Untitled Document
Sign Up | Login    
Dynamic website and Portals
  
May 14, 2015

ಇಂದಿನಿಂದ ಪ್ರಧಾನಿ ಮೋದಿ ಚೀನಾ ಪ್ರವಾಸ :ಹೆಚ್ಚಿದ ನಿರೀಕ್ಷೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ/ಬೀಜಿಂಗ್ : ಪ್ರಧಾನಿ ನರೇಂದ್ರ ಮೋದಿ ಅವರ ಆರು ದಿನಗಳ ಮೂರು ರಾಷ್ಟ್ರಗಳ ಪ್ರವಾಸ ಗುರುವಾರ ಚೀನಾ ಭೇಟಿಯೊಂದಿಗೆ ಆರಂಭವಾಗಲಿದೆ.

ಮೋದಲಿಗೆ ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರ ತವರೂರಾಗಿರುವ ಐತಿಹಾಸಿಕ ನಗರಿ ಕ್ಸಿಯಾನ್‌ ಗೆ ನೇರವಾಗಿ ತೆರಳಿ, ಅಲ್ಲಿ ಜಿನ್‌ ಪಿಂಗ್‌ ಅವರ ಜತೆ ಅನೌಪಚಾರಿಕ ಸಭೆ ನಡೆಸಲಿದ್ದಾರೆ. ಅಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಸಂಜೆ ಬೀಜಿಂಗ್‌ ತೆರಳಲಿದ್ದಾರೆ.

ಶುಕ್ರವಾರ ಮೋದಿ ಅವರನ್ನು ಚೀನಾ ಪ್ರಧಾನಿ ಲೆ ಕೆಖೀಯಾಂಗ್‌ ಅವರು ಔಪಚಾರಿಕವಾಗಿ ಸ್ವಾಗತಿಸಲಿದ್ದಾರೆ. ಬಳಿಕ ಉಭಯ ನಾಯಕರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.

ಗಡಿ ಭಧ್ರತೆ ವಿಚಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾ ಕುರಿತಂತೆ ಹಲವು ಪ್ರಮುಖ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕುವ ನಿರೀಕ್ಷೆಗಳಿವೆ.

ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿರುವ ಚೀನಾ ತನ್ನ ಹೈ-ಟೆಕ್ ಸಾಮಗ್ರಿಗಳನ್ನು ಪ್ರಚಾರ ಮಾಡುವ ಉದ್ದೇಶಹೊಂದಿದೆ. ಅಲ್ಲದೆ ಹೈ ಸ್ಪೀಡ್ ರೈಲಿನಿಂದ ಹಿಡಿದು ಪರಮಾಣು ಸ್ಥಾವರ ನಿರ್ಮಾಣದವರೆಗೂ ತನ್ನ ಕಣ್ಣು ನೆಟ್ಟಿದೆ. ಇನ್ನು ಚೀನಾದಲ್ಲಿರುವ ಆರ್ಥಿಕ ಬಲವನ್ನು ಬಳಸಿಕೊಳ್ಳುವ ಮೂಲಕ ಭಾರತ ತನ್ನ ಉತ್ಪಾದನಾ ಮತ್ತು ಮೂಲಸೌಕರ್ಯ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವ ನೀಡಿದೆ.

ಶನಿವಾರ ಶಾಂಘೈಗೆ ತೆರಳಲಿರುವ ಪ್ರಧಾನಿ ಮೋದಿ, ಅಲ್ಲಿ ಚೀನಾದ ಸಿಇಒಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಮೇ 17ರಂದು ಮಂಗೋಲಿಯಾಕ್ಕೆ ತೆರಳಲಿದ್ದಾರೆ. ಈ ಮೂಲಕ ಮಘೋಲಿಯಾಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ಈ ವೇಳೆ ಹಲವಾರು ಒಪ್ಪಂದಗಳನ್ನು ಮಾಡಿಕೊಳ್ಳಲಿದ್ದಾರೆ. ಮೇ 18 ಹಾಗೂ 19ರಂದು ದಕ್ಷಿಣ ಕೊರಿಯಾ ಪ್ರವಾಸ ಮುಗಿಸಿ ಭಾರತಕ್ಕೆ ಮರಳಲಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited