ಪಣಜಿ : ಬಟ್ಟೆ ಶೋ ರೂಂ ನ ಟ್ರಯಲ್ ರೂಂ ನಲ್ಲಿ ಹಿಡನ್ ಕ್ಯಾಮರಾ ಇರುವುದನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಪತ್ತೆ ಹಚ್ಚಿದ್ದಾರೆ.
ಗೋವಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಬಟ್ಟೆ ಖರೀದಿಸಲು ಫ್ಯಾಬ್ ಇಂಡಿಯಾ ಶೋ ರೂಂಗೆ ತೆರಳಿದ್ದ ಸ್ಮೃತಿ ಇರಾನಿ, ಟ್ರಯಲ್ ರೂಂನಲ್ಲಿ ಹಿಡನ್ ಕ್ಯಾಮರಾ ಇಟ್ಟಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಪತಿಗೆ ವಿಷಯ ತಿಳಿಸಿದ್ದಾರೆ. ಕೂಡಲೆ ಸ್ಥಳೀಯ ಬಿಜೆಪಿ ಶಾಸಕ ಮೈಕಲ್ ಲೋಬೊರನ್ನು ಸ್ಥಳಕ್ಕೆ ಕರೆಸಿಕೊಂಡು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಲೋಬೊ ಸ್ಥಳೀಯ ಪೊಲೀಸರನ್ನು ಕರೆಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಟ್ರಯಲ್ ರೂಂನಲ್ಲಿದ್ದ ಹಿಡನ್ ಕ್ಯಾಮರಾ ಮತ್ತು ಹಾರ್ಡ್ ಡಿಸ್ಕನ್ನು ವಶಪಡಸಿಕೊಂಡಿದ್ದು, ಎಫ್.ಐ.ಆರ್ ದಾಖಲಿಸಿಕೊಂಡಿರುವ ಪೊಲೀಸರು ಮಳಿಗೆಯ ಮಾಲಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.