ನಾಯ್ ಪ್ಯಿ ತಾವ್ : 'ಏಸಿಯಾನ್-ಇಂಡಿಯಾ ಶೃಂಗಸಭೆ'ಯಲ್ಲಿ ಭಾಗವಹಿಸಲು ಮಯನ್ಮಾರ್ ಗೆ ತೆರಳಿರುವ ಪ್ರಧಾನಿ ಮೋದಿ ಅವರು, ಮಲೇಷಿಯಾ ಕಂಪನಿಗಳನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ.
ಶೃಂಗ ಸಭೆಯ ಸಂದರ್ಭದಲ್ಲಿ ಮಲೇಷಿಯಾದ ಪ್ರಧಾನಿ ನಜೀಬ್ ರಜಾಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ 'ಮೇಕ್ ಇಂಡಿಯಾ'ದಿಂದ ಮಲೇಷಿಯಾ ಉದ್ದಿಮೆದಾರರಿಗೆ ಅಗಾಧವಾದ ಅವಕಾಶಗಳು ದೊರೆಯಲಿವೆ ಎಂದು ಮೋದಿ ಹೇಳಿದ್ದಾರೆ.
ಮೇಕ್ ಇನ್ ಇಂಡಿಯಾ ಯೋಜನೆಗೆ ತಾವು ಅತಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು, ಮಲೇಷಿಯಾ ಕಂಪನಿಗಳು ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಬಂಡವಾಳ ಹೂಡಬೇಕೆಂದು ಮೋದಿ ಟ್ವಿಟರ್ ನಲ್ಲಿ ಹೇಳಿದ್ದಾರೆ.
ಕೈಗೆಟುಕುವ ವಸತಿ ಯೋಜನೆಯಲ್ಲಿ ಮಲೇಷಿಯಾ ಪ್ರಸಿದ್ಧವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, 2022ರ ವೇಳೆಗೆ ಎಲ್ಲಾ ಭಾರತೀಯರೂ ಮನೆ ಹೊಂದುವಂತೆ ಮಾಡುವ ಬಿಜೆಪಿ ಸರ್ಕಾರದ ಯೋಜನೆ ಮಲೇಷಿಯಾದ ಕಂಪನಿಗಳ ನೆರವು ಕೋರಿದ್ದಾರೆ.
ಇದೇ ವೇಳೆ ಉಭಯ ನಾಯಕರೂ ತಮ್ಮ ದೇಶಗಳಿಗೆ ಭೇಟಿ ನೀಡುವಂತೆ ಪರಸ್ಪರ ಆಮಂತ್ರಣ ನೀಡಿದ್ದಾರೆ.