Untitled Document
Sign Up | Login    
Dynamic website and Portals
  
March 7, 2015

ಅಪರಾಧಿಯನ್ನು ಸೃಷ್ಟಿಸಿದ್ದೇ ಸಮಾಜ: ಲೆಸ್ಲಿ ಉಡ್ವಿನ್

ಲೆಸ್ಲಿ ಉಡ್ವಿನ್ ಲೆಸ್ಲಿ ಉಡ್ವಿನ್

ನವದೆಹಲಿ : ದೆಹಲಿ ಗ್ಯಾಂಗ್ ರೇಪ್ ಅಪರಾಧಿಯನ್ನು ಹುಟ್ಟಿಸಿದ್ದೇ ನಮ್ಮ ಸಮಾಜ. ಇಲ್ಲಿ ಅಪರಾಧಿಯಾಗಿದ್ದು ಕೇವಲ ಅತ್ಯಾಚಾರಿಗಳಲ್ಲ, ಇಡೀ ಸಮಾಜ. ಅತ್ಯಾಚಾರಿಗಳು ಏನನ್ನು ಯೋಚಿಸಬೇಕು ಎನ್ನುವುದನ್ನು ಕಲಿಸಿಕೊಟ್ಟಿದ್ದು, ಅವರಿಗೆ ಉತ್ತೇಜನ ನೀಡಿದ್ದೂ ಸಮಾಜವೇ ಎಂದು ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ತಿಳಿಸಿದ್ದಾರೆ.

ಇಂಡಿಯಾ ಇನ್ ಸೈಟ್‍ಗೆ ನೀಡಿದ ಸಂದರ್ಶನದಲ್ಲಿ ಉಡ್ವಿನ್ , ಈ ಸಾಕ್ಷ್ಯಚಿತ್ರವು ನನ್ನ ವೃತ್ತಿಜೀವನದಲ್ಲಿ ನಾನು ಎದುರಿಸಿದ ಅತಿದೊಡ್ಡ ಸವಾಲು. ನನ್ನ ಈ ಚಿತ್ರಕ್ಕೆ ಪ್ರೇರಣೆ ದೆಹಲಿಯಲ್ಲಾದ ಅತ್ಯಾಚಾರ ಪ್ರಕರಣವಲ್ಲ, ಬದಲಿಗೆ ಅದರ ನಂತರ ನಡೆದ ಸರಣಿ ಪ್ರತಿಭಟನೆಗಳು, ಯುವಜನರ ಕ್ರಾಂತಿ ಎಂದು ಹೇಳಿದ್ದಾರೆ.

ಅಪರಾಧಿಅಭಿಪ್ರಾಯ ಪ್ರಸಾರ ಮಾಡುವ ಮೂಲಕ ಆತನನ್ನು ವೈಭವೀಕರಿಸಲಾಗಿದೆ ಎಂಬ ವಾದವನ್ನು ಒಪ್ಪದ ಉಡ್ವಿನ್, ಇದೊಂದು ಮೂರ್ಖತನದ, ತರ್ಕಹೀನ ಅಭಿಪ್ರಾಯ ಎಂದಿದ್ದಾರೆ. ಯಾವುದೇ ವಿಚಾರದಲ್ಲಿ ಪ್ರಗತಿ ಸಾಧಿಸಬೇಕೆಂದರೆ ಮೊದಲು ಅದನ್ನು ಅರ್ಥಮಾಡಿಕೊಳ್ಳಬೇಕು. ಆ ಪ್ರಯತ್ನವನ್ನು ನಾನು ಮಾಡಿದ್ದೇನೆ ಎಂದಿದ್ದಾರೆ.

ಅಪರಾಧಿಗಳು ಮಹಿಳೆಯರ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿದ್ದಾರೆ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಅಂತಹ ಅಭಿಪ್ರಾಯ ಬಂದಿದ್ದಾದರೂ ಎಲ್ಲಿಂದ? ಶೇ.20ರಷ್ಟು ಮಹಿಳೆಯರು ಮಾತ್ರವೇ ಸಭ್ಯರು ಎಂಬುದನ್ನು ಅವರಿಗೆ ಕಲಿಸಿಕೊಟ್ಟವರು ಯಾರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅದನ್ನೇ ನಾನು ಸಮಾಜ ಎಂದಿದ್ದು' ಎಂದು ಹೇಳಿದ್ದಾರೆ.

ಇದೇ ವೇಳೆ, ಬಾಲಿವುಡ್ ಸಿನಿಮಾಗಳು ನೀಲಿಚಿತ್ರಗಳಾಗಿ ಬದಲಾಗುತ್ತಿವೆ. ಇಲ್ಲಿ ಮಹಿಳೆಯರನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗುತ್ತಿದೆ. ಇವೆಲ್ಲವೂ ಈ ಸಂಸ್ಕೃತಿಯ, ಕೆಟ್ಟ ರೋಗದ ಭಾಗ ಎಂದೂ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited