ನವದೆಹಲಿ : ದೆಹಲಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದ ಮತ್ತು ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಆಕ್ಷೇಪಾರ್ಹವಾಗಿ ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡಿದ್ದ ಇಬ್ಬರು ವಕೀಲರಿಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಶೋಕಾಸ್ ನೊಟೀಸ್ ಜಾರಿ ಮಾಡಿದೆ.
ಬಿಬಿಸಿ ಪ್ರಸಾರಮಾಡಿರುವ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದಲ್ಲಿ ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡಿರುವ ವಕೀಲರಾದ ಎಂ.ಎಲ್.ಶರ್ಮಾ ಮತ್ತು ಎ.ಪಿ.ಸಿಂಗ್ ಅವರಿಗೆ ನಾವು ಶೋಕಾಸ್ ನೊಟೀಸ್ ಜಾರಿ ಮಾಡಿದ್ದೇವೆ ಎಂದು ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಇವರ ಹೇಳಿಕೆಗಳು ವೃತ್ತಿಪರ ನೀತಿ ಸಂಹಿತೆಯ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೇ ಕಂಡು ಬರುವಂತಿದೆ. ಆದುದರಿಂದ ಅವರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಲು ಸಮಿತಿಯು ನಿರ್ಧರಿಸಿ ಅಂತೆಯೇ ವಕೀಲರ ಕಾಯಿದೆಯ ಪ್ರಕಾರ ನೊಟೀಸ್ ಜಾರಿ ಮಾಡಿದೆ ಎಂದು ಮಿಶ್ರಾ ಹೇಳಿ
ಶೋಕಾಸ್ ನೊಟೀಸ್ಗೆ ಈ ವಕೀಲರಿಬ್ಬರ ಉತ್ತರವು ಅಸಮರ್ಪಕವೆಂದು ತೋರಿಬಂದಲ್ಲಿ ಬಾರ್ ಕೌನ್ಸಿಲ್, ಈ ವಕೀಲರಿಬ್ಬರ ವೃತ್ತಿ ನಿರ್ವಹಣೆಯ ಪರವಾನಿಗೆ ರದ್ದುಗೊಳಿಸಬಹುದಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.