Untitled Document
Sign Up | Login    
Dynamic website and Portals
  
November 12, 2014

ಇನ್ಸ್ಟಾಗ್ರಾಮ್ ನಲ್ಲಿ ಶೃಂಗ ಸಭೆ ಫೋಟೊ ಅಪ್ಲೋಡ್ ಮಾಡಿದ ಮೋದಿ

ಮಯನ್ಮಾರ್ : ಏಸಿಯಾನ್-ಇಂಡಿಯಾ ಶೃಂಗ ಸಭೆಯಲ್ಲಿ ಭಾಗವಹಿಸಲು ಮಯನ್ಮಾರ್ ಗೆ ತೆರಳಿರುವ ಪ್ರಧಾನಿ ಮೋದಿ ಅವರು, ಫೋಟೋ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಶೃಂಗ ಸಭೆಯ ಚಿತ್ರವೊಂದನ್ನು ಅಪ್ಲೋಡ್ ಮಾಡಿದ್ದಾರೆ.

ಹತ್ತುದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಮಯನ್ಮಾರ್ ನಲ್ಲಿ ನಡೆಯಲಿರುವ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.ಇನ್ಸ್ಟಾಗ್ರಾಮ್ ಜಾಲತಾಣದಲ್ಲಿ ತಮ್ಮ ಆಗಮನವನ್ನು ಘೋಷಿಸಿರುವ ಪ್ರಧಾನಿ ಮೋದಿ, ಹಲೋ ವರ್ಲ್ಡ್, ಇನ್ಸ್ಟಾಗ್ರಾಮ್ ನಲ್ಲಿರುವುದು ಅದ್ಭುತ. ಇದು ನನ್ನ ಮೊದಲ ಫೋಟೋ. ಏಸಿಯಾನ್ ಸಮಾವೇಶದ್ದು ಎಂದು ಬರೆದಿದ್ದಾರೆ.

ಅಂತರ್ಜಾಲದಲ್ಲಿ ಫೋಟೋ, ವಿಡಿಯೊ ಹಂಚಿಕೊಳ್ಳುವ ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ ಪದಾರ್ಪಣೆ ಮಾಡಿದ 13 ನಿಮಿಷಗಳಲ್ಲಿ ಪ್ರಧಾನಿ ಮೋದಿಯವರಿಗೆ 35 ಸಾವಿರ ಹಿಂಬಾಲಕರು ದೊರೆತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೋದಿಯವರಿಗೆ ಟ್ವಿಟ್ಟರ್ ನಲ್ಲಿ ಈಗಾಗಲೇ 8 ದಶ ಲಕ್ಷ ಫಾಲೋವರ್ಸ್ ಇದ್ದಾರೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಮೋದಿ ಅವರು ಅಂತರ್ಜಾಲದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡದ್ದೂ ಒಂದು ಮಹತ್ವದ ಕಾರಣ ಎನ್ನಲಾಗುತ್ತದೆ.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಟ್ವಿಟ್ಟರ್ ಗಳಲ್ಲಿ ನಿಯಮಿತವಾಗಿ ತಮ್ಮ ವಿದೇಶಿ ಪ್ರವಾಸಗಳ ಫೋಟೋಗಳನ್ನು ಮತ್ತು ಅಪ್ಡೇಟ್ ಗಳನ್ನು ನೀಡುತ್ತಿರುವ ಪ್ರಧಾನಿ ಮೋದಿ ಈಗ ಮೂರನೇ ಪ್ರಮುಖ ವಿದೇಶಿ ಪ್ರವಾಸದಲ್ಲಿದ್ದಾರೆ. ಉಳಿದ ಸಚಿವರಿಗೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಲು ಸಲಹೆ ನೀಡಿದ್ದಾರೆ.

ಮ್ಯಾನ್ಮಾರ್ ನಲ್ಲಿ ನಡೆಯಲಿರುವ 12ನೇ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಪ್ರಧಾನಿ ಮೋದಿ, 10 ಏಷ್ಯನ್ ರಾಷ್ಟ್ರಗಳ ಹೆದ್ದಾರಿ ಯೋಜನೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited