ನವದೆಹಲಿ : ಅಮೇರಿಕಾದ ನೆವಾರ್ಕ್ ನಿಂದ 250 ಪ್ರಯಾಣಿಕರನ್ನು ಹೊತ್ತು ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ವಿಮಾನ ಹಾರಾಟ ಆರಂಭಿಸಿ 29.000 ಫೀಟ್ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಇಂಜಿನ್ ನಲ್ಲಿ ದೋಷ ಕಂಡು ಬಂದಿದೆ. ಇದನ್ನರಿತ ಪೈಲಟ್ ಕೂಡಲೇ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ಪೈಲಟ್ ನ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.
ಏರ್ ಇಂಡಿಯಾ ವಕ್ತಾರರು ಘಟನೆ ನಡೆದುದನ್ನು ಖಚಿತ ಪಡಿಸಿದ್ದಾರೆ.