Untitled Document
Sign Up | Login    
Dynamic website and Portals
  
August 21, 2014

ಸಮೀಕ್ಷೆ: ನರೇಂದ್ರ ಮೋದಿ ಸರ್ಕಾರದ ಬಗ್ಗೆ ದೇಶಾದ್ಯಂತ ಮೆಚ್ಚುಗೆಯ ಮಹಾಪೂರ

ಚಿತ್ರ ಕೃಪೆ:http://indiatoday.intoday.in ಚಿತ್ರ ಕೃಪೆ:http://indiatoday.intoday.in

ನವದೆಹಲಿ : 'ನರೇಂದ್ರ ಮೋದಿ' ನೇತೃತ್ವದ ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದು ಮೂರು ತಿಂಗಳು ಕಳೆದಿದ್ದು ಇಂಡಿಯಾ ಟುಡೆ ಮಾಧ್ಯಮ ಹಾಗೂ ಹನ್ಸಾ ರಿಸರ್ಚ್ ಸಂಸ್ಥೆ ಸರ್ಕಾರದ ಜನಪ್ರಿಯತೆ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಸರಕಾರದ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದಿದೆ.

ದೇಶಾದ್ಯಂತ ನಡೆಸಲಾಗಿರುವ ಸಮೀಕ್ಷೆಯಲ್ಲಿ ಶೇ.61ರಷ್ಟು ಜನ ನರೇಂದ್ರ ಮೋದಿ ಅವರನ್ನು ದೇಶ ಕಂಡ ಅತ್ಯುತ್ತಮ ಪ್ರಧಾನಿ ಎಂದು ಸಂಸತ ವ್ಯಕ್ತಪಡಿಸಿದ್ದಾರೆ. ಶೇ.71ರಷ್ಟು ಜನರು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಕಾರ್ಯವೈಖರಿಗೆ ತೃಪ್ತಿಪಟ್ಟಿದ್ದಾರೆ. ಈ ಸಮೀಕ್ಷೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಮತ್ತೊಮ್ಮೆ ಸಾಬೀತಾಗಿದೆ.

ಕಾಂಗ್ರೆಸ್ ಪಕ್ಷದವರ ಆರೋಪದಂತೆ ಮೋದಿ ಸರ್ಕಾರವನ್ನು ಆರ್.ಎಸ್.ಎಸ್ ನಿಯಂತ್ರಿಸುತ್ತಿದೆಯೇ ಎಂಬ ಸಮೀಕ್ಷೆ ಪ್ರಶ್ನೆಗೂ ಜನತೆ ಉತ್ತರಿಸಿದ್ದು ಶೇ.47ರಷ್ಟು ಜನ ಇಲ್ಲವೆಂದೂ, ಶೇ.12ರಷ್ಟು ಜನ ಮೋದಿ ಸರ್ಕಾರ ಆರ್.ಎಸ್.ಎಸ್ ನಿಂದ ನಿಯಂತ್ರಿಸಲ್ಪಡುತ್ತಿದೆ ಎಂದಿದ್ದಾರೆ. ಶೇ.31ರಷ್ಟು ಜನರು ಮೋದಿ ಸರ್ಕಾರ, ಆರ್.ಎಸ್.ಎಸ್ ಹಾಗೂ ಆಡಳಿತವನ್ನು ಸಮತೂಗಿಸಿಕೊಂಡು ಮುನ್ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ಅಭೂತಪೂರ್ವ ಗೆಲುವಿಗೆ ಮೋದಿ ಒಬ್ಬರೇ ಕಾರಣ ಅಲ್ಲ ಎಂದು ಇತ್ತೀಚೆಗಷ್ಟೇ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದರು. ಆದರೆ ಭಾಗವತ್ ಅವರ ಈ ಹೇಳಿಕೆಯನ್ನು ಅಲ್ಲಗಳೆದಿರುವ ಶೇ.64ರಷ್ಟು ಮತದಾರರು ಬಿಜೆಪಿ ಗೆಲುವಿಗೆ ಮೋದಿ ಅವರೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮೂರನೇ ಒಂದು ಭಾಗದಷ್ಟು ಜನತೆ ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಅಮಿತ್ ಶಾ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದು ಪಕ್ಷವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂಡಿಯಾ ಟುಡೆ ನಡೆಸಿರುವ ಈ ಸಮೀಕ್ಷೆಯಲ್ಲಿ ಶೇ.61ರಷ್ಟು ಜನ ಮೋದಿ ಸರ್ಕಾರ ಹಿಂದೂ ಮೂಲಭೂತವಾದಿಗಳಿಗೆ ಉತ್ತೇಜನ ನೀಡಿಲ್ಲ ಎಂದು ಹೇಳಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಕೋಮುಗಲಭೆಗಳಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಕಾರಣ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್ ಗೆ ಈ ಅಭಿಪ್ರಾಯದಿಂದ ತೀವ್ರ ಮುಖಭಂಗವಾಗಿದೆ.

ಗಾಂಧಿ ಕುಟುಂಬವೇ ಕಾಂಗ್ರೆಸ್ ಗೆ ಬಂಡವಾಳ:

ಇದೇ ಸಮೀಕ್ಷೆಯಲ್ಲಿ ಕಾಂಗ್ರೆಸ್ ಬಗ್ಗೆಯೂ ಅಭಿಪ್ರಾಯ ಸಂಗ್ರಹಣೆ ಮಾಡಲಾಗಿದೆ. ಗಾಂಧಿ ಕುಟುಂಬವೇ ಕಾಂಗ್ರೆಸ್ ಗೆ ಬಂಡವಾಳ. ಗಾಂಧಿ ಕುಟುಂಬ ಇಲ್ಲದ ಕಾಂಗ್ರೆಸ್ ಉಳಿಯಲು ಸಾಧ್ಯವಿಲ್ಲ ಎಂದು ಜನತೆ ತಿಳಿಸಿದ್ದಾರೆ. ರಾಹುಲ್ ಗಾಂಧಿ ಬದಲು ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ನೀಡಲು ಪ್ರಿಯಾಂಕ ಗಾಂಧಿಯೇ ಸರಿಯಾದ ವ್ಯಕ್ತಿ ಎಂದು ಶೇ.60ರಷ್ಟು ಜನ ಹೇಳಿದ್ದಾರೆ.

ಒಟ್ಟಾರೆ ಅಧಿಕಾರ ಚುಕ್ಕಾಣಿ ಹಿಡಿದ 3 ತಿಂಗಳಲ್ಲೇ ಮೋದಿ ನೇತೃತ್ವದ ಸರ್ಕಾರ, ದೇಶದ ಜನತೆಯಿಂದ ಗಳಿಸಿದ್ದ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬುದು ಇಂಡಿಯಾ ಟುಡೆ ನಡೆಸಿರುವ ಸಮೀಕ್ಷೆಯಿಂದ ತಿಳಿಯುತ್ತದೆ. ದೇಶದಲ್ಲಿ ಶೇ.70ರಷ್ಟು ಮತದಾರರು ಮೋದಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited