ಮಯನ್ಮಾರ್ : ಭಯೋತ್ಪಾದನೆ ವಿರುದ್ಧ ಎಲ್ಲಾ ರಾಷ್ಟ್ರಗಳು ಒಂದಾಗಿ ಹೋರಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಮಯನ್ಮಾರ್ ನಲ್ಲಿ ನಡೆಯುತಿರುವ ಪೂರ್ವ ಏಷ್ಯಾ ರಾಷ್ಟ್ರಗಳ ಶೃಂಗ ಸಭೆಯಲ್ಲಿ ಮಾತನಾಡಿದ ಮೋದಿ,ಎಲ್ಲ ರೀತಿಯ ಉಗ್ರ ಚಟುವಟಿಕೆಗಳನ್ನು ತಡೆಯಲು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಗಳು ಒಂದಾಗಬೇಕು ಎಂದರು.
ಧರ್ಮ, ಉಗ್ರವಾದದ ಕೊಂಡಿಗಳನ್ನು ಕಿತ್ತುಹಾಕಬೇಕು ಎಂದಿರುವ ಅವರು,ಜಾಗತಿಕ ಆಚರಣೆಗಳನ್ನು ಪಾಲಿಸುವುದು ನಮ್ಮ ಕರ್ತವ್ಯ. ಐಎಸ್ ಐಎಸ್ ಉಗ್ರರ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದರು.
ಸೈಬರ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ದೇಶಗಳ ನಡುವಿನ ಸಂಬಂಧಗಳಿಗೆ ಮತ್ತು ಬೆಳವಣಿಗೆಗೆ ದಾರಿಯಾಗಬೇಕೆ ಹೊರತು ಭಿನಾಭಿಪ್ರಾಯಗಳಿಗಲ್ಲ ಎಂದು ತಿಳಿಸಿದರು.
ಭಯೋತ್ಪಾದನೆ ಮತ್ತು ತೀವ್ರಗಾಮಿತನದ ಸವಾಲುಗಳು ಹೆಚ್ಚಿವೆ. ಇದಕ್ಕೂ ಮತ್ತು ಡ್ರಗ್ ಸಾಗಾಣೆ, ಶಸ್ತ್ರಾಸ್ತ್ರ ಕಳ್ಳಸಾಗಾಣೆ, ಮತ್ತು ಅಕ್ರಮ ಹಣ ಚಲಾವಣೆಗೂ ಸಂಬಂಧವಿದೆ ಎಂದು ಮೋದಿ ಹೇಳಿದ್ದಾರೆ.