ವಾಷಿಂಗ್ಟನ್ : ತುಂಬಾ ಕುತೂಹಲ ಕೆರಳಿಸಿದ್ದ ಅಮೆರಿಕದ ಸಾರ್ವತ್ರಿಕ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಜಯಭೇರಿ ಬಾರಿಸಿ ಆಯ್ಕೆಯಾಗಿದ್ದಾರೆ.
ಆಡಳಿತಾರೂಢ ಡೆಮೊಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅವರು ಸೋಲನ್ನನುಭವಿಸಿದ್ದಾರೆ. ವಿಶ್ವದ ಕುತೂಹಲ ಕೆರಳಿಸಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು 289 ಮತ ಗಳಿಸಿ ಜಯಭೇರಿ ಬಾರಿಸುವ ಮೂಲಕ ಶ್ವೇತಭವನ ಪ್ರವೇಶಿಸಿದ್ದಾರೆ. ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ 218 ಮತ ಗಳಿಸಿ ಪರಾಜಯ ಗೊಂಡಿದ್ದಾರೆ.
ಟ್ರಂಪ್ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಮೆರಿಕದ ಜನರಿಗೆ ನಾನು ಎಂದೆಂದಿಗೂ ಆಭಾರಿಯಾಗಿದ್ದೇನೆ ಎಂದು ಗೆಲುವಿನ ನಂತರ ಜನರನ್ನು ಉದ್ದೇಶಿಸಿ ಭಾಷಣ ಮಾಡಿ ಶುಭಾಶಯ ತಿಳಿಸಿದ್ದಾರೆ. ಇದು ನನಗೆ ಸಿಕ್ಕ ಜಯ, ಅಮೆರಿಕವನ್ನು ಪ್ರೀತಿಸುವವರಿಗೆ ದೊರೆತ ಜಯ ಎಂದು ಬಣ್ಣಿಸಿದ್ದಾರೆ.