ್ಯಂತದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಎಚ್‌1ಎನ್‌1 ಹಂದಿ ಜ್ವರ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಮೂಲಕ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಬರುವ ಎಲ್ಲ ಖರ್ಚುಗಳನ್ನು ಸರಕಾರವೇ ಭರಿಸಲಿದೆ. ಖಾಸಗಿ ಆಸ್ಪತ್ರೆಗಳು ಹಂದಿ ಜ್ವರ ಕಾಯಿಲೆಯಿಂದ ಬಳಲುವವರಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳುವಂತಿಲ್ಲ . ಈ ಸಂಬಂಧ ತಗಲುವ ಎಲ್ಲ ಖರ್ಚುಗಳನ್ನು ಸರ್ಕಾರವೇ ಭರಿಸಲಿದೆ ಎಂದು ಫ‌ಡ್ನವೀಸ್‌ ತಿಳಿಸಿದ್ದಾರೆ.

ರಾಜ್ಯದಲ್ಲಿನ ಶೇ.90ರಷ್ಟು ಹಂದಿ ಜ್ವರ ರೋಗಿಗಳು ಮುಂಬಯಿ, ಪುಣೆ, ನಾಗಪುರ, ಔರಂಗಾಬಾದ್‌ ಮತ್ತು ಲಾತೂರ್ ನವರಾಗಿದ್ದಾರೆ. ಈ ಪ್ರದೇಶದಲ್ಲಿನ ದಿನದ ಉಷ್ಣಾಂಶ ಇದ್ದಕ್ಕಿಂದ್ದಂತೆಯೇ ಕುಸಿದಿದೆ ಮತ್ತು ಇದರಿಂದಾಗಿ ಈ ಪ್ರದೇಶಗಳಲ್ಲಿ ಹಂದಿ ಜ್ವರ ಸೋಂಕು ಇನ್ನಷ್ಟು ವ್ಯಾಪಿಸುವ ಭೀತಿ ಇದೆ. ರಾಜ್ಯದ ಆರೋಗ್ಯ ಇಲಾಖೆಯನ್ನು ಈ ನಿಟ್ಟಿನಲ್ಲಿ ಕಟ್ಟೆಚ್ಚರದಲ್ಲಿ ಇರಿಸಲಾಗಿದೆ. ಖಾಸಗಿ ಸಹಿತ ಎಲ್ಲ ಆಸ್ಪತ್ರೆಗಳಲ್ಲಿ ಎಲ್ಲ ಹಂದಿಜ್ವರ ರೋಗಿಗಳಿಗೆ, ಸೋಂಕು ತಗಲಿದವರಿಗೆ, ಉಚಿತವಾಗಿ ಚಿಕಿತ್ಸೆ ನೀಡುವಂತೆ ಆದೇಶಿಸಲಾಗಿದೆ ಎಂದು ಫ‌ಡ್ನವೀಸ್‌ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Health

ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ
 • ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ
 • ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ’ದ ಸಮಾರೋಪ ಸಮಾರಂಭ
 • ಉದ್ಯಾನ ವನದಲ್ಲಿ ಉದಯರಾಗ
 • ರಾಜ್ಯದಲ್ಲಿ ಆಹಾರ ಆಯೋಗ ರಚನೆ
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited