ಜರ್ಮನಿ : ಕಾರು ಉತ್ಪಾದನಾ ಘಟಕದಲ್ಲಿ ರೋಬೋಟ್ ಒಂದು ತನ್ನ ಲೋಹದ ಕೈಗಳಿಂದ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕನನ್ನು ನಜ್ಜುಗುಜ್ಜು ಮಾಡಿ ಪ್ರಾಣವನ್ನೇ ತೆಗೆದುಕೊಂಡ ಆಘಾತಕಾರಿ ಘಟನೆ ಜರ್ಮನಿಯಲ್ಲಿ ನಡೆದಿದೆ.
ಜರ್ಮನಿಯ ಫ್ರಾಂಕ್ ಫರ್ಟ್ ನಿಂದ ಸುಮಾರು 100 ಕಿ.ಮೀ ಉತ್ತರದಲ್ಲಿರುವ ಬೌನತಲ್ ಎಂಬಲ್ಲಿ ಜರ್ಮನಿಯ ಕಾರು ತಯಾರಿಕಾ ಸಂಸ್ಧೆ ವೋಕ್ಸ್ ವ್ಯಾಗನ್ ಉತ್ಪಾದನಾ ಘಟಕದಲ್ಲಿ ಈ ಅವಘಢ ಸಂಭವಿಸಿದೆ. ತಪ್ಪು ಪ್ರೋಗ್ರಾಮಿಂಗ್ ನಿಂದ ಸ್ಟೇಷನರಿ ರೋಬೋ (ಯಂತ್ರ ಮಾನವ) ತನ್ನ ಲೋಹದ ಕೈಗಳಿಂದ ಲೋಹದ ಹಾಳೆಗಳನ್ನು ತನ್ನತ್ತ ಸೆಳೆದುಕೊಳ್ಳುವ ಸಂದರ್ಭದಲ್ಲಿ ತನ್ನನ್ನು ನಿರ್ವಹಿಸುತ್ತಿದ್ದ ಆಪರೇಟರ್ ನ ಜೀವವನ್ನೇ ಬಲಿ ತೆಗೆದುಕೊಂಡು ಬಿಟ್ಟಿದೆ.
ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ ಇನ್ನೊಬ್ಬ ಸಹೋದ್ಯೋಗಿಗೆ ಯಾವುದೇ ರೀತಿಯ ಪ್ರಾಣಪಾಯವಾಗಿಲ್ಲ.