Untitled Document
Sign Up | Login    
Dynamic website and Portals
  
February 9, 2015

ಗಂಗಾ ನದಿಯ ಎರಡು ಘಾಟ್ ಗಳಲ್ಲಿ ವೈಫೈ ಸೌಲಭ್ಯ

ಗಂಗಾ ನದಿಯ ಎರಡು ಘಾಟ್ ಗಳಲ್ಲಿ ವೈಫೈ ಸೌಲಭ್ಯ

ವಾರಾಣಸಿ : ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿರುವ ಪವಿತ್ರ ಗಂಗಾ ನದಿಗೆ ಈಗ ಹೈಟೆಕ್ ಸ್ಪರ್ಷ ನೀಡಲಾಗಿದೆ.

ಗಂಗಾ ನದಿಯ ಶೀತಲ್ ಹಾಗೂ ದಶ್ವಾಶ್ ಮೇಘ್ ಎಂಬ ಎರಡು ಘಾಟ್ ಗಳಿಗೆ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಇದೇ ಪ್ರಥಮ ಬಾರಿಗೆ ಗಂಗಾ ನದಿಯ ಘಾಟ್ ಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಈ ಸೌಲಭ್ಯವನ್ನು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಉದ್ಘಾಟಿಸಿದ್ದಾರೆ. ಈ ವ್ಯವಸ್ಥೆಯನ್ನು ಮಾರ್ಚ್ ತಿಂಗಳೊಳಗಾಗಿ ಗಂಗಾ ನದಿಯ ಉಳಿದ ಎಲ್ಲಾ ಘಾಟ್ ಗಳಿಗೂ ವಿಸ್ತರಿಸುವುದಾಗಿ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಗಂಗಾ ನದಿ ಬಳಿ ವೈಫೈ ಉಪಯೋಗಿಸಲು ಪ್ರತಿ ದಿನಕ್ಕೆ 70 ರೂಪಾಯಿ ದರ ವಿಧಿಸಲಾಗಿದೆ. ಎರಡು ಗಂಟೆ ವೈಫೈ ಸೌಲಭ್ಯ ಉಪಯೋಗಿಸಲು 50 ರೂಪಾಯಿ, ಒಂದು ಗಂಟೆಗೆ 30 ರೂಪಾಯಿ, 20ರೂಪಾಯಿ ನೀಡಿದರೆ 30 ನಿಮಿಷ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಬಿ.ಎಸ್.ಎನ್.ಎಲ್ ನಿಂದ ವೈಫೈ ಸೌಲಭ್ಯ ಅಭಿವೃದ್ಧಿ ಪಡಿಸಲಾಗಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಸಕ್ತಿ ವಹಿಸಿ ಈ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಯೋಜನೆಯಡಿ, ಇ-ಹೆಲ್ತ್, ಇ-ಶಿಕ್ಷಣ, ಇ-ಕಾಮರ್ಸ್ ಸೇವೆಗಳನ್ನು ಶೀಘ್ರವೇ ದೇಶದ ಎಲ್ಲಾ ಗ್ರಾಮಗಳಲ್ಲೂ ಜಾರಿಗೆ ತರಲಿದೆ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹಂಪಿಗೂ ಸಹ ಶೀಘ್ರವೇ ವೈಫೈ ಸೌಲಭ್ಯ ಜಾರಿಗೊಳಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited