Untitled Document
Sign Up | Login    
Dynamic website and Portals
  
December 14, 2014

ಬರಾಕ್ ಒಬಾಮ ಭಾರತ ಭೇಟಿ ಖಚಿತ

ಬರಾಕ್ ಒಬಾಮ ಬರಾಕ್ ಒಬಾಮ

ವಾಷಿಂಗ್ಟನ್ : ರಷ್ಯಾ-ಭಾರತ ಒಪ್ಪಂದದ ಬಗ್ಗೆ ಅಸಮಾಧಾನವಾಗಿದೆ ನಿಜ, ಆದರೆ ಅಧ್ಯಕ್ಷ ಒಬಾಮ ಭಾರತ ಭೇಟಿಯಲ್ಲಿ ಬದಲಾವಣೆ ಇಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ರಷ್ಯಾ ಜತೆಗಿನ ಬಾಂಧವ್ಯವನ್ನು ಮುಂದುವರಿಸುವುದಾಗಿ ಭಾರತ ಹೇಳಿರುವುದು ಅಮೆರಿಕಕ್ಕೆ ಅಸಮಾಧಾನ ತಂದಿದೆಯಾದರೂ ಭಾರತದೊಂದಿಗಿನ ಸಂಬಂಧವನ್ನು ಮುರಿದುಕೊಳ್ಳಲು ಅಮೆರಿಕಾಗೆ ಮನಸ್ಸಿಲ್ಲ. ಈ ನಿಟ್ಟಿನಲ್ಲಿ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡುವುದು ಖಚಿತ ಎಂದು ಅಮೆರಿಕ ತಿಳಿಸಿದೆ.


ಇತ್ತೀಚಿಗೆಷ್ಟೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಭಾರತದೊಂದಿಗೆ ತೈಲ, ರಕ್ಷಣೆ, ಪರಮಾಣು ಶಕ್ತಿ ಸೇರಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಉಕ್ರೇನ್ ವಿಚಾರವನ್ನು ಮುಂದಿಟ್ಟುರೊಡು ಅಮೆರಿಕ, ಐರೋಪ್ಯ ಒಕ್ಕೂಟವು ಈಗಾಗಲೇ ರಷ್ಯಾಗೆ ನಿರ್ಬಂಧ ಹೇರಿವೆ. ಪರಿಸ್ಥಿತಿ ಹೀಗಿರುವಾಗ ಭಾರತವು ರಷ್ಯಾ ಜತೆ ಉತ್ತಮ ಸಂಬಂಧ ಕಾಯ್ದುಕೊಂಡಿರುವುದು ಅಮೆರಿಕಕ್ಕೆ ಅಸಮಾಧಾನ ಮೂಡಿಸಿದೆ.

ಜ.25, 26ರಂದು ಭಾರತ ಪ್ರವಾಸ ಕೈಗೊಳ್ಳುವ ವೇಳೆ ಬರಾಕ್ ಒಬಾಮ ಜಗತ್ ಪ್ರಸಿದ್ಧ ತಾಜ್ ಮಹಲ್‌ಗೂ ಭೇಟಿ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಅವರು ಐಟಿಐ ಮೌರ್ಯ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇದೆ. ಮತ್ತೊಂದೆಡೆ ಒಬಾಮ ಜತೆಗೆ ಪತ್ನಿ ಮಿಷಲ್ ಕೂಡಾ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆಯೇ ಎಂಬ ವಿಚಾರ ಇನ್ನೂ ಖಚಿತವಾಗಿಲ್ಲ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited