Untitled Document
Sign Up | Login    
Dynamic website and Portals
  
January 8, 2016

ಧೋನಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

ಧೋನಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

ನವದೆಹಲಿ : ಪತ್ರಿಕೆಯ ಮುಖಪುಟದಲ್ಲಿ ವಿಷ್ಣುವಿನ ಹಾಗೆ ಕಾಣಿಸಿಕೊಂಡ ಕುರಿತು ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಆಂಧ್ರಪ್ರದೇಶದ ಅನಂತಪುರಂ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಫೆಬ್ರುವರಿ 25ರಂದು ಖುದ್ದು ಕೋರ್ಟ್ ಗೆ ಹಾಜರಾಗುವಂತೆ ಸೂಚನೆ ನೀಡಿದೆ

2013ರ ಏಪ್ರಿಲ್ 24ರಂದು ಬ್ಯುಸಿನೆಸ್ ಟುಡೇ ಪತ್ರಿಕೆಯ ಮುಖಪುಟದಲ್ಲಿ ಮಹೇಂದ್ರ ಸಿಂಗ್ ಧೋನಿ ವಿಷ್ಣುವಿನ ಅವತಾರದಲ್ಲಿ ಶೂಗಳನ್ನು ಹಿಡಿದ ಚಿತ್ರವನ್ನು ಪ್ರಕಟಿಸಿತ್ತು. ಈ ಬಗ್ಗೆ ವಿಶ್ವ ಹಿಂದೂಪರಿಷತ್ ನ ಶ್ಯಾಮ್ ಸುಂದರ್ ಎಂಬವರು ಧೋನಿ ವಿರುದ್ಧ ದೂರು ದಾಖಲಿಸಿದ್ದರು.

ವರದಿಯ ಪ್ರಕಾರ ಪ್ರಕರಣದ ವಿಚಾರಣೆ ನಡೆಸಿದ ಅನಂತಪುರಂ ಕೋರ್ಟ್, ಮಹೇಂದ್ರ ಸಿಂಗ್ ಧೋನಿ ಫೆಬ್ರುವರಿ 25ರಂದು ಖುದ್ದು ಕೋರ್ಟ್ ಗೆ ಹಾಜರಾಗುವಂತೆ ಸೂಚನೆ ನೀಡಿದೆ.

 

 

Share this page : 
 

Table 'bangalorewaves.bv_news_comments' doesn't exist