ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಕೈಗೊಂಡಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭಾರತದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾರತ ಅತ್ಯುತ್ತಮವಾಗಿ ಪ್ರಗತಿ ಸಾಧಿಸುತ್ತಿದೆ, ಆದರೆ ಯಾರೊಬ್ಬರು ಆ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೊಗಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ಇಂಡಿಯಾ ಇಸ್ ಡೂಯಿಂಗ್ ಗ್ರೇಟ್ ಎಂದು ಹೊಗಳುವ ಮೂಲಕ ಮೊದಲ ಬಾರಿಗೆ ಭಾರತದ ಬಗೆಗಿನ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಕಾರ್ಯ ಆರಂಭಿಸಿರುವ ಅವರು ಬಹಿರಂಗವಾಗಿ ಚೀನಾ, ಮೆಕ್ಸಿಕೋ ಮತ್ತು ಜಪಾನ್ ಸೇರಿದಂತೆ ಹಲವು ದೇಶಗಳ ಬಗ್ಗೆ ಕಟುವಾಗಿ ಟೀಕಾಪ್ರಹಾರ ನಡೆಸಿದ್ದರು.
ಚೀನಾದ ಮತ್ತು ಭಾರತದ ಪ್ರಗತಿಯನ್ನು ಹೊಗಳಿದ ಟ್ರಂಪ್, ಭಾರತ ತುಂಬಾ ಉತ್ತಮವಾದುದನ್ನೇ ಸಾಧಿಸಿದೆ. ಆದರೆ ಯಾರೂ ಆ ಬಗ್ಗೆ ಮಾತನಾಡುತ್ತಿಲ್ಲ. ಹಾಗಾಗಿ ನಾನು ಕೂಡಾ ಭಾರತ ಜೊತೆ ಮುಂದೆ ದೊಡ್ಡ ಮಟ್ಟದ ಕೆಲಸ ನಿರ್ವಹಿಸಬೇಕಿದೆ ಎಂದು ತಿಳಿಸಿದ್ದಾರೆ.