Untitled Document
Sign Up | Login    
Dynamic website and Portals
  
January 27, 2015

ಭಾರತ-ಅಮೆರಿಕ ಸಂಬಂಧ ಕೇವಲ ತೋರಿಕೆಗಷ್ಟೇ: ಚೀನಾ ಪತ್ರಿಕೆ ಲೇವಡಿ

ಬರಾಕ್ ಒಮಾಮ-ನರೇಂದ್ರ ಮೋದಿ ಬರಾಕ್ ಒಮಾಮ-ನರೇಂದ್ರ ಮೋದಿ

ಬೀಜಿಂಗ್ : ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ತೋರಿಕೆಯಾಗಿದ್ದು, ಅದರಲ್ಲಿ ಹುರುಳಿಲ್ಲ ಎಂದು ಚೀನಾಕ್ಸಿನ್ ಹುವಾ ನ್ಯೂಸ್ ಏಜೆನ್ಸಿ ಲೇವಡಿ ಮಾಡಿದೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಭೇಟಿ ಎರಡು ದೇಶಗಳ ನಡುವಿನ ಹುಸಿ ಸಂಬಂಧದ ಸಂಕೇತವಾಗಿದೆ ಎಂದು ಅದು ವ್ಯಂಗ್ಯವಾಡಿದೆ.

ಭಾರತ ಮತ್ತು ಅಮೆರಿಕ ನಡುವಿನ ಅಣು ಒಪ್ಪಂದಕ್ಕೆ ಸಹಿಹಾಕಲಾಗಿದ್ದು, ಅಮೆರಿಕನ್ ಕಂಪನಿಗಳು ಭಾರತಕ್ಕೆ ನಾಗರಿಕ ಪರಮಾಣು ತಂತ್ರಜ್ಞಾನವನ್ನು ಸರಬರಾಜು ಮಾಡಲಿದೆ ಎಂದು ಭಾರತ ಮತ್ತು ಅಮೆರಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಲಾಗಿತ್ತು.

ಒಬಾಮಾ ಭೇಟಿಯಿಂದ ಭಾರತಕ್ಕೆ ವ್ಯವಹಾರಿಕವಾಗಿ ಲಾಭವಾಗಿದೆ. ಎರಡೂ ದೇಶಗಳ ಹವಾಮಾನ ವೈಪರೀತ್ಯ, ಕೃಷಿಯಲ್ಲಿ ಭಾರೀ ವ್ಯತ್ಯಾಸಗಳಿವೆ. ಇದೀಗ ಉಭಯ ದೇಶಗಳು ಸ್ನೇಹ ಹಸ್ತ ಚಾಚಿರೋದು ವೈಚಿತ್ರ್ಯವಾಗಿದೆ ಎಂದು ಕ್ಸಿನ್ ಹುವಾ ಆರೋಪಿಸಿದೆ.

ಅಷ್ಟೇ ಅಲ್ಲ ಎರಡು ದೇಶಗಳ ಒಪ್ಪಂದ ಚೀನಾದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದ್ದು, ಅಮೆರಿಕ ಮತ್ತು ಭಾರತ ನಡುವಿನ ರಾಯಭಾರಿ ವಿವಾದವನ್ನು ಕೆದಕಿ ಹೇಳುವ ಮೂಲಕ ಭಾರತ ಮತ್ತು ಅಮೆರಿಕ ನಡುವಿನ ಸ್ನೇಹ ತೋರಿಕೆಯದ್ದಾಗಿದೆ ಎಂದು ವರದಿ ಮಾಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited