Untitled Document
Sign Up | Login    
Dynamic website and Portals
  
April 12, 2015

ಮೇಕ್‌ ಇನ್‌ ಇಂಡಿಯಾಗೆ ಸಹಕಾರ ನೀಡಲು ಫ್ರಾನ್ಸ್‌ ನಿರ್ಧಾರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಪ್ಯಾರಿಸ್ : ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಫ್ರಾನ್ಸ್‌ ಪ್ರವಾಸವು ಫ‌ಲಪ್ರದವಾಗಿದ್ದು, ಫ್ರಾನ್ಸ್‌ ಸರ್ಕಾರ ಮತ್ತು ಅಲ್ಲಿನ ಕಂಪನಿಗಳು ಮೋದಿ ಅವರ ’ಮೇಕ್‌ ಇನ್‌ ಇಂಡಿಯಾ' ಯೋಜನೆಗೆ ಸಹಕಾರ ನೀಡಲು ಭರವಸೆ ವ್ಯಕ್ತಪಡಿಸಿವೆ.

'ಮೇಕ್‌ ಇಂಡಿಯಾ'ಗೆ ಬೆಂಬಲ ಘೋಷಿಸಿರುವ ಪ್ರಸಿದ್ಧ ವಿಮಾನ ಉತ್ಪಾದನಾ ಕಂಪನಿ ಏರ್‌ ಬಸ್‌, ಭಾರತದಲ್ಲಿ ತನ್ನ ಉತ್ಪಾದನಾ ಘಟಕ ತೆರೆಯಲು ಮತ್ತು 12 ಸಾವಿರ ಕೋಟಿ ರೂ. ಹೊರಗುತ್ತಿಗೆ ನೀಡುವ ನಿರ್ಧಾರ ಪ್ರಕಟಿಸಿದೆ.

ಇನ್ನೊಂದೆಡೆ, ಮೋದಿ ಅವರ ಇತರ ಮಹತ್ವಾಕಾಂಕ್ಷಿ ಯೋಜನೆಗಳಾದ ಹೈಸ್ಪೀಡ್‌ ರೈಲು ಮಾರ್ಗ ನಿರ್ಮಾಣ ಮತ್ತು ಸ್ಮಾರ್ಟ್‌ ಸಿಟಿ ಯೋಜನೆಗೆ ಕೈಜೋಡಿಸಲು ಚೀನಾ, ಜಪಾನ್‌ ಬಳಿಕ ಇದೀಗ ಫ್ರಾನ್ಸ್‌ ಕೂಡ ಮುಂದೆ ಬಂದಿದೆ.

ಮೋದಿ ಅವರು ಶನಿವಾರ ಏರ್‌ ಬಸ್‌ ಕಂಪನಿಗೆ ತೆರಳಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು. ಮೋದಿ ಅವರನ್ನು ಕಂಪನಿಯ ಸಿಇಒ ಟಾಮ್‌ ಎಂಡರ್ ಅವರು ಬರಮಾಡಿಕೊಂಡರು. ಈ ವೇಳೆ ಮೇಕ್‌ ಇನ್‌ ಇಂಡಿಯಾಕ್ಕೆ ಎಂಡರ್ ಬೆಂಬಲ ಘೋಷಿಸಿದರು.ಈ ಬಗ್ಗೆ ವಿವರಣೆ ನೀಡಿರುವ ವಿದೇಶಾಂಗ ವಕ್ತಾರ ಸಯ್ಯದ್‌ ಅಕ್ಬರುದ್ದೀನ್‌, ಏರ್‌ಬಸ್‌ 5 ವರ್ಷದಲ್ಲಿ ಶೇ.500ರಷ್ಟು ಹೂಡಿಕೆ ಹೆಚ್ಚಿಸಿದೆ. 2500 ಕೋಟಿ ರೂ.ನಿಂದ 12 ಸಾವಿರ ಕೋಟಿಗೆ ಹೊರಗುತ್ತಿಗೆ ಹೆಚ್ಚುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ದೆಹಲಿ-ಚಂಡೀಗಢ ನಡುವಣ ರೈಲು ಮಾರ್ಗವನ್ನು ಗಂಟೆಗೆ 200 ಕಿ.ಮೀ. ವೇಗದಲ್ಲಿ ಸಂಚರಿಸಬಹುದಾದ ಹೈಸ್ಪೀಡ್‌ ಮಾರ್ಗವನ್ನಾಗಿ ಪರಿವರ್ತಿಸುವ ಕುರಿತು ಅಧ್ಯಯನ ನಡೆಸಲು ಹಾಗೂ ಹರ್ಯಾಣದ ಅಂಬಾಲಾ ಮತ್ತು ಪಂಜಾಬ್‌ನ ಲುಧಿಯಾನದ ರೈಲು ನಿಲ್ದಾಣಗಳ ಮರು ಅಭಿವೃದಿಟಛಿಯಲ್ಲಿ ಭಾರತಕ್ಕೆ ನೆರವಾಗಲು ಫ್ರಾನ್ಸ್‌ ತನ್ನ ಒಪ್ಪಿಗೆ ಸೂಚಿಸಿದೆ.

ಭಾರತ ಸರ್ಕಾರ ಗುರುತಿಸುವ ಸ್ಮಾರ್ಟ್‌ ಸಿಟಿಗಳ ಅಭಿವೃದಿಟಛಿಯಲ್ಲೂ ಸಹಾಯ ಮಾಡುವುದಾಗಿ ಘೋಷಿಸಿದೆ.ಪ್ರಧಾನಿ ಮೋದಿ ಹಾಗೂ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲ್ಯಾಂಡ್‌ ನಡುವೆ ಮಾತುಕತೆಯ ವೇಳೆ ಈ ಕುರಿತು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಉಭಯ ನಾಯಕರ ಮಾತುಕತೆ ವೇಳೆ, ಹೈಸ್ಪೀಡ್‌ ರೈಲು ಮಾರ್ಗ ನಿರ್ಮಾಣ ಹಾಗೂ ಎರಡು ನಿಲ್ದಾಣಗಳ ಮರು ಅಭಿವೃದಿಟಛಿ ಸಂಬಂಧ ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಚಂಡೀಗಢ ಹಾಗೂ ದೆಹಲಿ ನಡುವೆ ಸದ್ಯ ಅತಿ ಹೆಚ್ಚು ವೇಗದಲ್ಲಿ ಓಡುವ ರೈಲೆಂದರೆ ಶತಾಬ್ದಿ ಎಕ್ಸ್‌ಪ್ರೆಸ್‌. ಅದು ಗಂಟೆಗೆ 79.80 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ. ಇದೇ ವೇಳೆ, ಉಪಗ್ರಹ ಸೂಕ್ಷ್ಮ ಸಂವೇದನೆ, ಉಪಗ್ರಹ ಸಂಪರ್ಕ, ಬಾಹ್ಯಾಕಾಶ ವಿಜ್ಞಾನ ಸೇರಿದಂತೆ ಹಲವು ವಿಚಾರಗಳ ಕುರಿತು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಹಾಗೂ ಫ್ರೆಂಚ್‌ ನ್ಯಾಷನಲ್‌ ಸೆಂಟರ್‌ ಫಾರ್‌ ಸ್ಪೇಸ್‌ ಸ್ಟಡೀಸ್‌ ನಡುವೆ ಕೂಡ ಒಪ್ಪಂದವೇರ್ಪಟ್ಟಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited