Untitled Document
Sign Up | Login    
Dynamic website and Portals
  

Related News

ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟಕ್ಕೆ ಆಸಿಯಾನ್ ರಾಷ್ಟ್ರಗಳಿಗೆ ಪ್ರಧಾನಿ ಕರೆ

ಭಯೋತ್ಪಾದನೆ ರಫ್ತು, ಹೆಚ್ಚುತ್ತಿರುವ ತೀವ್ರಗಾಮಿ ಧೋರಣೆಗಳ ವಿರುದ್ಧ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ರಫ್ತು ಪಿಡುಗಿನ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಆಸಿಯಾನ್ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಲಾವೋಸ್ ನ ರಾಜಧಾನಿ ವಿಯೆಂಟಿಯಾನ್ ನಡೆಯುತ್ತಿರುವ 14 ನೇ ಆಸಿಯಾನ್...

ಒಬಾಮಾ ಕಿರುಚಿತ್ರದಲ್ಲಿ ವಿಶ್ವದ ಏಕೈಕ ನಾಯಕ ಪ್ರಧಾನಿ ಮೋದಿ

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಸಾಧನೆ ವಿವರಿಸುವ ಕಿರುಚಿತ್ರವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಈ ಕಿರುಚಿತ್ರದಲ್ಲಿ ಕಾಣಿಸಿಕೊಂಡ ಏಕೈಕ ವಿಶ್ವ ನಾಯಕ ಎಂಬ ಹೆಗ್ಗಳಿಕೆಗೂ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ಫಿಲಡೆಲ್ಫಿಯಾದಲ್ಲಿ ನಡೆದ ಡೆಮಾಕ್ರೆಟಿಕ್‌ ಪಕ್ಷದ ಮಹತ್ವದ ಅಧ್ಯಕ್ಷೀಯ...

ಪ್ರಧಾನಿ ಮೋದಿಯವರಿಗೆ ಒಬಾಮ ಏರ್‌ ಫೋರ್ಸ್ ಒನ್ ಮಾದರಿಯ ವಿಮಾನ

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಒಬಾಮ ಹೊಂದಿರುವ ಅತ್ಯಂತ ಭದ್ರತೆಯುಳ್ಳ "ಏರ್‌ ಫೋರ್ಸ್ ಒನ್‌' ಮಾದರಿಯ ವಿಮಾನದಲ್ಲಿ ಶೀಘ್ರವೇ ಸಂಚರಿಸಲಿದ್ದಾರೆ. ಯಾವುದೇ ರೀತಿಯ ಬಾಹ್ಯ ದಾಳಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಈ ವಿಶೇಷ ವಿಮಾನಕ್ಕಿದೆ. 2 ವಷ೯ಗಳ ಆಡಳಿತಾವಧಿಯಲ್ಲಿ 40 ರಾಷ್ಟ್ರಗಳಿಗೆ...

ಅಮೆರಿಕಾ ತಲುಪಿದ ಪ್ರಧಾನಿ ನರೇಂದ್ರ ಮೋದಿ

ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾಗೆ ಭೇಟಿ ನೀಡಿದ್ದಾರೆ. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಹ್ವಾನದ ಮೇರೆಗೆ ಇಂದು ವಾಷಿಂಗ್ಟನ್ ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಎರಡು ದಿನಗಳ ಭೇಟಿಯಲ್ಲಿ ಅಮೆರಿಕಾದ ಜಂಟಿ ಸಂಸತ್ ಅನ್ನು ಉದ್ದೇಶಿಸಿ...

ಚೀನಾವನ್ನು ಭಾರತದ ಮೂಲಕ ಮಾತ್ರ ನಿಯಂತ್ರಿಸಲು ಸಾಧ್ಯ: ಒಬಾಮಗೆ ಸಂಸದ ಎಲಿಯಟ್ ಏಂಜಲ್ ಸಲಹೆ

ಚೀನಾವನ್ನು ಭಾರತದ ಮೂಲಕ ಮಾತ್ರ ನಿಯಂತ್ರಿಸಲು ಸಾಧ್ಯ ಎಂದು ಹೌಸ್ ಫಾರಿನ್ ಅಫೇರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ನ್ಯೂಯಾರ್ಕ್ ನ ಅಮೆರಿಕ ಸಂಸದ ಎಲಿಯಟ್ ಏಂಜಲ್ ಹೇಳಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ಚೀನಾವನ್ನು ನಿಯಂತ್ರಿಸಲು ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಬಲಗೊಳಿಸಿ ಎಂದು...

ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೆ ಭೇಟಿ ನೀಡುವ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ ಜೂನ್ ತಿಂಗಳಲ್ಲಿ ಮತ್ತೆ ಅಮೆರಿಕಾಗೆ ಭೇಟಿ ನೀಡಬಹುದು. ಇದು ಅಮೆರಿಕಾಗೆ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನಾಲ್ಕನೇ ಭೇಟಿಯಾಗಲಿದೆ. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ವಾಷಿಂಗ್ಟನ್ ಗೆ ಭೇಟಿ...

ಜಾಗತಿಕ ತಾಪದ ವಿರುದ್ಧ ಪ್ಯಾರಿಸ್ ನಲ್ಲಿ ಶೃಂಗಸಭೆ ಆರಂಭ

130 ಜನರನ್ನು ಬಲಿ ಪಡೆದ ಪ್ಯಾರಿಸ್‌ ಭಯೋತ್ಪಾದಕ ದಾಳಿಯ ಕರಿನೆರಳಿನಲ್ಲಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ 12 ದಿನಗಳ ವಿಶ್ವ ನಾಯಕರ ಜಾಗತಿಕ ತಾಪಮಾನದ ವಿರುದ್ಧದ ಶೃಂಗಸಭೆ ಸೋಮವಾರದಿಂದ ಆರಂಭವಾಗಿದೆ. ಈ ಮಹಾಸಭೆಗೆ ಸುಮಾರು 9 ಸಾವಿರ ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪ್ರಧಾನಿ ಮೋದಿ,...

ಭಯೋತ್ಪಾದನೆ ನಿರ್ಮೂಲನೆಗೆ ಜಿ-20 ರಾಷ್ಟ್ರಗಳ ನಿರ್ಣಯ

ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಐಸಿಸ್‌ ಭಯೋತ್ಪಾದಕರು ನಡೆಸಿದ ಅಟ್ಟಹಾಸವನ್ನು ಜಿ-20 ಶೃಂಗಸಭೆಯಲ್ಲಿ ಖಂಡಿಸಲಾಯಿತು. ಉಗ್ರವಾದವನ್ನು ನಿಗ್ರಹಿಸಲು ಜಾಗತಿಕ ಮಟ್ಟದಲ್ಲಿ ತುರ್ತಾಗಿ ಸಂಯುಕ್ತ ಪ್ರಯತ್ನಗಳು ನಡೆಯಬೇಕಿವೆ ಎಂದು ವಿಶ್ವ ನಾಯಕರು ಪ್ರತಿಪಾದಿಸಿದ್ದಾರೆ. ಆರ್ಥಿಕಾಭಿವೃದ್ಧಿ ಹಾಗೂ ಹವಾಮಾನ ಬದಲಾವಣೆ ಕುರಿತು ಚರ್ಚಿಸುವ ಉದ್ದೇಶದಿಂದ ಟರ್ಕಿಯ ಅಂತಾಲಿಯಾದಲ್ಲಿ...

ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೀಪಾವಳಿಯ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಟ್‌ಲೈನ್ ನಲ್ಲಿ ಮಂಗಳವಾರ ರಾತ್ರಿ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಬಾಮಾ ದೀಪಾವಳಿ ಶುಭಾಶಯ ಕೋರಿದ್ದು, ಈ ವೇಳೆ ಶ್ವೇತ...

ಶಾಂತಿ ಪಡೆಗಳನ್ನು ಒದಗಿಸುವ ದೇಶಗಳು ನಿರ್ಧಾರ ಕೈಗೊಳ್ಳುವಲ್ಲಿ ಸೂಕ್ತ ಪ್ರಾತಿನಿಧ್ಯ ಹೊಂದಿಲ್ಲ: ಪ್ರಧಾನಿ ಮೋದಿ

ತಮ್ಮ 5 ದಿನಗಳ ಅಮೆರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ಹಿಂದಿರುಗುವ ಮೊದಲು ಪ್ರಧಾನಿ ಮೋದಿ ವಿಶ್ವ ಶಾಂತಿಪಾಲನಾ ಶೃಂಗಸಭೆಯಲ್ಲಿ ಭಾಗವಹಿಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತರಬೇಕಾದ ಸುಧಾರಣೆಗಳ ಬಗ್ಗೆ ಮತ್ತೊಮ್ಮೆ ಒತ್ತಿ ಹೇಳಿದರು. ಕೊನೆಯ ದಿನದ ಪ್ರಮುಖಾಂಶಗಳುಃ * ದೊಡ್ಡ ಶಾಂತಿ ಪಡೆಗಳನ್ನು ಒದಗಿಸುವ...

ಒಬಮಾ ಮತ್ತು ಡೇವಿಡ್ ಕ್ಯಾಮರೂನ್ ಜೊತೆ ದ್ವಿಪಕ್ಷೀಯ ಮಾತುಕತೆಗೆ ನೂಯಾರ್ಕ್ ತಲುಪಿದ ಪ್ರಧಾನಿ ಮೋದಿ

ತಮ್ಮ ಎರಡು ದಿನದ ಸಿಲಿಕಾನ್ ವ್ಯಾಲಿ ಭೇಟಿ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ ತಲುಪಿದ್ದಾರೆ. ಸಿಲಿಕಾನ್ ವ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟೆಸ್ಲಾ, ಫೇಸ್ ಬುಕ್, ಗೂಗಲ್ ಕಂಪನಿಗಳಿಗೆ ಭೇಟಿ ನೀಡಿದ್ದರು. ಇದಲ್ಲದೇ ಆಪಲ್ ಸೇರಿದಂತೆ ಪ್ರಖ್ಯಾತ ಐಟಿ ಕಂಪನಿಗಳ...

ಅಮೆರಿಕದಲ್ಲಿ ಥಿಯೇಟರ್ ಗೆ ನುಗ್ಗಿ ಗುಂಡಿನ ದಾಳಿ, ಇಬ್ಬರ ಸಾವು

ಅಮೆರಿಕದ ಗನ್ ಸಂಸ್ಕೃತಿ ಇನ್ನಷ್ಟು ಜೀವಗಳನ್ನು ಬಲಿತೆಗೆದುಕೊಂಡಿದೆ. ಅಮೆರಿಕದ ಲೂಸಿಯಾನಾದ ಲಫಾಯಟ್ಟೆಯ ಚಿತ್ರಮಂದಿರದೊಳಗೆ ನುಗ್ಗಿದ ೫೮ ವರ್ಷದ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದ ಘಟನೆ ಗುರುವಾರ ನಡೆದಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದ ನಂತರ...

ಭಾರತ-ಅಮೆರಿಕಗಳ ಸುದೃಢ ಬಾಂಧವ್ಯ ವಿಶ್ವಕ್ಕೇ ಹಿತಕಾರಿ: ಪ್ರಧಾನಿ ಮೋದಿ

'ಅಮೆರಿಕದಲ್ಲಿರುವ ನನ್ನ ಪ್ರೀತಿಯ ಸಹೋದರಿ ಸಹೋದರರೆ, ನಿಮಗೆ ಸ್ವಾತಂತ್ರ್ಯ ದಿನದ ಹಾರ್ಧಿಕ ಶುಭಾಶಯಗಳು. ಭಾರತ ಮತ್ತು ಅಮೆರಿಕದ ನಡುವಿನ ಬಾಂಧವ್ಯ ಕಾಲದ ಪರೀಕ್ಷೆಯನ್ನು ಗೆದ್ದಿದೆ ಹಾಗೂ (ಎರಡೂ ದೇಶಗಳು) ಮೌಲ್ಯಗಳನ್ನು ಹಂಚಿಕೊಂಡಿವೆ. ನಮ್ಮೆರಡೂ ಪ್ರಜಾತಂತ್ರ ದೇಶಗಳು ಪ್ರಜಾಸತ್ತಾತ್ಮಕ ಆಚರಣೆಗಳನ್ನು ಮೈಗೂಡಿಸಿಕೊಂಡಿವೆ...

ಜನಾಂಗೀಯ ದ್ವೇಷದಿಂದ ಅಮೆರಿಕ ಇನ್ನೂ ಹೊರಬಂದಿಲ್ಲ: ಒಬಾಮ

ಅಮೆರಿಕ ಇನ್ನೂ ಜನಾಂಗೀಯ ದ್ವೇಷದಿಂದ ಹೊರಬಂದಿಲ್ಲ. ಅದು ಇನ್ನೂ ನಮ್ಮ ಡಿಎನ್‍ಎಯಲ್ಲೇ ಇದೆ ಎಂದು ಅಧ್ಯಕ್ಷ ಬರಾಕ್ ಒಬಾಮ ಕಳವಳ ವ್ಯಕ್ತಪಡಿಸಿದ್ದಾರೆ. ಸೌತ್ ಕೆರೋಲಿನಾದ ಚಾರ್ಲ್ಸ್‍ಟನ್ ಚರ್ಚಿನ ಮೇಲೆ ಬಿಳಿ ಸವರ್ಣೀಯರು ನಡೆಸಿದ ದಾಳಿ ಹಿನ್ನೆಲೆಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಒಬಾಮ, 'ಜನಾಂಗೀಯ ದ್ವೇಷದಿಂದ...

ಪ್ರಧಾನಿ ಮೋದಿ ಒಡನಾಟದ ಸವಿನೆನಪುಗಳನ್ನು ಮೆಲಕು ಹಾಕಿದ ಒಬಾಮ

ಕಳೆದ ಜನವರಿಯಲ್ಲಿ ತಾವು ಭಾರತಕ್ಕೆ ಭೇಟಿ ನೀಡಿದ್ದು, ಆ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಗೆಳೆತನದ ಒಡನಾಟಗಳ ಸವಿನೆನಪುಗಳನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತೊಮ್ಮೆ ಮೆಲುಕು ಹಾಕಿ ಸಂತಸಪಟ್ಟರು. ಭಾರತದ ನೂತನ ರಾಯಭಾರಿಯಾಗಿರುವ ಅರುಣ್ ಸಿಂಗ್ ಅವರು ಒಬಾಮಾ ಅವರ...

ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಪ್ರಧಾನಿ ಮೋದಿ ಮುಂಚೂಣಿಯಲ್ಲಿ

ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿ ಜನಪ್ರಿಯ ನಾಯಕ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ನಂತರ ಸಾಮಾಜಿಕ ಮಾಧ್ಯಮವನ್ನು ಯಶಸ್ವಿಯಾಗಿ ಬಳಸಿದ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ಅಮೆರಿಕದ ತಜ್ಞ ಜೊಯೊಜೀತ್ ಪಾಲ್ ಎಂಬುವವರು ಇತ್ತೀಚೆಗೆ ಟೆಲಿವಿಷನ್...

ಧಾರ್ಮಿಕ ಸಹಿಷ್ಣುತೆ ಬಗ್ಗೆ ಮೋದಿ, ಒಬಾಮ ಒಂದೇ ರೀತಿ ನಡೆದುಕೊಳ್ಳುತ್ತಿದ್ದಾರೆ: ಅಮೆರಿಕಾ

ಭಾರತಕ್ಕೆ ಧಾರ್ಮಿಕ ಸಹಿಷ್ಣುತೆ ಬಗ್ಗೆ ಪಾಠ ಹೇಳಿಕೊಟ್ಟಿದ್ದ ಅಮೆರಿಕಾ, ಧಾರ್ಮಿಕ ಸಹಿಷ್ಣುತೆ ವಿಚಾರದಲ್ಲಿ ಅಮೆರಿಕಾ ಅಧ್ಯಕ್ಷ ಹಾಗೂ ಭಾರತದ ಪ್ರಧಾನಿ ಇಬ್ಬರೂ ಒಂದೇ ಎನ್ನತೊಡಗಿದೆ. ಭಾರತದಲ್ಲಿರುವ ಅಮೆರಿಕಾ ರಾಯಭಾರಿ ರಿಚರ್ಡ್ ವರ್ಮಾ, ಧಾರ್ಮಿಕ ಸಹಿಷ್ಣುತೆ ವಿಷಯದಲ್ಲಿ ಬರಾಕ್ ಒಬಾಮ ಹಾಗೂ...

ಯು.ಎನ್ ನಲ್ಲಿ ಭಾರತಕ್ಕೆ ತುರ್ತಾಗಿ ಶಾಶ್ವತ ಸದಸ್ಯತ್ವ ನೀಡಬೇಕು: ಫ್ರಾನ್ಸ್

'ವಿಶ್ವಸಂಸ್ಥೆ' ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಬೇಕು ಎಂದು ಫ್ರಾನ್ಸ್ ಒತ್ತಾಯಿಸಿದೆ. ಬದಲಾಗಿರುವ ಜಗತ್ತಿನಲ್ಲಿ ತುರ್ತಾಗಿ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸ್ಥಾನ ನೀಡಬೇಕಿದೆ ಈ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿಸ್ತರಿಸಬೇಕಿದೆ ಎಂದು ಫ್ರಾನ್ಸ್ ಹೇಳಿದೆ. ಭಾರತದೊಂದಿಗೆ ಬ್ರೆಜಿಲ್ ಹಾಗೂ...

ಒಬಾಮಾ ಭಾರತ ಭೇಟಿ ವಿಚಾರ: ಖರ್ಚು-ವೆಚ್ಚದ ವಿವರ ನೀಡಲು ಕೇಂದ್ರ ನಕಾರ

ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂರ್ಭದಲ್ಲಿ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬ ವಿವರ ನೀಡಿ ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ...

ಅಮೆರಿಕ ಅಧ್ಯಕ್ಷರು ನಮ್ಮ ಪ್ರಧಾನಿಯನ್ನು ಹೊಗಳಿರುವುದು ಇತಿಹಾಸದಲ್ಲೆ ಮೊದಲು: ರಾಹುಲ್

'ಸಂಸತ್ ಅಧಿವೇಶನ'ದ ಲೋಕಸಭೆಯ ಕಲಾಪದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅಮೆರಿಕಾ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿರುವ ಬಗ್ಗೆ ಮಾತನಾಡಿದ್ದಾರೆ. 'ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸಕ್ಕೆ ಭೇಟಿ ನೀಡಿದಾಗ ಟೈಮ್ ಮ್ಯಾಗಜೀನ್ ನಲ್ಲಿ ಅಮೆರಿಕದ ಅಧ್ಯಕ್ಷ ...

ಅಮೆರಿಕಾದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ

ಅಮೆರಿಕಾದಲ್ಲಿ ಹಿಂದೂ ದೇವಲಾಯಗಳ ಮೇಲೆ ದಾಳಿ ನಡೆದಿದೆ. ಯು.ಎಸ್ ನ ನಾರ್ತ್ ಟೆಕ್ಸಾಸ್ ನಲ್ಲಿ ಘಟನೆ ನಡೆದಿದ್ದು, ಹಿಂದೂಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವಾಲಯಗಳ ಬಾಗಿಲ ಮೇಲೆ ದೆವ್ವದ ಆರಾಧನೆ ಎಂದು ಬರೆದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಲಾಗಿದೆ. ಕ್ಯಾಥೊಲಿಕ್ ಪ್ರಾಬಲ್ಯ...

ಮೋದಿಯನ್ನು ಹಿಟ್ಲರ್ ಗೆ ಹೋಲಿಸಿ ಮಸರತ್ ಆಲಂ ನನ್ನು 'ಸಾಹೇಬ್' ಎಂದ ದಿಗ್ವಿಜಯ್ ಸಿಂಗ್!

ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೊಸ ವಿವಾದ ಸೃಷ್ಠಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಸಿ, ಇಡೀ ದೇಶವೇ ಶಪಿಸುತ್ತಿರುವ ಕಾಶ್ಮೀರ ಪ್ರತ್ಯೇಕತಾವಾದಿ ಮಸರತ್ ಆಲಂ ನನ್ನು ಸಾಹೇಬ್ ಎಂದು ಗೌರವದಿಂದ ಸಂಬೋಧಿಸುವ ಮೂಲಕ ದಿಗ್ವಿಜಯ್ ಸಿಂಗ್...

ನರೇಂದ್ರ ಮೋದಿ ಭಾರತದ ಸುಧಾರಣೆಯ ಮುಖ್ಯಸ್ಥ: ಬರಾಕ್ ಒಬಾಮ ಬಣ್ಣನೆ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಅತ್ಯುತ್ತಮ ಸ್ನೇಹ ಸಂಬಂಧವನ್ನು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಪ್ರತಿಷ್ಠಿತ ಟೈಮ್ ಮ್ಯಾಗಜೀನ್ ಗೆ ಮೋದಿ ಕುರಿತು ವ್ಯಕ್ತಿಚಿತ್ರಣವನ್ನು( profile write up) ಬರೆದಿದ್ದು, ಮೋದಿಯವರನ್ನು ಭಾರತದ ಸುಧಾರಣೆಯ ಮುಖ್ಯಸ್ಥ (India’s...

ಹಿಲರಿ ಕ್ಲಿಂಟನ್ ಉಮೇದುವಾರಿಕೆಯನ್ನು ಅನುಮೋದಿಸದಿರಲು ಬರಾಕ್ ಒಬಾಮ ನಿರ್ಧಾರ

2016ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಹಿಲರಿ ಕ್ಲಿಂಟನ್ ಗೆ ಬೆಂಬಲ ಘೋಷಿಸಲು ಹಾಲಿ ಅಧ್ಯಕ್ಷ ಬರಾಕ್ ಒಬಾಮ ಹಿಂದೇಟು ಹಾಕಿದ್ದಾರೆ. ತಮ್ಮದೇ ಸರ್ಕಾರದಲ್ಲಿ ಕಾರ್ಯದರ್ಶಿಯಾಗಿದ್ದ ಹಿಲರಿ ಕ್ಲಿಂಟನ್ ಅವರಿಗೆ ಬರಾಕ್ ಒಬಾಮ ಬೆಂಬಲ ಘೋಷಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ...

ಪ್ರಧಾನಿ ಮೋದಿ, ಒಬಾಮಾ, ಪುಟಿನ್ ಖಾಸಗಿ ಮಾಹಿತಿ ಸೋರಿಕೆ

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸೇರಿದಂತೆ ವಿಶ್ವದ 31 ಗಣ್ಯರ ಖಾಸಗಿ ಮಾಹಿತಿ ಏಷ್ಯನ್‌ ಕಪ್‌ ಫ‌ುಟ್ಬಾಲ್‌ ಟೂರ್ನಮೆಂಟ್‌ನ ಆಯೋಜಕರಿಗೆ ಸೋರಿಕೆಯಾದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವರ್ಷ ನವೆಂಬರ್...

ಈ ಬಾರಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಲಿರುವ ಮೋದಿ

ಈ ಬಾರಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರೈತರ ಬಗ್ಗೆ ಮಾತನಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ರೇಡಿಯೋ ನಲ್ಲಿ ಪ್ರಸಾರವಾಗುವ ಜನಪ್ರಿಯ ಮನ್ ಕಿ ಬಾತ್ ಕಾರ್ಯಕ್ರಮದ ಮುಂದಿನ ಸಂಚಿಕೆ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಾ.22ರಂದು...

ವಿಶ್ವದ ಪ್ರಭಾವಿ ಇಂಟರ್ ನೆಟ್ ವ್ಯಕ್ತಿಗಳ ಪಟ್ಟಿ: ಒಬಾಮ ನಂತರದ ಸ್ಥಾನದಲ್ಲಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯುನ್ನತ 30 ಮಂದಿ ಪ್ರಭಾವೀ ಇಂಟರ್ ನೆಟ್ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಟೈಮ್ ನಿಯತಕಾಲಿಕ ಗುರುತಿಸಿರುವ ಪ್ರಭಾವಿಗಳ ಪಟ್ಟಿಯಲ್ಲಿ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಸಹ ಇದ್ದು, ನಂತರದ ಸ್ಥಾನದಲ್ಲಿ ಮೋದಿ ಇದ್ದಾರೆ. ವಿಶ್ವದ ನಾಯಕರು...

ಮುಗ್ದರನ್ನು ಕೊಲ್ಲುವ ಉಗ್ರರು ಇಸ್ಲಾಂನ ಮುಖಂಡರಲ್ಲ: ಬರಾಕ್ ಒಬಾಮ

ಇಸ್ಲಾಂ ಹೆಸರಲ್ಲಿ ಮುಗ್ಧರ ಮಾರಣಹೋಮ ನಡೆಸುವ ಉಗ್ರರು ಧಾರ್ಮಿಕ ಮುಖಂಡರಲ್ಲ, ಅವರು ಭಯೋತ್ಪಾದಕರು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕಿಡಿಕಾರಿದ್ದಾರೆ. ಸುಳ್ಳು ಭರವಸೆಗಳ ಉಗ್ರವಾದವನ್ನು ಪಾಶ್ಚಾತ್ಯ ಮತ್ತು ಮುಸ್ಲಿಂ ಮುಖಂಡರು ಒಗ್ಗಟ್ಟಾಗುವ ಮೂಲಕ ಕೊನೆಗಾಣಿಸಬೇಕು. ಅಲ್ಲದೇ ಇಸ್ಲಾಂ ಅನ್ನು ಪ್ರತಿನಿಧಿಸುವ ಭಯೋತ್ಪಾದನಾ...

ಅಮೆರಿಕಾದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ

ಭಾರತದಲ್ಲಿ ಮಹಾಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಅಮೆರಿಕಾದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದೆ. ವಾಷಿಂಗ್ ಟನ್ ಸ್ಟೇಟ್ ನಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ನಡೆದಿದ್ದು ದೇವಾಲಯದ ಗೇಟ್ ಮೇಲೆ ಗೆಟ್ ಔಟ್ ಎಂದು ಬರೆಯಲಾಗಿದೆ. ಹಿಂದೂ ದೇವಾಲಯಗಳ ಮೇಲೆ ದಾಳಿ...

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ: ಚೀನಾದಿಂದ ಬೆಂಬಲ

ಅಚ್ಚರಿಯ ಬೆಳವಣಿಗೆಯಲ್ಲಿ, ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯ ಸ್ಥಾನ ನೀಡಲು ಚೀನಾ ಬೆಂಬಲ ವ್ಯಕ್ತಪಡಿಸಿದೆ. ಅಮೆರಿಕಾದ ನಂತರ ಚೀನಾದ ಬೆಂಬಲ ಭಾರತಕ್ಕೆ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಸದ್ಯದಲ್ಲೇ ಚೀನಾ ಪ್ರವಾಸ ಕೈಗೊಳ್ಳಲಿದ್ದು ಇದಕ್ಕೂ ಮುನ್ನ ಚೀನಾ ಭಾರತಕ್ಕೆ...

ಯು.ಎನ್ ಭದ್ರತಾ ಮಂಡಳಿ ಖಾಯಂ ಸದಸ್ಯತ್ವ ಭಾರತಕ್ಕೆಸಿಗುವುದಕ್ಕೆ ಪಾಕ್ ಅಡ್ಡಗಾಲು

'ವಿಶ್ವಸಂಸ್ಥೆ' ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡುವುದರ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಪಾಕಿಸ್ತಾನ ಮಾತ್ರ ಭಾರತಕ್ಕೆ ಖಾಯಂ ಸ್ಥಾನ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವಿಚಾರದ ಬಗ್ಗೆ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮರೊಂದಿಗೆ ದೂರವಾಣಿ...

ಅಮೆರಿಕಾ ಪೊಲೀಸರಿಂದ ಭಾರತೀಯ ವ್ಯಕ್ತಿ ಮೇಲೆ ಹಲ್ಲೆ: ತನಿಖೆಗೆ ಒತ್ತಾಯಿಸಿದ ಭಾರತ ಸರ್ಕಾರ

'ಧಾರ್ಮಿಕ ಸಹಿಷ್ಣುತೆ' ಬಗ್ಗೆ ಇತ್ತೀಚೆಗಷ್ಟೇ ಭಾರತಕ್ಕೆ ಉಪದೇಶ ನೀಡಿದ್ದ ಅಮೆರಿಕಾದಲ್ಲಿ ಅಲ್ಲಿನ ಪೊಲೀಸರು ಭಾರತೀಯರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ ಹಲ್ಲೆ ನಡೆಸಿರುವ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದೆ. ಗುಜರಾತ್ ಮೂಲದ...

ನಾವು ಧರ್ಮ ಸಹಿಷ್ಣುಗಳು: ಅರುಣ್ ಜೇಟ್ಲಿ

ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಇಲ್ಲ. ನಾವು ಧರ್ಮ ಸಹಿಷ್ಣುಗಳು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಇಲ್ಲ. ನಾವು ಧರ್ಮ ಸಹಿಷ್ಣುಗಳು. ಈ ಬಗ್ಗೆ ಉತ್ತಮ ಉದಾಹರಣೆ ಎಂದರೆ, ಒಬಾಮಾ ಎದುರು ದಲೈಲಾಮ...

ಬರಾಕ್ ಒಬಾಮ ಕಪ್ಪು ವರ್ಣೀಯರ ಮೇಲೆ ನಡೆಯುತ್ತಿರುವ ದಾಳಿ ತಡೆಯಲಿ:ವಿಹೆಚ್ ಪಿ

ಭಾರತದಲ್ಲಿ ಪ್ರಸ್ತುತ ಇರುವ ಧಾರ್ಮಿಕ ಅಸಹಿಷ್ಣುತೆಯನ್ನು ಮಹಾತ್ಮಾ ಗಾಂಧಿ ನೋಡಿದ್ದರೆ ಅಘಾತಕ್ಕೊಳಗಾಗುತ್ತಿದ್ದರು ಎಂಬ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹೇಳಿಕೆಗೆ ವಿಶ್ವಹಿಂದೂ ಪರಿಷತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬರಾಕ್ ಒಬಾಮ ಭಾರತದ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಮಾತನಾಡುವ ಮೊದಲು ಅಮೆರಿಕಾದಲ್ಲಿರುವ ಕಪ್ಪು...

ಗಾಂಧಿ ಇದ್ದಿದ್ದರೆ ಭಾರತದ ಧಾರ್ಮಿಕ ಅಸಹಿಷ್ಣುತೆ ಕಂಡು ಅಘಾತಕ್ಕೊಳಗಾಗುತ್ತಿದ್ದರು: ಒಬಾಮ

ಭಾರತದಲ್ಲಿ ಕೆಲವು ವರ್ಷಗಳಿಂದ ಕಂಡುಬರುತ್ತಿರುವ ಧಾರ್ಮಿಕ ಅಸಹಿಷ್ಣುತೆ ಮಹಾತ್ಮಾ ಗಾಂಧಿ ಅವರನ್ನು ಗಾಬರಿಗೊಳಿಸುತ್ತಿತ್ತು ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ. ಭಾರತ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿರುವ ಬರಾಕ್ ಒಬಾಮ, ಭಾರತವೊಂದು ಸುಂದರ ರಾಷ್ಟ್ರ, ಭವ್ಯವಾದ ವೈವಿಧ್ಯತೆ ಹೊಂದಿದೆ, ಆದರೆ ಕೆಲವು...

ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಫಲಿತಾಂಶದ ಬಗ್ಗೆ ಚಿಂತಿಸಿ : ಮೋದಿ

ದೇಶದಲ್ಲಿ ದೆಹಲಿಯಲ್ಲೇ ಅತ್ಯಂತ ಹೆಚ್ಚು ಮತದಾನ ನಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಫೆ.4ರಂದು ಅಂಬೇಡ್ಕರ್ ನಗರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ದೇಶದಲ್ಲಿ ಅತ್ಯಂತ ಹೆಚ್ಚು ಮತದಾನವಾಗಿರುವುದು ಜಮ್ಮು-ಕಾಶ್ಮೀರದಲ್ಲಿ....

ಭಾರತ-ಅಮೆರಿಕಾ ಸಂಬಂಧ ವೃದ್ಧಿಯಿಂದ ಚೀನಾಗೆ ಭಯಬೇಡ: ಒಬಾಮ

'ಅಮೆರಿಕ' ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ಬಗ್ಗೆ ಚೀನಾ ಪ್ರತಿಕ್ರಿಯೆಗಳಿಗೆ ಉತ್ತರಿಸಿರುವ ಬರಾಕ್ ಒಬಾಮ, ಚೀನಾಗೆ ಅಭಯ ನೀಡಿದ್ದಾರೆ. ಭಾರತ ಹಾಗೂ ಅಮೆರಿಕದ ಸೌಹಾರ್ದಯುತ ಸಂಬಂಧದಿಂದ ಚೀನಾ ಹೆದರುವ ಅವಶ್ಯಕತೆ ಇಲ್ಲ ಎಂದು ಒಬಾಮ ಸ್ಪಷ್ಟಪಡಿಸಿದ್ದಾರೆ. ಸಿ.ಎನ್.ಎನ್ ವಾಹಿನಿಯಲ್ಲಿ ಪ್ರಕಟವಾದ...

ಶಿರಚ್ಛೇದನ ಮಾಡ್ತೇವೆ ಎಂದು ಒಬಾಮಾಗೆ ಐಸಿಎಸ್ ಬೆದರಿಕೆ

ಅಮೆರಿಕವನ್ನು ಮುಸ್ಲಿಂ ದೇಶವನ್ನಾಗಿ ಪರಿವರ್ತಿಸಬೇಕು ಇಲ್ಲದಿದ್ರೆ ಶ್ವೇತಭವನಕ್ಕೆ ನುಗ್ಗಿ ಶಿರಚ್ಛೇದನ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಐಸಿಎಸ್ ಉಗ್ರರು ಬೆದರಿಕೆ ಹಾಕಿದ್ದಾರೆ. ಇಸ್ಲಾಂ ಅನ್ನು ಯಾರು ವಿರೋಧಿಸುತ್ತಾರೋ, ಅವರು ಯಾರೇ ಆಗಲಿ ಅವರಿಗೆ ಇದೇ ಗತಿ. ಒಬಾಮಾ ನಿಮಗೂ...

ಆಡಿಯೋ-ವಿಡಿಯೋ ಟ್ವೀಟ್ ಮಾಡಿದ ವಿಶ್ವದ ಪ್ರಥಮ ನಾಯಕ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ನಡೆಸಿಕೊಟ್ಟ ಮನ್ ಕಿ ಬಾತ್ ಕಾರ್ಯಕ್ರಮದ ಬಗ್ಗೆ ಪ್ರಧಾನಿ ಮೋದಿ ಆಡಿಯೋ-ವಿಡಿಯೋ ಟ್ವೀಟ್ ಮಾಡಿ ದಾಖಲೆ ನಿರ್ಮಿಸಿದ್ದಾರೆ. ತಮ್ಮ ಹಾಗೂ ಬರಾಕ್...

ಭಾರತ-ಅಮೆರಿಕ ಸಂಬಂಧ ಕೇವಲ ತೋರಿಕೆಗಷ್ಟೇ: ಚೀನಾ ಪತ್ರಿಕೆ ಲೇವಡಿ

ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ತೋರಿಕೆಯಾಗಿದ್ದು, ಅದರಲ್ಲಿ ಹುರುಳಿಲ್ಲ ಎಂದು ಚೀನಾದ ಕ್ಸಿನ್ ಹುವಾ ನ್ಯೂಸ್ ಏಜೆನ್ಸಿ ಲೇವಡಿ ಮಾಡಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಭೇಟಿ ಎರಡು ದೇಶಗಳ ನಡುವಿನ ಹುಸಿ ಸಂಬಂಧದ ಸಂಕೇತವಾಗಿದೆ ಎಂದು ಅದು ವ್ಯಂಗ್ಯವಾಡಿದೆ. ಭಾರತ...

ಪ್ರಧಾನಿ ಮೋದಿ-ಒಬಾಮ ಮನ್‌ ಕಿ ಬಾತ್‌ ರಾತ್ರಿ 8 ಗಂಟೆಗೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಜಂಟಿಯಾಗಿ ನಡೆಸಿಕೊಟ್ಟ ಮನ್‌ ಕಿ ಬಾತ್‌ ರೇಡಿಯೋ ಭಾಷಣ ಕಾರ್ಯಕ್ರಮ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ನವದೆಹಲಿಯ ಹೈದರಾಬಾದ್‌ ಹೌಸ್‌ನಲ್ಲಿ ಭಾನುವಾರ ಮಧ್ಯಾಹ್ನ ಪ್ರಧಾನಿ ಮೋದಿ ಮತ್ತು ಒಬಾಮ ಅವರ...

ಭಾರತೀಯ ಹೂಡಿಕೆದಾರರಿಂದ ಅಮೆರಿಕಕ್ಕೆ ಹೆಚ್ಚಿನ ಲಾಭ: ಬರಾಕ್ ಒಬಾಮ

ಭಾರತೀಯ ಹೂಡಿಕೆದಾರರಿಂದ ಅಮೆರಿಕಕ್ಕೆ ಹೆಚ್ಚಿನ ಲಾಭವಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತಿಳಿಸಿದ್ದಾರೆ. ದೆಹಲಿಯ ತಾಜ್ ಪ್ಯಾಲೇಸ್‌ನ ದರ್ಬಾರ್ ಹಾಲ್‌ನಲ್ಲಿ ಭಾರತ-ಅಮೆರಿಕ ವಾಣಿಜ್ಯ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಒಬಾಮ, ಭಾರತೀಯ ಹೂಡಿಕೆದಾರರಿಂದಾಗಿ ಅಮೆರಿಕಕ್ಕೆ ಹೆಚ್ಚಿನ ಲಾಭ ಇದೆ. ವ್ಯಾಪಾರ ಹೆಚ್ಚಳದಿಂದ ಉಭಯ...

ಭಾರತದ ಯುವಜನತೆ ಜಗತ್ತನ್ನೇ ಬದಲಿಸಬಲ್ಲರು: ಬರಾಕ್ ಒಬಾಮ

ಭಾರತ ಅಮೆರಿಕಕ್ಕೆ ಬೆಸ್ಟ್ ಫ್ರೆಂಡ್, ವಿಜ್ನಾನ ತಂತ್ರಜ್ನಾನದಲ್ಲಿ ಭಾರತ ಹಾಗೂ ಅಮೆರಿಕ ಸಮಾನ ಸಾಮರ್ಥ್ಯ ಹೊಂದಿದೆ, ಭಾರತವನ್ನು ನೋಡಿದಾಗ ನಮ್ಮದೇ ಪ್ರತಿಬಿಂಬ ಕಾಣುತ್ತದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ. ಜ.27ರಂದು ನವದೆಹಲಿಯಲ್ಲಿ ಸಿರಿಪೋರ್ಟ್ ಸಭಾಂಗಣದಲ್ಲಿ ನಲ್ಲಿ ವಿಶೇಷ ಆಮಂತ್ರಿತರನ್ನುದ್ದೇಶಿಸಿ...

ಸೌದಿ ಅರೇಬಿಯಾಗೆ ತೆರಳಿದ ಬರಾಕ್ ಒಬಾಮ

'ಅಮೆರಿಕಾ' ಅಧ್ಯಕ್ಷ ಬರಾಕ್ ಒಬಾಮ ಅವರ 3 ದಿನಗಳ ಭಾರತ ಪ್ರವಾಸ ಅಂತ್ಯಗೊಂಡಿದೆ. ಬರಾಕ್ ಒಬಾಮ ಹಾಗೂ ಮಿಶೆಲ್ ಒಬಾಮ ಮಧ್ಯಾಹ್ನ ನವದೆಹಲಿಯ ಪಲಾಮ್ ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾಗೆ ತೆರಳಿದರು. ಒಬಾಮ ಅವರನ್ನು ಬೀಳ್ಕೊಡಲು ಪ್ರಧಾನಿ ನರೇಂದ್ರ ಮೋದಿ ಪಲಾಮ್...

ಯುವಶಕ್ತಿ ಜಾಗತಿಕ ಮಟ್ಟದಲ್ಲಿ ಒಗ್ಗೂಡಬೇಕಿದೆ: ಪ್ರಧಾನಿ ಮೋದಿ ಕರೆ

ವಿಶ್ವಾದ್ಯಂತ ಇರುವ ಯುವಶಕ್ತಿ ಒಗ್ಗೂಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜ.27ರಂದು ಪ್ರಸಾರವಾದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಟ್ಟ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಯುವಕರು ಜಾಗತಿಕ ಮಟ್ಟದಲ್ಲಿ ಒಗ್ಗೂಡಬೇಕಿದೆ...

ದೆಹಲಿಯಲ್ಲಿ ಹವಾಮಾನ ವೈಪರಿತ್ಯ:ವಾಯುಪಡೆಯ ಪ್ರದರ್ಶನ ಸ್ಥಗಿತ ಸಾಧ್ಯತೆ

'ದೆಹಲಿ'ಯಲ್ಲಿ ಹವಾಮಾನ ವೈಪರಿತ್ಯ ಉಂಟಾಗಿರುವ ಕಾರಣದಿಂದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಡೆಯುವ ಕಾರ್ಯಕ್ರಮವಾದ ವಾಯುಪಡೆಯ ಪ್ರದರ್ಶನ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಈಬಾರಿಯ ಗಣರಾಜ್ಯೋತ್ಸವದ ಅತಿಥಿಯಾಗಿದ್ದು, ಎಂದಿನ ಗಣರಾಜ್ಯೋತ್ಸವ ದಿನಾಚರಣೆಗಿಂತಲೂ ಈ ಬಾರಿಯದ್ದು ವಿಶೇಷವಾಗಿದೆ. ಬೆಳಿಗ್ಗೆ...

ರಾಜ್ ಪಥ್ ಗೆ ರಾಷ್ಟ್ರಪತಿಗಳ ಆಗಮನ ಪರೇಡ್ ಕಾರ್ಯಕ್ರಮ ಪ್ರಾರಂಭ

ನವದೆಹಲಿಯಲ್ಲಿ ಐತಿಹಾಸಿಕ ಗಣಾರಾಜ್ಯೋತ್ಸವ ದಿನಾಚರಣೆಗೆ ಚಾಲನೆ ದೊರೆತಿದ್ದು, ರಾಜ್ ಪಥ್ ನಿಂದ ಪಥ ಸಂಚಲನ ಕಾರ್ಯಕ್ರಮ ಪ್ರಾರಂಭವಾಗಿದೆ. ಇದಕ್ಕೂ ಮುನ್ನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಬ್ಬರು ಹುತಾತ್ಮ ಯೋಧರಾದ ಮುಕುಂದ್ ವರದರಾಜನ್ ಹಾಗೂ ನೀರಜ್ ಕುಮಾರ್ ಸಿಂಗ್ ಅವರಿಗೆ ಅಶೋಕ ಚಕ್ರ...

ನವದೆಹಲಿಯಲ್ಲಿ ಪಥಸಂಚಲನ ಮುಕ್ತಾಯ: ರಾಷ್ಟ್ರಗೀತೆಗೆ ಗೌರವ ಸಮರ್ಪಿಸಿದ ಬರಾಕ್ ಒಬಾಮ

'ನವದೆಹಲಿ'ಯಲ್ಲಿ ಐತಿಹಾಸಿಕ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಡೆದ ಪರೇಡ್ ಮುಕ್ತಾಯಗೊಂಡಿದೆ. ರಾಷ್ಟ್ರಗೀತೆ ಹಾಡುವ ಮೂಲಕ ರಾಜ್ ಪಥ್ ನಲ್ಲಿ ಪರೇಡ್ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು. ಈ ವೇಳೆ, ಭಾರತಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಎದ್ದು ನಿಂತು ರಾಷ್ಟ್ರಗೀತೆಗೆ...

ಗಣರಾಜ್ಯೋತ್ಸವದಂದು ಅಸ್ಸಾಂ ನಲ್ಲಿ ಬಾಂಬ್ ಸ್ಪೋಟ

ದೇಶಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ನಡೆದಿದ್ದರೆ ಅಸ್ಸಾಂ ನಲ್ಲಿ ಬಾಂಬ್ ಸ್ಪೋಟಗೊಂಡಿರುವ ವರದಿಯಾಗಿದೆ. ಅಸ್ಸಾಂ ನ ತೀನ್ ಸುಖಿ ಜಿಲ್ಲೆಯ ದಿಗ್ಬೊಯಿಯಲ್ಲಿ 2 ಬಾಂಬ್‌ಗಳು ಸ್ಫೋಟಿಸಲಾಗಿದೆ. ಎರಡೂ ಬಾಂಬ್‌ಗಳೂ ಕಡಿಮೆ ತೀವ್ರತೆಯಿಂದ ಕೂಡಿದ್ದು, ಇದುವರೆಗೆ ಯಾವುದೇ ಸಾವುನೋವಿನ ಬಗ್ಗೆ ವರದಿ ಬಂದಿಲ್ಲ....

ಭದ್ರತೆ ಕಾರಣ: ಒಬಾಮ ದಂಪತಿಗೆ ರೇಷ್ಮೆ, ಬೊಂಬೆಗಳನ್ನು ತಿರಸ್ಕರಿಸಿದ ಕೇಂದ್ರ

ಒಬಾಮ ದಂಪತಿಗೆ ಉಡುಗೊರೆಯಾಗಿ ನೀಡಲು ಕರ್ನಾಟಕ ಕಳುಹಿಸಿದ್ದ ಉಡುಗೊರೆಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಚನ್ನಪಟ್ಟಣದ ಬೊಂಬೆ ಹಾಗೂ ಮೈಸೂರು ರೇಷ್ಮೆ ಸೀರೆಗಳನ್ನು ಕರ್ನಾಟಕ ಒಂದೇ ಪತ್ರದೊಂದಿಗೆ ಕಳುಹಿಸಿತ್ತು. ಭದ್ರತೆ ದೃಷ್ಟಿಯಿಂದ ಬೊಂಬೆಗಳನ್ನು ತಿರಸ್ಕರಿಸಲಾಗಿದೆ. ಪತ್ರಕ್ಕೆ ಉತ್ತರಿಸಿ, ಭದ್ರತೆ ಕಾರಣದಿಂದ ನಿಮ್ಮ ಕೊಡುಗೆಗಳನ್ನು ತಿರಸ್ಕರಿಸಲಾಗಿದೆ...

ಭಾರತಕ್ಕೆ ಆಗಮಿಸಿದ ಒಬಾಮ ದಂಪತಿ: ಪ್ರಧಾನಿ ಮೋದಿ ಆತ್ಮೀಯ ಸ್ವಾಗತ

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅವರ ಪತ್ನಿ ಮಿಶೆಲ್ ಒಬಾಮಾ ಭಾರತಕ್ಕೆ ಬೆಳಿಗ್ಗೆ ಆಗಮಿಸಿದ್ದಾರೆ. ದೆಹಲಿಯ ಪಾಲಂ ವಾಯುನೆಲೆಯಲ್ಲಿ ವಿಶೇಷ ವಿಮಾನದಲ್ಲಿ ಬಂದಿಳಿದ ಒಬಾಮ ದಂಪತಿಯನ್ನು ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಸ್ವಾಗತಿಸಿದರು. ಸಿಗದಿತ ಸಮಯಕ್ಕೆ 15 ನಿಮಿಷ ಮುಂಚಿತವಾಗಿ ವಿಮಾನದಿಂದ ಇಳಿದ...

ರಾಷ್ಟ್ರಪಿತ ಮಹಾತ್ಮಾ ಗಾಂಧಿಗೆ ನಮನ ಸಲ್ಲಿಸಿದ ಒಬಾಮ

ಭಾರತಕ್ಕೆ ಭೇಟಿನೀಡಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ರಾಜ್‌ ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಬೆಳಿಗ್ಗೆ ಭಾರತಕ್ಕೆ ಬಂದಿಳಿದ ಒಬಾಮ ಮತ್ತು ಅವರ ಪತ್ನಿ ಮಿಶಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ...

ಭಾರತ-ಅಮೆರಿಕ ಮಹತ್ವದ ಒಪ್ಪಂದಗಳಿಗೆ ಸಹಿ

ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಜಂಟಿ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಾಗರಿಕ ಪರಮಾಣು ಸೇರಿದಂತೆ...

ಪಾಕ್ ಉಗ್ರರಿಗೆ ಸುರಕ್ಷಿತ ತಾಣವಾಗುವುದು ಸರಿಯಲ್ಲ: ಒಬಾಮಾ

ಪಾಕಿಸ್ಥಾನ ಉಗ್ರರಿಗೆ ಸುರಕ್ಷಿತ ತಾಣವಾಗಿರುವುದು ಸರಿಯಲ್ಲ ಮತ್ತು 26/11ರ ಮುಂಬಯಿ ದಾಳಿಯ ಹಿಂದಿರುವ ಉಗ್ರರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ತಿಳಿಸಿದ್ದಾರೆ. ಅಮೆರಿಕದ ವಾಣಿಜ್ಯ ಕಟ್ಟಡಗಳ ಮೇಲೆ ನಡೆದಿದ್ದ 9/11ರ ಭಯೋತ್ಪಾದಕ ದಾಳಿ ಹಾಗೂ ಮುಂಬಯಿ...

ಬರಾಕ್ ಒಬಾಮಾ ಆಗ್ರಾ ಭೇಟಿ ರದ್ದು

66ನೇ ಗಣರಾಜ್ಯೋತ್ಸವದ ಪ್ರಮುಖ ಅತಿಥಿಯಾಗಿ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜ.25ರಂದು ಭಾರತಕ್ಕೆ ಆಗಮಿಸುತ್ತಿದ್ದು, ತಮ್ಮ ಆಗ್ರಾ ಭೇಟಿ ರದ್ದು ಮಾಡಿದ್ದಾರೆ. ಸೌದಿ ಅರೇಬಿಯಾ ರಾಜ ಅಬ್ದುಲ್ಲಾ ಅವರ ನಿಧನ ಹಿನ್ನೆಲೆಯಲ್ಲಿ ಮಂಗಳವಾರ ಆಗ್ರಾದ ವಿಶ್ವವಿಖ್ಯಾತ ತಾಜ್‌ ಮಹಲ್ ಭೇಟಿಯನ್ನು ರದ್ದು...

ಒಬಾಮಾ ಭೇಟಿಯ ನಿತ್ಯದ ಖರ್ಚು 900 ಕೋಟಿ ರೂ

ಭಾರತಕ್ಕೆ 3 ದಿನಗಳ ಭೇಟಿಗಾಗಿ ಜ.25ರಂದು ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ವಿದೇಶ ಪ್ರವಾಸದ ನಿತ್ಯದ ಖರ್ಚು 900 ಕೋಟಿ ರೂಪಾಯಿ. ಒಬಾಮಾ ವಿದೇಶ ಪ್ರವಾಸವೆಂದರೆ ಅದು ಸಾಮಾನ್ಯವಲ್ಲ. ಅವರ ಜತೆ ನೂರಾರು ಭದ್ರತಾ ಸಿಬ್ಬಂದಿ, ಅಧಿಕಾರಿಗಳ ತಂಡ, ವಾಹನಗಳು,...

ವಿಮಾನ ಹಾರಾಟ ನಿಷೇಧ: ಅಮೆರಿಕ ಬೇಡಿಕೆಗೆ ಭಾರತ ಒಪ್ಪಿಗೆ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜ.26ರಂದು ರಾಜಪಥದ ಮೇಲೆ ವಿಮಾನ ಹಾರಾಟ ನಿಷೇಧಿಸಲು ಭಾರತ ಕೊನೆಗೂ ಒಪ್ಪಿದೆ. ಒಬಾಮ ಸುರಕ್ಷತೆಗಾಗಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುವ ರಾಜಪಥದ ಮೇಲೆ ವಿಮಾನ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಅಮೆರಿಕದ ಭದ್ರತಾ ಸಂಸ್ಥೆಗಳು...

ಪಾಕಿಸ್ತಾನದಿಂದ ಭಾರತಕ್ಕೆ ಉಗ್ರರ ನಾಲ್ಕು ತಂಡ ರವಾನೆ

'ಭಾರತ'ದ ನಾಲ್ಕು ಮಹಾನಗರಗಳಲ್ಲಿ ಜ.28ರೊಳಗಾಗಿ ದಾಳಿ ನಡೆಸುವುದಕ್ಕಾಗಿ ಪಾಕಿಸ್ತಾನ ಉಗ್ರರ ನಾಲ್ಕು ತಂಡಗಳನ್ನು ಭಾರತಕ್ಕೆ ರವಾನೆ ಮಾಡಿದೆ ಎಂದು ತಿಳಿದುಬಂದಿದೆ. ಗಣರಾಜ್ಯೋತ್ಸವದಂದು ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಆಗಮಿಸುತ್ತಿದ್ದು ವಿಧ್ವಂಸಕ ಕೃತ್ಯ ನಡೆದರೆ ಅದಕ್ಕೆ ಪಾಕಿಸ್ತಾನವೇ ನೇರ ಹೊಣೆಯಾಗಲಿವೆ ಎಂದು...

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿಯೊಂದಿಗೆ ಭಾಗವಹಿಸಲಿರುವ ಬರಾಕ್ ಒಬಾಮ

ಪ್ರಧಾನಿ ನರೇಂದ್ರ ಮೋದಿ ಅವರೇ ರೇಡಿಯೋದಲ್ಲಿ ನಡೆಸಿಕೊಡಲಿರುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈಬಾರಿ ಎಂದಿಗಿಂತಲೂ ಭಿನ್ನವಾಗಿರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಸಹ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವುದು ಈ ಬಾರಿಯ ಕಾರ್ಯಕ್ರಮವನ್ನು...

ಉಗ್ರ ಕೃತ್ಯ ತಡೆಗೆ ಕ್ರಮ: ಕಂಡಲ್ಲಿ ಗುಂಡಿಕ್ಕಲು ಬಿ.ಎಸ್.ಎಫ್ ಗೆ ಸರ್ಕಾರದ ಆದೇಶ

'ಭಾರತ'ಕ್ಕೆ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಉಗ್ರರನ್ನು ಕಂಡಲ್ಲಿ ಗುಂಡಿಕ್ಕಲು ಬಿ.ಎಸ್.ಎಫ್ ಯೋಧರಿಗೆ ಭಾರತ ಸರ್ಕಾರ ಸೂಚನೆ ನೀಡಿದೆ. ಜ.26ರಂದು ಭಾರತಕ್ಕೆ ಬರಾಕ್ ಒಬಾಮ ಆಗಮಿಸುತ್ತಿದ್ದು ಉಗ್ರರು ಗಡಿ ಭಾಗದಲ್ಲಿ ವಿಧ್ವಂಸಕ ಕೃತ್ಯ ನಡೆಸುವುದನ್ನು ತಡೆಗಟ್ಟಲು...

ಅಮೆರಿಕ ಎಚ್ಚರಿಕೆ ವರದಿಯಲ್ಲಿ ಹುರುಳಿಲ್ಲ: ಜಲಿಲ್ ಅಬ್ಬಾಸ್ ಜಿಲಾನಿ

ಒಬಾಮ ಆಗಮನದ ವೇಳೆ ಭಾರತದಲ್ಲಿ ಯಾವುದೇ ವಿಧ್ವಂಸಕ ಕೃತ್ಯಗಳನ್ನು ನಡೆಸದಂತೆ ಪಾಕ್‌ಗೆ ಅಮೆರಿಕ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಕುರಿತ ಭಾರತೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿಯಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಜಲಿಲ್ ಅಬ್ಬಾಸ್ ಜಿಲಾನಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ...

ವಿಮಾನ ಹಾರಾಟ ನಿಷೇಧ: ಅಮೆರಿಕದ ಮನವಿ ತಿರಸ್ಕರಿಸಿದ ಭಾರತ

ಅಮರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಬೇಟಿ ಹಿನ್ನಲೆಯಲ್ಲಿ ಅಭೂತಪೂರ್ವ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗುತ್ತಿದೆ. ಆದರೆ ಗಣರಾಜ್ಯೋತ್ಸವ ನಡೆಯಲಿರುವ ದೆಹಲಿಯ ರಾಜಪಥ್ ನ ಸುತ್ತಮುತ್ತ ಯಾವುದೇ ವಿಮಾನಗಳು ಹಾರಾಟ ನಡೆಸದಂತೆ ಒಬಾಮಾ ಭದ್ರತಾ ಪಡೆ ಮಾಡಿದ ಮನವಿಯನ್ನು ಭಾರತ ಸರ್ಕಾರ ತಿರಸ್ಕರಿಸಿದೆ. ಗಣರಾಜ್ಯೋತ್ಸವ...

ಒಬಾಮಾ ಭೇಟಿ ವೇಳೆ ದಾಳಿ ಮಾಡಿದರೆ ಹುಷಾರ್: ಪಾಕ್ ಗೆ ಅಮೆರಿಕ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಭಾರತ ಭೇಟಿ ವೇಳೆ ನಿಮ್ಮ ನೆಲದಿಂದ ಭಯೋತ್ಪಾದಕ ಕೃತ್ಯ ನಡೆಯದಂತೆ ನೋಡಿಕೊಳ್ಳಿ. ಒಂದು ವೇಳೆ ನಡೆದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಅಮೆರಿಕ ಖಡಕ್ ಎಚ್ಚರಿಕೆ ನೀಡಿದೆ. ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಒಬಾಮಾ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ...

ಪಾಕ್ ಪುಂಡಾಟಕ್ಕೆ ರಾಜನಾಥ್ ಸಿಂಗ್ ಆಕ್ರೋಶ

ಪಾಕಿಸ್ತಾನ ತನ್ನ ತಪ್ಪನ್ನು ಸರಿಪಡಿಸಿಕೊಳ್ಳದೇ ತನ್ನ ಉದ್ಧಟತನವನ್ನು ಮೆರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಎಷ್ಟೇ ಸಲ ಕದ್ದು ಮುಚ್ಚಿ ದಾಳಿ ಮಾಡಿದರೂ ಕೂಡಾ ನಾವು ಅದಕ್ಕೆ ತಕ್ಕ ಉತ್ತರ ನೀಡಿದ್ದೇವೆ. ಆದರೆ ಪಾಕಿಸ್ತಾನದ ಇಂತಹ...

ಜಮ್ಮು-ಕಾಶ್ಮೀರದಲ್ಲಿ ಲಷ್ಕರ್ ಉಗ್ರ ಸಂಘಟನೆ ಕಮಾಂಡರ್ ಬಂಧನ

'ಜಮ್ಮು-ಕಾಶ್ಮೀರ'ದಲ್ಲಿ ಭಾರತೀಯ ಸೇನಾ ಪಡೆ ಲಷ್ಕರ್-ಎ-ತೋಯ್ಬಾ ಉಗ್ರನನ್ನು ಬಂಧಿಸಿದೆ. ಬಂಧಿತ ಉಗ್ರ ಜಮ್ಮು-ಕಾಶ್ಮೀರದ ಚೂರಾ ಎಂಬ ಪ್ರದೇಶದ ಮನೆಯೊಂದರಲ್ಲಿ ಅಡಗಿದ್ದ ಎಂದು ತಿಳಿದುಬಂದಿದೆ. ಜ.16ರ ಬೆಳಿಗ್ಗೆ ಭಾರತೀಯ ಸೇನಾ ಪಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಉಗ್ರ ಜಮ್ಮು-ಕಾಶ್ಮೀರದಲ್ಲಿ ವಿಧ್ವಂಸಕ...

ಜನವರಿ 25 ರಿಂದ ಒಬಾಮಾ ಭಾರತ ಪ್ರವಾಸ

ಜ.25 ರಿಂದ 27ರವರೆಗೆ ಒಬಾಮಾ ಭಾರತ ಪ್ರವಾಸ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಜನವರಿ 25 ರಿಂದ 27 ರವರೆಗೆ ಭಾರತ ಪ್ರವಾಸ ಮಾಡಲಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಒಬಾಮಾ ಮುಖ್ಯ ಅಥಿತಿಯಾಗಿರುತ್ತಾರೆ ಹಾಗೂ ಆಗ್ರಾದ ತಾಜ್ ಮಹಲ್ ಗೆ ಕೂಡ ಭೇಟಿ...

ಗಣರಾಜ್ಯೋತ್ಸವದಂದು ದುಷ್ಕೃತ್ಯಕ್ಕೆ ಉಗ್ರರ ಸಂಚು

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಪ್ರವಾಸದ ವೇಳೆ ದುಷ್ಕೃತ್ಯವೆಸಗಲು ಗಡಿಯಲ್ಲಿ ಸುಮಾರು 200 ಉಗ್ರರು ಸಂಚು ರೂಪಿಸಿದ್ದಾರೆ ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ. ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು...

ಮೊದಲ ಬಾರಿಗೆ ಹೆಚ್ಚು ಕಾಲ ತೆರೆದ ಅಂಗಳದಲ್ಲಿ ಆಸೀನರಾಗಲಿರುವ ಒಬಾಮ

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಸುಮಾರು 2 ತಾಸಿಗೂ ಹೆಚ್ಚು ಕಾಲ ರಾಜಪಥದ ತೆರೆದ ಅಂಗಳದಲ್ಲಿ ಆಸೀನರಾಗಲಿದ್ದಾರೆ. ಈ ಮೂಲಕ ತೆರೆದ ಅಂಗಳದಲ್ಲಿ ಇಷ್ಟೊಂದು ಹೆಚ್ಚು ಸಮಯ ಕುಳಿತುಕೊಳ್ಳುತ್ತಿರುವ ಮೊದಲ ಅಮೆರಿಕ ಅಧ್ಯಕ್ಷ ಎನ್ನಿಸಿಕೊಳ್ಳಲಿದ್ದಾರೆ. ಉಗ್ರರ ದಾಳಿಯ...

ಪತ್ರಿಕಾ ಕಛೇರಿ ಮೇಲೆ ಉಗ್ರರ ದಾಳಿ: ವಿಶ್ವಾದ್ಯಂತ ಖಂಡನೆ

ಪ್ಯಾರಿಸ್ ನ ಪತ್ರಿಕಾ ಕಛೇರಿ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಗೆ ವಿಶ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಉಗ್ರರ ದಾಳಿ ಹಿನ್ನಲೆಯಲ್ಲಿ ಫ್ರಾನ್ಸ್ ನ ಎಲ್ಲೆಡೆ ಕಟ್ಟೆಚ್ಚರವಹಿಸಲಾಗಿದೆ. ಉಗ್ರರ ದುಷ್ಕೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅಮೆರಿಕ ಅಧ್ಯಕ್ಷ...

ಭಾರತದಲ್ಲಿರುವಾಗ ಬರಾಕ್‌ ಒಬಾಮಾ ಭದ್ರತೆಗೆ ಉಪಗ್ರಹ ನಿಯೋಜನೆ

ಜ.26ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಲಿರುವ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಭದ್ರತೆಗೆ ಸರ್ವೇಕ್ಷಣಾ ಉಪಗ್ರಹವೊಂದನ್ನು ನಿಯೋಜನೆ ಮಾಡಲು ಅಮೆರಿಕ ಸರ್ಕಾರ ಮುಂದಾಗಿದೆ. ಅಮೆರಿಕ ಅಧ್ಯಕ್ಷರೊಬ್ಬರು ಭಾರತದ ಗಣರಾಜ್ಯೋತ್ಸವ ದಿನದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಅದೂ ಅಲ್ಲದೆ ಒಬಾಮಾ ಅವರು...

ಭಾರತಕ್ಕೆ ಒಬಾಮ ಭೇಟಿ ಹಿನ್ನೆಲೆ ಆತ್ಮಹತ್ಯಾ ದಾಳಿ ನಡೆಸಲು ಐ.ಎಸ್.ಐ ಸಂಚು

ಭಾರತಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಐ.ಎಸ್.ಐ ಜಮ್ಮು-ಕಾಶ್ಮೀರದಲ್ಲಿ ಆತ್ಮಹತ್ಯಾ ಬಾಂಬರ್ ಗಳ ಮೂಲಕ ದಾಳಿ ನಡೆಸಲು ಯೋಜನೆ ರೂಪಿಸಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ, ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆ ನೆರವು ಪಡೆದು ಜಮ್ಮು-ಕಾಶ್ಮೀರದಲ್ಲಿ ಆತ್ಮಹತ್ಯಾ...

ಅಪ್ಘಾನಿಸ್ತಾನ ಇನ್ನೂ ಅಪಾಯಕಾರಿ ದೇಶವಾಗಿದೆ: ಬರಾಕ್ ಒಬಾಮ

'ಅಪ್ಘಾನಿಸ್ತಾನ'ದಲ್ಲಿ ಅಮೆರಿಕ ಕಳೆದ 13ವರ್ಷಗಳಿಂದ ನಡೆಸುತ್ತಿದ್ದ ತನ್ನ ಯುದ್ಧ ಕಾರ್ಯಾಚರಣೆಯನ್ನು ಡಿ.29ರಂದು ಅಧಿಕೃತವಾಗಿ ಸ್ಥಗಿತಗೊಳಿಸಿದ್ದು, ಸೇನಾಪಡೆಯನ್ನು ವಾಪಸ್ ಕರೆಸಿಕೊಂಡಿದೆ. ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಅಪ್ಘಾನಿಸ್ತಾನ ಇನ್ನೂ ಅಪಾಯಕಾರಿ ದೇಶವಾಗಿದೆ ಎಂದು ಹೇಳಿದ್ದಾರೆ. ಕಳೆದ...

ಬರಾಕ್ ಒಬಾಮರನ್ನು ಕೋತಿ ಎಂದ ಉತ್ತರ ಕೊರಿಯಾ

ಹಾಸ್ಯ-ವ್ಯಂಗ್ಯ ಸಿನೆಮಾ 'ದಿ ಇಂಟರ್ ವ್ಯೂ' ಚಲನಚಿತ್ರದ ಹ್ಯಾಕಿಂಗ್ ವಿವಾದದ ಹಿನ್ನಲೆಯಲ್ಲಿ, ಉತ್ತರ ಕೊರಿಯಾದ ಅಂತರ್ಜಾಲ ವ್ಯವಸ್ಥೆಯನ್ನು ಸ್ಥಗಿತಗೊಳಿಸಿರುವುದ್ದಕ್ಕೆ ಉತ್ತರ ಕೊರಿಯಾ, ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಕೋತಿ ಎಂದು ಜರಿದಿದೆ. ಚಿತ್ರ ನಿರ್ಮಾಣ ಸಂಸ್ಥೆ ಸೋನಿ ಪಿಕ್ಚರ್ಸ್ ಮೇಲೆ ನಡೆದ...

ಜಗತ್ತಿನ 30 ಉತ್ತಮ ಆಡಳಿತಗಾರರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ 2ನೇ ಸ್ಥಾನ

ಉತ್ತಮ ಆಡಳಿತ(ಪ್ರದರ್ಶನ) ನೀಡುತ್ತಿರುವ ವಿಶ್ವದ 30 ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಸ್ಥಾನ ಪಡೆದಿದ್ದಾರೆ. ಜಪಾನಿನ ಮಾರುಕಟ್ಟೆ ಸಂಶೋಧನಾ ಸಂಸ್ಥೆ ನಡೆಸಿರುವ ಸರ್ವೆಯ ಪ್ರಕಾರ ಚೀನಾದ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಉತ್ತಮ ಆಡಳಿತ(ಪ್ರದರ್ಶನ) ನೀಡುವವರ...

ಬರಾಕ್ ಒಬಾಮ ಭಾರತ ಭೇಟಿ ಖಚಿತ

ರಷ್ಯಾ-ಭಾರತ ಒಪ್ಪಂದದ ಬಗ್ಗೆ ಅಸಮಾಧಾನವಾಗಿದೆ ನಿಜ, ಆದರೆ ಅಧ್ಯಕ್ಷ ಒಬಾಮ ಭಾರತ ಭೇಟಿಯಲ್ಲಿ ಬದಲಾವಣೆ ಇಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ರಷ್ಯಾ ಜತೆಗಿನ ಬಾಂಧವ್ಯವನ್ನು ಮುಂದುವರಿಸುವುದಾಗಿ ಭಾರತ ಹೇಳಿರುವುದು ಅಮೆರಿಕಕ್ಕೆ ಅಸಮಾಧಾನ ತಂದಿದೆಯಾದರೂ ಭಾರತದೊಂದಿಗಿನ ಸಂಬಂಧವನ್ನು ಮುರಿದುಕೊಳ್ಳಲು ಅಮೆರಿಕಾಗೆ ಮನಸ್ಸಿಲ್ಲ. ಈ...

ಮೋದಿ ಅಭಿವೃದ್ಧಿ ಮಾದರಿಗೆ ಒಬಾಮ ಶ್ಲಾಘನೆ

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮ್ಯಾನ್ ಆಫ್ ಆಕ್ಷನ್(man of action) ಎಂದು ಬಣ್ಣಿಸಿದ್ದ ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಮತ್ತೊಮ್ಮೆ ಮೋದಿ ಅವರನ್ನು ಹೊಗಳಿದ್ದಾರೆ. ಅಮೆರಿಕಾದ ಆರ್ಥಿಕತೆ ಬಗ್ಗೆ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ...

ಚೀನಾಗೆ ಪ್ರಧಾನಿ ಮೋದಿ ಟಾಂಗ್

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರನ್ನು 66ನೇ ಗಣರಾಜ್ಯೋತ್ಸವಕ್ಕೆ ಆಮಂತ್ರಿಸುವ ಮೂಲಕ ಜಗತ್ತೇ ಭಾರತದತ್ತ ನಿಬ್ಬೆರಗಾಗಿ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಇದರ ಹಿಂದೆ ಅತಿ ದೊಡ್ಡ ತಂತ್ರಗಾರಿಕೆ ಅಡಗಿದೆ. ಬಲಿಷ್ಠ ಸೇನೆ ಮುಂದಿಟ್ಟುಕೊಂಡು ಏಷ್ಯಾದಲ್ಲಿ ಚೀನಾ ನಡೆಸುತ್ತಿರುವ ಹೊಸ ವ್ಯೂಹಾತ್ಮಕ ಆಟಕ್ಕೆ...

ಗಣರಾಜ್ಯೋತ್ಸವಕ್ಕೆ ಒಬಾಮರನ್ನು ಅತಿಥಿಯಾಗಿ ಆಹ್ವಾನಿಸಿದ ಪ್ರಧಾನಿ ಮೋದಿ

ವಿಭಿನ್ನ ರಾಜತಾಂತ್ರಿಕ ನಡೆಗಳ ಮೂಲಕ ಸುದ್ದಿ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಈ ಹಾದಿಯಲ್ಲಿ ಇದೀಗ ದೊಡ್ಡದೊಂದು ಸಾಧನೆ ಮಾಡಿದ್ದಾರೆ. ಮುಂಬರುವ ಜನವರಿ 26ರ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗುವಂತೆ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು ಆಹ್ವಾನಿಸಿದ್ದಾರೆ. ಪ್ರಧಾನಿ...

ಭಾರತದೊಂದಿಗೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಲು ಒಬಾಮಾಗೆ ಪಾಕ್ ಪ್ರಧಾನಿ ಮನವಿ

ವಿಶ್ವಸಂಸ್ಥೆಯಲ್ಲಿ ಮುಖಭಂಗ ಎದುರಿಸಿದ್ದರೂ, ಪಾಕಿಸ್ತಾನ ಕಾಶ್ಮೀರ ವಿಷಯದಲ್ಲಿ ಮತ್ತೆ ಕ್ಯಾತೆ ತೆಗೆದಿದೆ. ಅಮೆರಿಕಾ ಮೊರೆ ಹೋಗಿರುವ ಪಾಕ್ ಪ್ರಧಾನಿ ನವಾಜ್ ಷರೀಫ್, ಭಾರತದೊಂದಿಗೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವಂತೆ ಬರಾಕ್ ಒಬಾಮ ಅವರಲ್ಲಿ ಮನವಿ ಮಾಡಿದ್ದಾರೆ. ಬರಾಕ್ ಒಬಾಮ ಅವರ ಭಾರತ ಪ್ರವಾಸದಲ್ಲಿ...

ಟೈಮ್ 2014ನೇ ವರ್ಷದ ವ್ಯಕ್ತಿ ರೇಸ್ ನಲ್ಲಿ ಪ್ರಧಾನಿ ಮೋದಿಯೇ ಎಲ್ಲರಿಗಿಂತ ಮುಂದು!

ಟೈಮ್ ನಿಯತಕಾಲಿಕೆಯ 2014ನೇ ಸಾಲಿನ ವರ್ಷದ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದಿದ್ದಾರೆ. ವಿಶ್ವಾದ್ಯಂತ ಪ್ರಭಾವಿಗಳಾಗಿರುವ ಒಟ್ಟು 50 ಮಂದಿಯನ್ನು ಟೈಮ್ ನಿಯತಕಾಲಿಕೆ ವರ್ಷದ ವ್ಯಕ್ತಿ ಗೌರವಕ್ಕೆ ಆಯ್ಕೆ ಮಾಡಿದೆ. 50 ಮಂದಿಗಳ ಪೈಕಿ ಮುಂದಿನ ತಿಂಗಳು...

ಮೋದಿ ಸ್ಪಷ್ಟ ಗುರಿ ಹೊಂದಿರುವ ನಾಯಕ: ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಹೊಗಳಿದ್ದು ಸ್ಪಷ್ಟ ಗುರಿ ಹೊಂದಿರುವ ನಾಯಕ ಪ್ರಧಾನಿ ಮೋದಿ ಎಂದು ಹೇಳಿದ್ದಾರೆ. ಟಿ.ಎಫ್.ಟಿ ಒಪ್ಪಂದಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಬಗೆಹರಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರನ್ನು ಹೊಗಳಿರುವ ಕೆಮರೂನ್, ಮೋದಿ ಅಭಿವೃದ್ಧಿ...

ಟ್ವಿಟರ್‌ನಲ್ಲಿ 8 ಮಿಲಿಯನ್ ಅನುಯಾಯಿಗಳನ್ನು ಹೊಂದಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ 8 ಮಿಲಿಯನ್ ಅನುಯಾಯಿ(ಫಾಲೋವರ್ಸ್)ಗಳನ್ನು ಹೊಂದಿದ್ದಾರೆ. ನರೇಂದ್ರ ಮೋದಿ ಅವರ ವೈಯಕ್ತಿಕ ಹಾಗೂ ಖಾಸಗಿ ಟ್ವೀಟರ್‌ನ ಮೂಲಕ ಜನತೆಯನ್ನು ಸಂಪರ್ಕ ಮಾಡುತ್ತಿದ್ದಾರೆ. ಆದರೆ ಅಧಿಕೃತ ಟ್ವಿಟರ್ ಖಾತೆಯಲ್ಲಿ 8 ಮಿಲಿಯನ್ ಅನುಯಾಯಿಗಳನ್ನು ಮೋದಿ ಹೊಂದಿದ್ದಾರೆ. ಮೋದಿ ಪ್ರಧಾನಿಯಾಗುತ್ತಿದ್ದಂತೆ, ಮೋದಿ...

ಡಬ್ಲ್ಯೂಟಿಒ ಒಪ್ಪಂದ: ಭಾರತಕ್ಕೆ ಶರಣಾದ ಒಬಾಮರಿಂದ ಮೋದಿ ಗುಣಗಾನ

ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)ಯ ವ್ಯಾಪಾರ ಸೌಲಭ್ಯ ಒಪ್ಪಂದದ (ಟಿಎಫ್‌ಎ)ವಿಚಾರದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಇದ್ದ ಭಿನ್ನಾಭಿಪ್ರಾಯ ಪರಿಹರಿಸಲು ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಕೊಂಡಾಡಿದ್ದಾರೆ. ಆಹಾರ ಭದ್ರತೆ ವಿಚಾರ ಮುಂದಿಟ್ಟ...

ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಿ ಮೋದಿ ಕರೆಗೆ 50 ರಾಷ್ಟ್ರಗಳ ಬೆಂಬಲ

ಪ್ರಧಾನಿ ನರೇಂದ್ರ ಮೋದಿ ಅವರು ಯು.ಎನ್.ಜಿ.ಎ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕರೆಗೆ ವಿಶ್ವದ ಅನೇಕ ದೇಶಗಳ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ಜಪಾನ್, ಅಮೆರಿಕಾ, ಕೆನಡಾ, ಚೀನಾ ಸೇರಿದಂತೆ ವಿಶ್ವದ ಸುಮಾರು 50 ದೇಶಗಳು ಜೂ.21ರಂದು ವಿಶ್ವ ಯೋಗ...

ಪ್ರಧಾನಿ ಮೋದಿ-ಒಬಾಮ ಭೇಟಿ: ಸ್ಮಾರ್ಟ್ ಸಿಟಿಗೆ ನೆರವು

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಇದೀಗ ಅಮೆರಿಕಾ ಕೂಡ ನೆರವು ನೀಡಲಿದೆ. ಅಲಹಾಬಾದ್, ಅಜ್ಮೀರ್ ಮತ್ತು ವಿಶಾಖಪಟ್ಟಣಂ ನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಅಮೆರಿಕಾ ಸಹಾಯ ನೀಡಲಿದೆ. ಶ್ವೇತಭವನದಲ್ಲಿ ಸೆ.30ರಂದು ಸುಮಾರು 90 ನಿಮಿಷಗಳ ಕಾಲ ಭಾರತ ಪ್ರಧಾನಿ...

ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಧಾನಿ ಮೋದಿ-ಒಬಾಮ ಜಂಟಿ ಸಂಪಾದಕೀಯ

ಭಾರತ-ಅಮೆರಿಕ ಸಂಬಂಧ ದೃಢ-ವಿಶ್ವಾಸಾರ್ಹ ಮತ್ತು ನಿರಂತರದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನಲೆಯಲ್ಲಿ, ಉಭಯ ನಾಯಕರ ಜಂಟಿ ಸಂಪಾದಕೀಯ ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟಗೊಂಡಿದ್ದು, ಭಾರತದಲ್ಲಿನ ಹೊಸ ಸರ್ಕಾರ...

ಅಮೆರಿಕಾ ಕಂಪನಿಗಳ ಜತೆ ಪ್ರಧಾನಿ ಮೋದಿ ಸಭೆ

ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾದ ಪ್ರಮುಖ 11 ಕಂಪನಿಗಳ ಸಿಇಒಗಳ ಜತೆ ಸಭೆ ನಡೆಸಿದ್ದಾರೆ. ಭಾರತದ ಮೂಲಸೌಕರ್ಯ ಅಭಿವೃದ್ಧಿಗಾಗಿ ಹೂಡಿಕೆ ಮಾಡಿ, ಅದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಜೀವನ ಗುಣಮಟ್ಟ ಹೆಚ್ಚುತ್ತದೆ ಎಂದು ಕಂಪನಿಗಳ ಮನವೊಲಿಕೆ ಯತ್ನ ನಡೆಸಿದರು. ಮೋದಿ ಜತೆ ಸಭೆಯಲ್ಲಿ...

ಅಮೆರಿಕದಲ್ಲಿ ಮೋದಿ: ಗಾಂಧಿ ಪ್ರತಿಮೆಗೆ ಪ್ರಧಾನಿ ಪುಷ್ಪ ನಮನ

ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸಕ್ಕೆ ಇಂದು ತೆರೆ ಬೀಳಲಿದ್ದು, ವಾಷಿಂಗ್ಟನ್ ಡಿಸಿಯಲ್ಲಿನ ಗಾಂಧಿ ಪ್ರತಿಮೆಗೆ ಪ್ರಧಾನಿ ಪುಷ್ಪ ನಮನ ಸಲ್ಲಿಸಿದರು. ವಾಷಿಂಗ್ಟನ್ ಡಿಸಿಯಲ್ಲಿರುವ ಗಾಂಧಿ ಮೆಮೋರಿಯಲ್ ಹಾಲ್ ಗೆ ಆಗಮಿಸಿದ ಪ್ರಧಾನಿ ಮೋದಿ ಮಹಾತ್ಮಾ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು....

ಪ್ರಧಾನಿ ಮೋದಿಗೆ ಒಬಾಮ ಔತಣಕೂಟ

5 ದಿನಗಳ ಅಮೆರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಖಾಸಗಿ ಔತಣಕೂಟ ಆಯೋಜಿಸಿದ್ದಾರೆ. ಸೆ.29ರಂದು ಸಂಜೆ ಅಂದರೆ ಭಾರತೀಯ ಕಾಲಮಾನದ ಪ್ರಕಾರ ಸೆ.30ರಂದು ನಸುಕಿನಜಾವ ಔತಣಕೂಟ ಆಯೋಜಿಸಿದ್ದು, ಈ ವೇಳೆ ಉಭಯ ನಾಯಕರು ಲೋಕಾಭಿರಾಮವಾಗಿ ಮಾತುಕತೆ...

ಅಮೆರಿಕಾ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ 5 ದಿನಗಳ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದಾರೆ. ದೆಹಲಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಪ್ರಧಾನಿ ಮೋದಿ ತಮ್ಮ ಪ್ರವಾಸ ಆರಂಭಿಸಿದ್ದಾರೆ. ಐದು ದಿನಗಳ ತಮ್ಮ...

ಒಬಾಮ ಔತಣಕೂಟದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲ್ಲ

ಸೆ.27ರಿಂದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ ಅಧ್ಯಕ್ಷ ಬರಾಕ್ ಒಬಾಮ ಅವರ ಔತಣಕೂಟದಲ್ಲಿ ಮೋದಿ ಭಾಗವಹಿಸುವುದಿಲ್ಲ. ನವರಾತ್ರಿ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬರಾಕ್ ಒಬಾಮ ಅವರ ಔತಣಕೂಟದಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿದುಬಂದಿದೆ. ಸೆ.25ರಿಂದ ಅ.4ರವರೆಗೆ ನವರಾತ್ರಿ ಆಚರಣೆಯಿರುವುದರಿಂದ ಕಳೆದ...

ಐಸಿಸ್ ಉಗ್ರರನ್ನು ಮಟ್ಟಹಾಕುವುದಾಗಿ ಒಬಾಮ ಎಚ್ಚರಿಕೆ

ಅಮೆರಿಕದ ಇಬ್ಬರು ಪತ್ರಕರ್ತರನ್ನು ಹತ್ಯೆಗೈದ ಐಸಿಸ್ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಕ್ರೋಶಗೊಂಡಿದ್ದು, ಐಸಿಸ್ ಉಗ್ರರ ಹುಟ್ಟಡಗಿಸುವುದಾಗಿ ಕಿಡಿಕಾರಿದ್ದಾರೆ. ಐಸಿಸ್ ಉಗ್ರರ ಮಟ್ಟಹಾಕಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಮಧ್ಯಪ್ರಾಚ್ಯದಲ್ಲಿ ಒಂದು ಶಕ್ತಿಯೇ ಅಲ್ಲ ಎನ್ನುವವರೆಗೂ ಅಮೆರಿಕ ಹೋರಾಟ ನಡೆಸಲಿದೆ...

ನೆಚ್ಚಿನ ಪ್ರಧಾನಿಗೆ ಅದ್ದೂರಿ ಸ್ವಾಗತ ನೀಡಲು ಅಮೆರಿಕದಲ್ಲಿ ಭರದ ಸಿದ್ಧತೆ

'ಪ್ರಧಾನಿ'ಯಾದ ಬಳಿಕ ಪ್ರಥಮ ಬಾರಿಗೆ ಅಮೆರಿಕಗೆ ಭೇಟಿ ನೀಡಲಿರುವ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲು ಅಲ್ಲಿ ನೆಲೆಸಿರುವ ಭಾರತ ಸಂಜಾತ ಪ್ರಜೆಗಳು ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ತುದಿಗಾಲಲ್ಲಿ ನಿಂತಿದ್ದು ಸಕಲ...

ಉಗ್ರರ ಬೆದರಿಕೆ ಹಿನ್ನಲೆ: ಪ್ರಧಾನಿ ಮೋದಿ ಪ್ರಯಾಣಕ್ಕೆ 2 ರಸ್ತೆ ವ್ಯವಸ್ಥೆ

ಉಗ್ರರಿಂದ ಜೀವ ಬೆದರಿಕೆಯಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣಕ್ಕೆ ಡಬ್ಬಲ್ ಟ್ರ್ಯಾಕ್ ಮಾದರಿ ವ್ಯವಸ್ಥೆಗೆ ಎಸ್.ಪಿ.ಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ನಿರ್ಧರಿಸಿದೆ. ಉಗ್ರರಿಂದ ಜೀವ ಬೆದರಿಕೆಯಿರುವ ನಾಯಕರು ರಸ್ತೆ ಮೇಲೆ ಪ್ರಯಾಣ ಮಾಡುವಾಗ ಅವರಿಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಅವರು ಎಲ್ಲಿಗೆ...

ಅಮೆರಿಕದವರನ್ನು ರಕ್ತದ ಮಡುವಿನಲ್ಲಿ ಮುಳುಗಿಸುತ್ತೇವೆ-ಐ.ಎಸ್.ಐ.ಎಸ್ ಸಂದೇಶ

'ಇರಾಕ್' ಉಗ್ರ ಸಂಘಟನೆ ಐ.ಎಸ್.ಐ.ಎಸ್ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕದವರ ಮೇಲೆ ಯಾವುದೇ ಪ್ರದೇಶದಲ್ಲಿ ದಾಳಿ ನಡೆಸುವುದಾಗಿ ಐ.ಎಸ್.ಐ.ಎಸ್ ಎಚ್ಚರಿಕೆ ನೀಡಿದೆ. ಐ.ಎಸ್.ಐ.ಎಸ್ ಮೇಲೆ ಮಿಲಿಟರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಇತ್ತೀಚೆಗಷ್ಟೇ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ...

ಇರಾಖ್ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಲು ಯುಎಸ್ ಸೇನೆಗೆ ಒಬಾಮ ಸೂಚನೆ

ಉತ್ತರ ಇರಾಖ್ ನಲ್ಲಿ ಉಗ್ರರ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ನೆಲೆಸಿರುವ ಅಮೆರಿಕಾ ನಾಗರಿಕರನ್ನು ಸುರಕ್ಷತೆಗಾಗಿ ಅಗತ್ಯಬಿದ್ದರೆ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿ ಎಂದು ಅಮೆರಿಕಾ ಸೇನೆಗೆ ಬರಾಕ್ ಒಬಾಮ ಆದೇಶಿಸಿದ್ದಾರೆ. ಇರಾಖ್ ನಲ್ಲಿ ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿರುವ ಧಾರ್ಮಿಕ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited