Untitled Document
Sign Up | Login    
Dynamic website and Portals
  
September 27, 2015

ಫೇಸ್ ಬುಕ್, ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂ ನಮ್ಮ ಹೊಸ ನೆರೆಹೊರೆಯವರುಃ ಪ್ರಧಾನಿ ನರೇಂದ್ರ ಮೋದಿ

ಉದ್ಯಮ ದಿಗ್ಗಜರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಉದ್ಯಮ ದಿಗ್ಗಜರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಕ್ಯಾಲಿಫೋರ್ನಿಯಾ : ಯುಎಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಯೋಜನೆಯ ಅಂಗವಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಜಗದ್ವಿಖ್ಯಾತಿ ಗಳಿಸಿರುವ ಸಿಲಿಕಾನ್‌ ವ್ಯಾಲಿಯಲ್ಲಿ ಐಟಿ ದಿಗ್ಗಜ ಕಂಪೆನಿಗಳ ಸಿಇಓಗಳನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಉದ್ಯಮ ದಿಗ್ಗಜರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಪ್ರಮುಖಾಂಶಗಳುಃ

* ಕ್ಯಾಲಿಫೋರ್ನಿಯಾದಲ್ಲಿರುವುದು ಅತ್ಯಂತ ಆನಂದವಾಗಿದೆ. ಇದು ಪ್ರಪಂಚದಲ್ಲಿ ಸೂರ್ಯಾಸ್ತ ಕೊನೆಯಲ್ಲಿ ನೋಡುವ ಸ್ಥಳಗಳಲ್ಲಿ ಒಂದು. ಆದರೆ ಹೊಸ ಕಲ್ಪನೆಗಳು ಇಲ್ಲಿ ದಿನದ ಮೊದಲ ಕಿರಣಗಳನ್ನು ನೋಡುತ್ತವೆ.

* ನಾನು ನಿಮ್ಮಲ್ಲಿ ಬಹಳಷ್ಟು ಜನರನ್ನು ದೆಹಲಿ, ನ್ಯೂಯಾರ್ಕ್, ಫೇಸ್ ಬುಕ್, ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂ ಗಳಲ್ಲಿ ಭೇಟಿ ಮಾಡಿದ್ದೇನೆ. ಇವು ಹೊಸ ಜಗತ್ತಿನ ಹೊಸ ನೆರೆಹೊರೆಯವರು.

* ಫೇಸ್ ಬುಕ್ ಒಂದು ದೇಶವಾಗಿದ್ದರೆ, ಇದು ಮೂರನೇ ಅತಿ ಹೆಚ್ಚು ಜನಸಂಖ್ಯೆಯ ಮತ್ತು ಅತ್ಯಂತ ಸಂಪರ್ಕ ಹೊಂದಿದ ದೇಶವಾಗಿರುತ್ತಿತ್ತು.

* ಗೂಗಲ್ ಇಂದು ಶಿಕ್ಷಕರ ಆವಿಷ್ಕಾರದ ಸ್ಪೂರ್ತಿಯನ್ನು ಕಡಿಮೆ ಮಾಡಿದೆ ಮತ್ತು ಅಜ್ಜ ಅಜ್ಜಿಯರು ಸುಮ್ಮನೆ ಕೂರುವಂತೆ ಮಾಡಿದೆ. ಟ್ವಿಟರ್ ಎಲ್ಲರನ್ನೂ ವರದಿಗಾರರನ್ನಾಗಿ ಮಾಡಿದೆ.

* ನಿಮ್ಮ ಈಗಿನ ಸ್ಥಿತಿಗೆ ಇಂದು ನೀವು ಮಲಗಿದ್ದೀರೋ ಅಥವಾ ಎಚ್ಚರವಾಗಿದ್ದೀರೋ ಎನ್ನುವುದಲ್ಲ, ನೀವು ಆನ್ ಲೈನ್ ನಲ್ಲಿ ಇದ್ದೀರೋ ಅಥವಾ ಆಫ್ ಲೈನ್ ಎನ್ನುವುದು ಮುಖ್ಯ. ನಮ್ಮ ಯುವಕರ ಮೂಲಭೂತ ಚರ್ಚೆ ಆಂಡ್ರಾಯ್ಡ್ , ಐಒಎಸ್ ಅಥವಾ ವಿಂಡೋಸ್ ನಡುವಿನ ಆಯ್ಕೆಯಾಗಿದೆ.

* ಕಂಪ್ಯೂಟರ್ ನಿಂದ ಸಂವಹನದವರೆಗೆ, ಮನರಂಜನೆಯಿಂದ ಶಿಕ್ಷಣದವರೆಗೆ, ದಾಖಲೆಗಳ ಮುದ್ರಣದಿಂದ ಉತ್ಪನ್ನಗಳ ಮುದ್ರಣದವರೆಗೆ ಅತ್ಯಲ್ಪವಧಿಯ ಧೀರ್ಘ ಪ್ರಯಾಣವಾಗಿದೆ.

* ನಾವು ಸಾರ್ವರ್ಜನಿಕ ವೈಫೈ ಹಾಟ್ ಸ್ಪಾಟ್ ಗಳನ್ನು ವಿಸ್ತರಿಸುತ್ತಿದ್ದೇವೆ. ಉದಾಹರಣೆಗೆ, ವೈಫೈ ವಿಮಾನ ನಿಲ್ದಾಣಗಳಲ್ಲಿ ಅಲ್ಲದೇ ರೈಲ್ವೆ ನಿಲ್ದಾಣಗಳಲ್ಲೂ ಸಿಗುವಂತಾಗಬೇಕು. ಗೂಗಲ್ ಜೊತೆ ಸೇರಿ ಇನ್ನು ಕೆಲವೇ ಸಮಯದಲ್ಲಿ ೫೦೦ ರೈಲ್ವೆ ನಿಲ್ದಾನಗಳಲ್ಲಿ ವೈಫೈ ವ್ಯವಸ್ಥೆಯನ್ನು ಜಾರಿಗೊಳಿಸುತ್ತೇವೆ.

* ನೀವು ಸಾಮಾಜಿಕ ತಾಣಗಳ ಅಥವಾ ಸೇವೆಗಳ ಘಾತೀಯ ವೇಗ ಮತ್ತು ವಿಸ್ತರಣೆಯ ಪ್ರಮಾಣವನ್ನು ಯೋಚಿಸಿದರೆ, ಭರವಸೆಯ ಅಂಚಿನಲ್ಲಿರುವ ಜನರ ಜೀವನವನ್ನು ಆಷ್ಟೇ ವೇಗವಾಗಿ ಮಾರ್ಪಾಡು ಮಾಡಬಹುದು ಎನ್ನುವುದನ್ನೂ ನಂಬಬೇಕು. ಸ್ನೇಹಿತರೇ, ಇದರಿಂದಲೇ ಡಿಜಿಟಲ್ ಇಂಡಿಯಾ ಹುಟ್ಟಿದ್ದು.

* ನಾವು ನಮ್ಮ ನಾಗರಿಕರನ್ನು ಪೇಪರ್ ದಾಖಲೆಗಳಿಂದ ಮುಕ್ತವಾಗಿಸಿ, ಪೇಪರ್ ರಹಿತ ವ್ಯವಹಾರ ಮಾಡಬಯಸುತ್ತೇವೆ. ನಾವು ಎಲ್ಲಾ ನಾಗರಿಕರಿಗೂ ತಮ್ಮ ವೈಯಕ್ತಿಕ ದಾಖಲೆಗಳನ್ನು ಇಡಲು ಡಿಜಿಟಲ್ ಲೋಕರ್ ನ ವ್ಯವಸ್ಥೆ ಮಾಡುತ್ತೇವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited