Untitled Document
Sign Up | Login    
Dynamic website and Portals
  
January 22, 2015

ಒಬಾಮಾ ಭೇಟಿಯ ನಿತ್ಯದ ಖರ್ಚು 900 ಕೋಟಿ ರೂ

ಬರಾಕ್ ಒಬಾಮಾ ಬರಾಕ್ ಒಬಾಮಾ

ನವದೆಹಲಿ : ಭಾರತಕ್ಕೆ 3 ದಿನಗಳ ಭೇಟಿಗಾಗಿ ಜ.25ರಂದು ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ವಿದೇಶ ಪ್ರವಾಸದ ನಿತ್ಯದ ಖರ್ಚು 900 ಕೋಟಿ ರೂಪಾಯಿ.

ಒಬಾಮಾ ವಿದೇಶ ಪ್ರವಾಸವೆಂದರೆ ಅದು ಸಾಮಾನ್ಯವಲ್ಲ. ಅವರ ಜತೆ ನೂರಾರು ಭದ್ರತಾ ಸಿಬ್ಬಂದಿ, ಅಧಿಕಾರಿಗಳ ತಂಡ, ವಾಹನಗಳು, ವಿಮಾನ, ಸಾಮಾನು -ಸರಂಜಾಮುಗಳನ್ನು ಕರೆತರಲಾಗುತ್ತದೆ. ಅದಕ್ಕೆಂದೇ ಇಷ್ಟೊಂದು ಖರ್ಚು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷರ ಈ ಭೇಟಿಯ ವೇಳೆ,ಆ ದೇಶದ 500 ರಹಸ್ಯ ಸೇವಾ (ರಕ್ಷಣಾ) ಸಿಬ್ಬಂದಿ ಕಾರ್ಯತತ್ಪರರಾಗಿರುತ್ತಾರೆ. ಭೇಟಿಗಿಂತ 1 ವಾರ ಮೊದಲೇ ನೂರಾರು ಭದ್ರತಾ ಸಿಬ್ಬಂದಿ ದಿಲ್ಲಿಗೆ ಆಗಮಿಸಿ ತಪಾ ಸಣೆಯಲ್ಲಿ ತೊಡಗಿದ್ದಾರೆ. ಇನ್ನು ಶ್ವೇತಭವನದ ಅಧಿಕಾರಿಗಳು, ಸಂಸದರು, ಗಣ್ಯರು ಮತ್ತು ಅಮೆರಿಕ ಪತ್ರಕರ್ತರ ನಿಯೋಗವನ್ನು ಒಬಾಮಾ ಅವರು ತಮ್ಮ ಜತೆ ಕರೆತರುತ್ತಾರೆ. ಎಲ್ಲರೂ ಸೇರಿ ಅಧ್ಯಕ್ಷರ ಜೊತೆ ಪ್ರವಾಸ ಕೈಗೊಳ್ಳುವವರ ಸಂಖ್ಯೆ 2000 ದಿಂದ 2500 ವರೆಗೂ ಇರುತ್ತದೆ.

ಒಬಾಮಾ ಅವರು ಬರುವ ಏರ್‌ಫೋರ್ಸ್‌-1 ವಿಮಾನ 1 ಗಂಟೆ ಬಳಸಿದರೆ ಆಗುವ ಖರ್ಚು 1,00,219 ಡಾಲರ್‌ ಅಂದರೆ ಸುಮಾರು 63 ಲಕ್ಷ ರೂಪಾಯಿ.

ಅಮೆರಿಕ ಅಧ್ಯಕ್ಷರ ಅವರ ಕಾರು, ಹೆಲಿ ಕಾಪ್ಟರ್‌, ಭದ್ರತಾ ಸಿಬ್ಬಂದಿ, ಅವರ ಶಸ್ತ್ರಾಸ್ತ್ರಗಳು ಇತ್ಯಾದಿಗಳನ್ನು ಏರ್‌ಫೋರ್ಸ್‌ನ ಸರಕು ಸಾಗಣೆ ವಿಮಾನದಲ್ಲಿ ತರಲಾಗುತ್ತದೆ. ಈ ವಿಮಾನಕ್ಕೆ ಪ್ರತಿ ಗಂಟೆಗೆ ತಗಲುವ ವೆಚ್ಚ 6960 ಡಾಲರ್‌ ಅಂದರೆ ಸುಮಾರು 4.38 ಲಕ್ಷ ರೂಪಾಯಿ.

ಐನೂರು ಮಂದಿ ಅಮೆರಿಕದ ಭದ್ರತಾ ಸಿಬ್ಬಂದಿ, ಶ್ವೇತಭವನ ಅಧಿಕಾರಿಗಳು, ಗಣ್ಯರು, ಪತ್ರಕರ್ತರು ಸೇರಿ 2000 ಜನರ ಊಟ, ವಸತಿ, ಪ್ರಯಾಣ ಖರ್ಚು.

ಅಮೆರಿಕಕ್ಕೆ ಕೆಲ ತಿಂಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಕೈಗೊಂಡಾಗ ಪತ್ರಿಕೆಯೊಂದಕ್ಕೆ ಮೋದಿ ಮತ್ತು ಒಬಾಮಾ ಜಂಟಿ ಸಂಪಾದಕೀಯ ಬರೆದಿದ್ದರು. ಈಗ ಅದೇ ಮಾದರಿಯಲ್ಲಿ ಉಭಯ ನಾಯಕರು ಒಬಾಮಾರ ಭಾರತ ಭೇಟಿ ವೇಳೆ ಜಂಟಿ ರೇಡಿಯೋ ಭಾಷಣ ಮಾಡುವ ನಿರೀಕ್ಷೆಯಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited